ಕಾವ್ಯ ಸಂಗಾತಿ
ಜಯಚಂದ್ರನ್ ಕವಿತೆಗಳು
ಬದುಕಿನೊಳಗಣ ಮೌನ
ಬದುಕು ನನಗೆ ಕೊಟ್ಟಿದ್ದು ಮೌನ
ಯಾತನೆಯ
ಶೂನ್ಯ
ಧ್ವನಿಯಿಂದ ವಂಚಿತನಾದ
ನನಗೆ
ಇರುವುದೊಂದೇ ದಿಕ್ಕು
ತಿಳಿಯದ
ಸುತ್ತು ಹಾಕಿದ,
ನಾನೇ ಕಟ್ಟಿಕೊಂಡ ಬಂಧನದ ಕಾಡು
ಕಾಡುವ ಮೌನ
ಕಳೆದ ಕ್ಷಣಗಳೊಳಗಣ ದರಿದ್ರ ಮೌನವನ್ನು,
ಈ ಸ್ತಬ್ಧ ಶಬ್ದಗಳಲ್ಲಿರಿಸಿ ಅನಿವಾರ್ಯ ದುರಂತಕ್ಕಿಳಿಸಿದ್ದೆನೆ.
ಕ್ಷಮಿಸು,
ಬೇರೆ ದಾರಿಯಿಲ್ಲ.ಯಾಕೆಂದರೆ
ಬದುಕು ದುರ್ಬರವಾಗಿದೆಯಲ್ಲ ?
…….
ಹರವು
ಜೀವ ಸ್ಪರ್ಶದ ಬೆಳಕಿನಲಿ
ಬೆಳಗಿಹುದು ಅರಿವು .
ಹುಟ್ಟು ಸಾವುಗಳ ನಡುವೆ
ಹುದುಗಿಹುದು
ಅರಿವಿನಾ ಹರವು
……..
ಆಂತರ್ಯ
ಕಾಲಗರ್ಭದಲಿ
ಅಂತರ್ ಪಿಶಾಚಿ
ನಾನಾದೆ.
ರಹಸ್ಯ ತಿಳಿಯಲೆಂದು
ಹೊರಟ ನನಗೆ
ತಿಳಿಯಲಿಲ್ಲ--
ಪರಮಾರ್ಥದ ಬೇಲಿ.
-------------------------------------------
Super sir
ಚಂದದ ಸಾಲುಗಳು
ಧನ್ಯವಾದಗಳು