ಕಾವ್ಯ ಸಂಗಾತಿ
ಹನಿಂದು
ಇರಲಿ
ಬದುಕಿನ ಬಣ್ಣದ ಅಳತೆಯ ಮಾಡಲು
ಬೇಡನು ಬೇಡ ನೋವನು ತರಲು
ಬಿಕ್ಷುಕ ಕೂಡಾ ಮಲಗಲು ನಿದ್ದೆ
ಬದುಕಿನ ಸುಳಿಯಲಿ ಏತಕೆ ಬಿದ್ದೆ?
ನ್ಯಾಯವು ಇಲ್ಲಿ ದೇವನ ಇಚ್ಛೆ
ಎಲ್ಲವ ಪಡೆಯಲು ಕಟ್ಟುವ ಕಚ್ಚೆ
ಪಡೆವ ನೀಡುವ ಮೂರ್ತಿಯ ಕಾಣೆ
ಒಳವ ಬಾಳಿಗೆ ಕರಗುವೆ ನನ್ನಾಣೆ
ವಿಲವಿಲ ಜೀವನ ಬಾರದೆ ನೆಮ್ಮದಿ
ಕಲರವ ಇರದೆ ಇರಲದು ಬೇಗುದಿ
ಮಳೆಹನಿ ಬೀಳಲು ಧರೆಗದು ಖುಷಿಯು
ಕಲೆಗಳು ಬಾಳಿಗೆ ತರುವುದು ಹರುಷವು
ಏನೇ ಬರಲಿ ಆಲೋಚನೆ ಎತ್ತರವಿರಲಿ
ಸುಖ ದುಃಖಗಳ ಸಾಮಾನ್ಯ ಬದುಕಲಿ
ನಿಂತಲ್ಲಿ ನಿಲ್ಲದೆ ದುಡಿಯುತಲಿರಲು
ಬರಲಿದೆ ಬಾಳಿಗೆ ತಂಪಿನ ನೆರಳು..
——————————————