ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಅಬಲೆಯರು

ಸತಿಗೆ ವಂಚಿಸಿ
ಸವತಿಯನ್ನು
ಶಿರದ ದಲ್ಲಿಟ್ಟ
ಶಿವ

ಸಾವಿರಾರು
ಸಖಿಯರನ್ನು
ಹೊಂದಿದ
ಕೃಷ್ಣ

ಮಗಳನ್ನೇ
ಮೋಹಿಸಿದ
ಬ್ರಹ್ಮ

ಅನುಮಾನದ
ಸೆಳವಿಗೆ ಸಿಕ್ಕು
ಮಾತೆ ಸೀತೆ ಯನ್ನೇ
ಕಾಡಿಗಟ್ಟಿದ ಶ್ರೀರಾಮ

ಧರ್ಮಾಧಾರಕೆ
ಜೋತುಬಿದ್ದು
ದ್ರೌಪದಿಯನ್ನೇ
ಅಡವಿಟ್ಟು ಸೋತ
ಧರ್ಮರಾಜ

ಮರೆವಿನ ನೆಪವೊಡ್ಡಿ
ಶಕುಂತಲೆಯನ್ನೇ
ಮರೆತಿದ್ದ
ದುಷ್ಯಂತ ರಾಜ

ಮಗಳು
ಮಾಧವಿ ಯನ್ನೇ
ಕಾಣಿಕೆ ಕೊಟ್ಟ
ಮಹಾರಾಜ
ಯಯಾತಿ

ಗಂದರ್ವ ವಿಧಿಯಲ್ಲಿ
ಮದುವೆಯಾದ
ಚಿತ್ರಾಂಗದೆಗೆ
ಜಾ…ರಿಣಿ
ಎಂದ ಅರ್ಜುನ

ರೂಪಕ್ಕೆ ಶರಣಾಗಿ
ಅಹಲ್ಯೆಯನ್ನೇ
ಮೋಹಿಸಿ ಕಲ್ಲಾಗುವಂತೆ
ಮಾಡಿದ ಇಂದ್ರ

ಗೆಳತಿ..
ಇವರೆಲ್ಲರೂ
ಮಹಾನುಭಾವರೇ !!
ಪೂಜಾರ್ಹರೇ !!!

ನಮ್ಮನ್ನು
ಸಬಲೆಯ ರಾಗಲು
ಬಿಡಲೇ ಇಲ್ಲ
ಅಂದಿನಿಂದ
ಇಂದಿನತನಕ

ಅಬಲೆಯ ಹೆಸರು
ಹೆಸರು ಕೊಟ್ಟು !!!!!!

ಕಾರಣ ಅವರು
ಪುರುಷರು !!!


About The Author

1 thought on “ಇಮಾಮ್ ಮದ್ಗಾರ-ಅಬಲೆಯರು”

Leave a Reply

You cannot copy content of this page

Scroll to Top