ಕಾವ್ಯ ಸಂಗಾತಿ
ಗುಣಾಜೆ ರಾಮಚಂದ್ರ ಭಟ್
ಬದುಕು ಕಹಿ
ಪರಿಸರ ಕೆಡಿಸಿದ ನರನಿಗೆ ಕಾದಿದೆ
ದುರಿತವು ಮಾತ್ರ ಬದುಕಿನಲಿ..
ಹಸಿರಿನ ಕಾಡಿನ ಬಸಿರನು ಬಗೆದಿಹ
ನಸುರನು ಮನುಜ ಬಳಲುವನು..
ಬೆಟ್ಟದ ಬುಡದಲಿ ಹುಟ್ಟಿದ ನದಿಯನು
ಕಟ್ಟುತ ತಡೆಯ,ಬಿಗಿದಿಹನು..
ಕೆರೆಗಳ ಮುಚ್ಚುತ ಕೊರೆದನು ಭೂಮಿಯ
ಬರಿದನು ಮಾಡಿ ಜಲ ಸೆಲೆಯ
ನೀರನು ಸೆಳೆಯುವ ದಾರಿಯು ಮರಗಳು
ಬೇರನು ಬಿಡದೆ ಕಡಿದೊಗೆದ..
ಮಲಿನತೆ ತುಂಬಿದ ನೆಲದಲಿಯೆಲ್ಲೆಡೆ
ಜಲವನು ಕೆಡಿಸಿ ಬದುಕು ಕಹಿ..
ಕಾಡನು ಕಡಿಯುತ ನಾಡನು ಸೃಜಿಸುತ
ಪೀಡಕ ಮನುಜ ಬಳಲುವನು
ಪರಿಸರ ಕಾಳಜಿಯ ಆಕರ್ಷಕ ರಚನೆ