ಅಂಕಣ ಸಂಗಾತಿ

ನನ್ನಿಷ್ಟದ ಪುಸ್ತಕ….

ಸುಧಾ ಪಾಟೀಲ

ಬದುಕಲು ಕಲಿಯಿರಿ

ಪುಸ್ತಕದ ಹೆಸರು… ಬದುಕಲು ಕಲಿಯಿರಿ
ಲೇಖಕರು… ಸ್ವಾಮಿ ಜಗದಾತ್ಮಾನಂದ
ಪ್ರಕಾಶಕರು… ವಿವೇಕ ಪ್ರಕಾಶನ
ಸಾಲಿಗ್ರಾಮ… ದಕ್ಷಿಣ ಕನ್ನಡ
ಪುಸ್ತಕದ ಬೆಲೆ…60

ಪುಸ್ತಕ  ಅವಲೋಕನಕ್ಕಿಂತ  ಮುಂಚೆ  ಪುಸ್ತಕಗಳ  ಬಗೆಗೆ  ಒಂದಿಷ್ಟು  ಮಾತುಕತೆ…
ಒಬ್ಬ  ವ್ಯಕ್ತಿಯ ಜೀವನದಲ್ಲಿ  ಪುಸ್ತಕಗಳು  ಮಹತ್ವದ  ಪಾತ್ರವನ್ನು ವಹಿಸುತ್ತವೆ. ಪುಸ್ತಕಗಳು  ವ್ಯಕ್ತಿಯ
ವ್ಯಕ್ತಿತ್ವವನ್ನು  ರೂಪಿಸುತ್ತವೆ. ಮನುಷ್ಯನನ್ನು  ಜ್ಞಾನಿಯನ್ನಾಗಿ ಪಂಡಿತನನ್ನಾಗಿ  ಲೋಕಚಿಂತಕನನ್ನಾಗಿ ಮಾಡುವ ಶಕ್ತಿ,  ಸತ್ವ   ಪುಸ್ತಕಗಳಿಗುಂಟು.

ಚಿಕ್ಕ ವಯಸ್ಸಿನಲ್ಲೇ  ಮಕ್ಕಳಿಗೆ  ಪುಸ್ತಕ ಪ್ರೀತಿ ಮೂಡಿಸಬೇಕು. ಉತ್ತಮ  ಪುಸ್ತಕಗಳು  ಅವರ  ಅತ್ಯುತ್ತಮ  ಮಿತ್ರರು  ಎಂಬುದನ್ನು
ನಿತ್ಯ  ನೆನಪಿಡಬೇಕು. ಮಕ್ಕಳ ಮುಂದಿನ  ಬೆಳವಣಿಗೆಯಲ್ಲಿ  ಪುಸ್ತಕಗಳು  ಸುವರ್ಣ ದಾರಿಯನ್ನೇ
ನಿರ್ಮಿಸುತ್ತವೆ. ಪುಸ್ತಕಗಳೇ ನಮ್ಮ
ಸಂಪತ್ತು, ಅವುಗಳನ್ನು  ಸಂವರಕ್ಷಿಸಿ
ಕಾಪಾಡುವುದು ನಮ್ಮ  ಆದ್ಯ ಕರ್ತವ್ಯ ಎಂಬುದನ್ನು  ಸದಾ ಮರೆಯಬಾರದು.

ಒಳ್ಳೆಯ  ಪುಸ್ತಕದ  ಓದು ಎಂದರೆ , ಬಟ್ಟೆಯನ್ನು  ಸುಗಂಧದ  ಪನ್ನೀರಿನಲ್ಲಿ  ನೆನೆಸಿದಂತೆ. ಬಟ್ಟೆ ಒಣಗಿದರೂ  ಪನ್ನೀರಿನ  ಪರಿಮಳ  ಉಳಿಯುವಂತೆ  ಓದಿದ  ಪುಸ್ತಕದ  ಅಮೃತಸಾರ  ಕೆಲಕಾಲ ಮನದಲ್ಲಿ ಉಳಿಯುವುದು. ಒಂದು ಒಳ್ಳೆಯ ಪುಸ್ತಕದ  ಲಾಭವೇನು  ಎಂಬುದನ್ನು  ಈ  ತತ್ವಜ್ಞಾನಿ ತುಂಬಾ ಅರ್ಥಗರ್ಭಿತವಾಗಿ  ಹೇಳಿದ್ದಾನೆ. ಪುಸ್ತಕಗಳು  ಪರಿಮಳವೀಯಬೇಕು, ಪರಿಮಳದಿಂದ  ಜನರ  ದೃಷ್ಟಿ ಪುಸ್ತಕ  ಸಂಸ್ಕೃತಿಯತ್ತ  ವಾಲುವಂತಾಗಬೇಕು. ಬಗೆ  ಬಗೆಯಾದ , ಬಿಸಿ ಬಿಸಿಯಾದ  ತಿಂಡಿ ತಿನಿಸುಗಳಿಗೆ  ನಮ್ಮ  ಮನಸ್ಸು  ಹಾತೊರೆಯುವಂತೆ  ಉತ್ತಮ ಪುಸ್ತಕಗಳಿಗೂ  ಹಾತೊರೆಯಬೇಕು.

ಎಷ್ಟು  ಪುಸ್ತಕಗಳನ್ನು  ಸಂಗ್ರಹಿಸಿದೆ, ಎಷ್ಟು  ಓದಿದೆ, ಎಷ್ಟು  ಸಮಯ  ಓದಿದೆ  ಎಂಬುದಕ್ಕಿಂತ  ಓದಿದ  ಒಡಲನ್ನು  ಎಷ್ಟು  ಅರಿತೆ  ಎಂಬುದು ಬಹು  ಮುಖ್ಯವಾದದ್ದು
ಆದುದರಿಂದ  ಓದಿದ  ಒಡಲಿನ  ಜೊತೆಗೆ  ಅದನ್ನು  ಹೇಗೆ  ಇತರರಿಗೆ ಅಭಿವ್ಯಕ್ತಿಗೊಳಿಸಿದೆ  ಎಂಬುದೂ  ಪ್ರಧಾನ  ಅಂಶ  ಎಂದು ಸರ್ವಜ್ಞ  ತನ್ನ  ತ್ರಿಪದಿಯಲ್ಲಿ  ಹೇಳಿದ್ದಾನೆ.

ಅದೆಷ್ಟು  ಜನ  ಬಾಲ್ಯದಲ್ಲಿಯೇ ಪುಸ್ತಕಗಳಿಂದ  ಪ್ರಭಾವಿತರಾಗಿ  ಬೆಳೆದು , ದೊಡ್ಡವರಾಗಿ  ಲೋಕಕ್ಕೆ ಬೆಳಕಾದರು  ಎಂಬುದನ್ನು ನೆನೆದಾಗ  ವ್ಯಕ್ತಿಯ ಜೀವನದಲ್ಲಿ  ಪುಸ್ತಕಗಳಿಗಿಂತ  ಬೇರೆ  ಏನು ಬೇಕಾಗಿದೆ  ಎಂದು  ಪ್ರಶ್ನಿಸುವ0ತಾಗಿದೆ. ಮಹಾತ್ಮ ಗಾಂಧಿ , ಜವಾಹರಲಾಲ್  ನೆಹರು, ಡಾ ||  ಬಿ. ಆರ್. ಅಂಬೇಡ್ಕರ್ , ಡಾ || ವಿ. ಕೆ . ಗೋಕಾಕ್, ಡಾ || ಹಾ. ಮಾ. ನಾಯಕ್ , ಡಾ || ಸಿ. ಪಿ. ಕೆ  ಅವರ  ಎತ್ತರದ  ವ್ಯಕ್ತಿತ್ವದಲ್ಲಿ  ಪುಸ್ತಕಗಳ  ಪಾತ್ರ ಬಹು  ದೊಡ್ಡದು

ಮನುಷ್ಯ  ತನ್ನ  ಮಕ್ಕಳಿಗೆ  ಏನನ್ನಾದರೂ  ಬಿಟ್ಟು  ಹೋಗುವುದಿದ್ದರೆ  ಬ್ಯಾಂಕಿನ ಠೇವಣಿಯನ್ನಲ್ಲ, ಒಳ್ಳೆಯ ಪುಸ್ತಕಗಳಿಂದ  ತುಂಬಿದ  ಮನೆಯ ಗ್ರಂಥಾಲಯವನ್ನು  ಬಿಟ್ಟು  ಹೋಗಬೇಕು. ಅದರಲ್ಲಿ  ಮನುಷ್ಯನಿಗೆ  ಬೇಕಾದುದೆಲ್ಲವೂ  ಇರುತ್ತದೆ. ಪಾಟೀಲ್  ಪುಟ್ಟಪ್ಪನವರ  ಈ  ಸಂದೇಶ  ಎಲ್ಲರ  ಮನದ  ಕದವನ್ನು ತೆಗೆಯುವ0ಥ  ಸಂದೇಶವಾಗಿದೆ. ಹಣ  ಹಣ  ಎಂದು ಬಡಬಡಿಸುತ್ತಿರುವ  ಮನುಷ್ಯ , ಆಸ್ತಿ  ಆಸ್ತಿ  ಎಂದು ಹೋರಾಡುತ್ತಿರುವ  ಮನುಷ್ಯನಿಗೆ ಯಾವುದು  ಆಸ್ತಿ, ಹೇಗೆ  ಆಸ್ತಿ ಮಾಡಬೇಕೆಂಬುದರ  ಬಗ್ಗೆ  ನಮ್ಮ ಕಣ್ಣಿನ  ಪೊರೆಯನ್ನು  ಕಳಚಲು ಸಹಕರಿಸುತ್ತದೆ.

ಒಳ್ಕೆಯ  ಆಹಾರ  ಮತ್ತು  ಆರೋಗ್ಯವಿಲ್ಲದೆ  ಹೇಗೆ  ದೇಹವಿಕಾಸ  ಸಾಧ್ಯವಿಲ್ಲವೋ  ಹಾಗೆಯೇ  ಉತ್ತಮ ಪುಸ್ತಕಗಳ  ಒಡನಾಟವಿಲ್ಲದಿದ್ದರೆ  ಜ್ಞಾನವಿಕಾಸ
ಸಾಧ್ಯವಿಲ್ಲ  ಎಂಬುದನ್ನು  ಅರಿಯಬೇಕು. ನಮ್ಮ  ಜೀವನದಲ್ಲಿ ಮೊದಲ  ಹಾಗೂ  ಕೊನೆಯ  ಆದ್ಯತೆಯನ್ನು ಪುಸ್ತಕಗಳಿಗೆ  ಕೊಟ್ಟಾಗಲೇ  ನಾವು ಸುಖವಾಗಿರುವುದು, ಸಂಪತ್ತನ್ನು  ಪಡೆಯುವುದು, ಪುಸ್ತಕಗಳಿಲ್ಲದೆ  ಮನುಷ್ಯ  ಮನುಷ್ಯನಾಗಲಾರ.

ಪುಸ್ತಕಗಳಿಲ್ಲದಿದ್ದರೆ  ದೇವರೇ  ಮೂಕನಾಗಿ  ಬಿಡುತ್ತಾನೆ, ನ್ಯಾಯದೇವತೆ  ನಿದ್ರಿಸುತ್ತಾಳೆ, ವಿಜ್ಞಾನ  ಸ್ಥಗಿತಗೊಳ್ಳುತ್ತದೆ, ತತ್ವಜ್ಞಾನ  ಕುಂಟುತ್ತದೆ , ಸಾಹಿತ್ಯ ಅರ್ಥಹೀನವಾಗುವುದು, ಉಳಿದೆಲ್ಲವೂ  ಅಂಧಕಾರದಲ್ಲಿ  ಅಡಗಿಬಿಡುತ್ತದೆ, ಎಂಬ  ಮಾತು  ಪುಸ್ತಕಗಳ  ಮಹತ್ವವನ್ನು  ಸಾರುತ್ತದೆ. ನನ್ನ  ಮೊದಲ  ಪುಸ್ತಕದ  ಓದು  ನನ್ನ  ಹತ್ತನೆಯ  ವರ್ಷದಲ್ಲಿ  ಮಾತೆ  ಮಹಾದೇವಿ ಅವರ  ” ತರಂಗಿಣಿ ” ಪುಸ್ತಕದೊಂದಿಗೆ  ಶುರುವಾಗಿದೆ  ಎಂದು  ಹೇಳಲು  ಖುಷಿ.

“ಬದುಕಲು  ಕಲಿಯಿರಿ ”  ಭಾಗ  ಒಂದು  ಮತ್ತು  ಭಾಗ  ಎರಡು  ಸೇರಿಸಿ  ಪರಿಷ್ಕೃತ  ಸಂಯುಕ್ತ  ಆವೃತ್ತಿಯು  1987 ರಲ್ಲಿ  ವಿವೇಕ  ಪ್ರಕಾಶನ, ಸಾಲಿಗ್ರಾಮ, ದಕ್ಷಿಣ  ಕನ್ನಡದಲ್ಲಿ  ಪ್ರಕಟಣೆಗೊಂಡಿತು.
ಇದರ  ಲೇಖಕರು  ರಾಮಕೃಷ್ಣಾಶ್ರಮದ  ಸ್ವಾಮಿ  ಜಗದಾತ್ಮಾನಂದ  ಅವರು. ಇದರ  ಮೊದಲನೆಯ  ಭಾಗ  1981  ರಲ್ಲಿ ಮತ್ತು  ಎರಡನೆಯ  ಭಾಗ  1986 ರಲ್ಲಿ  ಪ್ರಕಟಣೆಗೊಂಡಿವೆ. ಈ  ಪುಸ್ತಕ  1988 ರಲ್ಲಿ  ನನ್ನ  ತಂದೆ -ತಾಯಿಯಿಂದ  ಹುಟ್ಟುಹಬ್ಬದ  ಕಾಣಿಕೆಯಾಗಿ  ಪಡೆದದ್ದು.

ಈ  ಪುಸ್ತಕದ  ಮುಖಚಿತ್ರದ  ಸಂದೇಶ  ಅತ್ಯಂತ  ಸಾಂಧರ್ಭಿಕವಾಗಿ  ಸ್ಪೂರ್ಥಿದಾಯಕವಾಗಿ  ಹೊರಹೊಮ್ಮಿದೆ. ಕಷ್ಟಕಾರ್ಪಣ್ಯಗಳ , ಏಳು ಬೀಳುಗಳ  ದುರ್ಗಮ ಜೀವನದಿಂದ  ಮೇಲೆದ್ದು, ಪ್ರಕೃತಿಯ  ನಲಿವಿನ  ನೆಲೆಗಳಾದ  ಹಸಿರು  ಹರವು, ಹೊಮ್ಮುವ ತೊರೆ
ಪ್ರಶಾಂತ  ವಾತಾವರಣ ಹಾಗೂ  ಉಜ್ವಲ  ರವಿಯತ್ತ  ಆಕರ್ಷಿಸಲ್ಪಟ್ಟು , ಗುರುಹಿರಿಯರ, ಸಧ್ಗ್ರಂಥಗಳ  ಹಾಗೂ  ಸಜ್ಜನರ  ನೆರವಿನಿಂದ  ಸನ್ಮಾರ್ಗದಲ್ಲಿ  ಸ್ವಪ್ರಯತ್ನದಿಂದ  ಅಡಿ ಇಟ್ಟು  ಮುನ್ನಡೆದು , ಗಗನವೇ  ಮನೆ  ಎಂಬ  ವಿಶ್ವ  ಭ್ರಾತೃತ್ವ  ಮನೋಭಾವದಿಂದ  ಭೂತ , ವರ್ತಮಾನ  ಹಾಗೂ  ಭವಿಷ್ಯದ  ಸದಾಲೋಚನೆಗಳ  ಬುತ್ತಿಯನ್ನು  ಸವಿಯುತ್ತಾ  ಅನುದಿನವೂ , ಅನುಕ್ಷಣವೂ  ಸತ್ಕರ್ಮ  ಮಾಡುತ್ತಲೇ  ಎಂಥವನೂ  ಈ  ಲೋಕದಲ್ಲಿ  ಸಾರ್ಥಕ ಬಾಳ್ವೆಯನ್ನು ನಡೆಸಬಲ್ಲ. ಇದು ಸತ್ಯ… ಸತ್ಯ  ಎನ್ನುವುದನ್ನು  ಸ್ಪಷ್ಟವಾಗಿ  ಅರುಹಿದ್ದಾರೆ. ಐದು  ಬಾರಿ  ಮರು
ಮುದ್ರಣಗೊಂಡ  ಈ  ಪುಸ್ತಕದ  5000 ಪ್ರತಿಗಳು  ಆಗಿನ  ಕಾಲದಲ್ಲಿ  ಕಡಿಮೆ  ವೇಳೆಯಲ್ಲಿಯೇ ಖರ್ಚಾಗಿ  ಹೋದವು  ಎಂದರೆ  ಆಶ್ಚರ್ಯವಲ್ಲವೆ ?  ಈ  ಪುಸ್ತಕದ  ಬಗೆಗೆ  ಜನರ  ಆಸಕ್ತಿ  ಹೇಗಿತ್ತು ಎನ್ನುವುದು ಇದರಿ0ದ  ಗೊತ್ತಾಗುತ್ತದೆ.

ಹಿಂದೂ  ಧರ್ಮದ  ಪುನರುಥ್ತ್ತಾನವಾಗಬೇಕು , ಹಿಂದೂ  ದೇಶದ  ಪ್ರತಿಯೊಬ್ಬ ಪ್ರಜೆಗೂ  ತನ್ನಲ್ಲಿರುವ  ಆತ್ಮಚೈತನ್ಯದ  ಸಾಕ್ಷಾತ್ಕಾರವಾಗಬೇಕು  ಎಂದು ತಮ್ಮ  ಜೀವಿತ ಕಾಲದಲ್ಲಿ  ಅವಿರತವಾಗಿ  ವೀರವೇದಾ0ತದ ಕಹಳೆಯೂದಿ, ” ಏಳಿ , ಎದ್ದೇಳಿ, ಗುರಿ  ಮುಟ್ಟುವ  ತನಕ  ವಿಶ್ರಮಿಸದಿರಿ  ” ಎಂದು  ಇಂದಿಗೂ  ದೇಹಾತೀತರಾಗಿ  ಬಡಿದೆಬ್ಬಿಸುತ್ತಲೇ ಇರುವ  ಸ್ವಾಮಿ ವಿವೇಕಾನಂದರಿಗೆ  ಈ   ಗ್ರಂಥವು  ಅರ್ಪಿತವಾಗಿದೆ. ಅರ್ಪಣೆಯ  ಸೊಲ್ಲುಗಳನ್ನು  ನೀವು  ಗಮನಿಸಿದರೆ , ವೇದಾಂತಕೇಸರಿಯಾಗಿ, ಧರ್ಮ ಸಮನ್ವಯಕಾರಿ ಅವತಾರಿ ಶ್ರೀ ರಾಮಕೃಷ್ಣರ  ಧೀರ  ಶಿಷ್ಯನಾಗಿ , ನೀತಿಯ  ನೆಲೆಗಟ್ಟನ್ನು ಭದ್ರಪಡಿಸಲು  ಪುರುಷಸಿಂಹರಾಗಿ
ಅವರು  ಹೇಗೆ ಮುನ್ನುಗ್ಗಿದರು, ಇಡೀ  ವಿಶ್ವದಲ್ಲಿ  ಪ್ರಾತ:ಸ್ಮರಣೀಯ ರಾಗಿ, ಹೇಗೆ  ಬಾಳಿದರು ಎಂಬುದು ನಿಮಗೆಲ್ಲ  ತಿಳಿದೇ ಇದೆ.

ಬಾಳು  ಬಾಳುವುದಕ್ಕಾಗಿಯೇ  ಹೊರತು  ಬರಿದೆ  ಬಳಲುವುದಕ್ಕಲ್ಲ
ಬಾಳಿನುದ್ದಕ್ಕೂ  ರೂಪುಗೊಳ್ಳುವ ಆಶೆ  ಆಕಾಂಕ್ಷೆಗಳು  ಮನದಣಿಯೇ
ಅನುಭವಿಸಲಿಕ್ಕಾಗಿ ಇವೆಯೇ  ಹೊರತು , ಬರಿದೆ  ಕಲ್ಪನೆಯ  ಕನಸು  ಕಾಣುವುದಕ್ಕಲ್ಲ. ವ್ಯಕ್ತಿಯೊಬ್ಬನ  ಸರ್ವತೋಮುಖ ಏಳ್ಗೆಯಾಗಿ, ಪರಸ್ಪರ  ಸಹಕಾರ  ಮನೋಭಾವ, ನಿಸ್ವಾರ್ಥ ಪ್ರೀತಿ ಹಾಗೂ  ಕಷ್ಟ ಸಹಿಷ್ಣುತೆಗಳ  ತವರಾಗಿ  ಆತ ನೆರೆಹೊರೆಯ  ಮತ್ತು ಸಮಾಜದ  ಹಿತವನ್ನು ಹೇಗೆ ಸಾಧಿಸಬಹುದು  ಎಂಬುದನ್ನು  ನೇರವಾಗಿ  ತಿಳಿಸಿಕೊಟ್ಟು  ಆದರ್ಶ ಪಥದಲ್ಲಿ  ಬಾಳನೌಕೆಯನ್ನು  ಮುನ್ನಡೆಸುವ  ಈ  ರೀತಿಯ ಗ್ರಂಥ
ಆಗಿನ  ಕಾಲಕ್ಕೆ  ಕನ್ನಡದಲ್ಲಿ ದುರ್ಲಭ ಎನ್ನುವಸ್ಟು ವಿರಳ. ಇಂಥ  ಸನ್ನಿವೇಶದಲ್ಲಿ  ಜನಮನದಲ್ಲಿ  ಸ್ಫೂರ್ತಿಯ  ಕಿಡಿಯನ್ನು  ಹೊತ್ತಿಸಿ, ಬದುಕಿನ  ಭವ್ಯತೆಗೆ  ದಾರಿ  ತೋರಿಸಿ, ಪರಮೋತ್ಕೃಷ್ಟ  ಬಾಳ್ವೆಯ  ಸೂತ್ರ  ಸಾರುವ  ಸಂಗಾತಿಯಾಗಿ ಈ  ಗ್ರಂಥ  ಹೊರಬಂದಿದೆ.

ಒಟ್ಟು  504 ಪುಟಗಳ  ಈ  ಪುಸ್ತಕ  ಎಂಟು  ಅಧ್ಯಾಯಗಳನ್ನು  ಒಳಗೊಂಡಿದೆ.

ಪ್ರಯತ್ನದಿಂದ  ಪರಮಾರ್ಥ
ನಿಮ್ಮಲ್ಲಿದೆ  ಅಪಾರ   ಶಕ್ತಿ
ಚಿಂತೆಯ  ಚಿತೆಯಿಂದ  ಪಾರಾಗಿ
ಪ್ರೀತಿಯ  ಪ್ರಚಂಡ  ಪ್ರಭಾವ
ಬಿತ್ತಿದಂತೆ  ಬೆಳೆ  ಸುಳ್ಳಲ್ಲ
ಅದ್ಭುತಗಳು   ಸಾರುವ   ಸತ್ಯ
ಪ್ರಾರ್ಥನೆಯಿಂದ   ಪರಿವರ್ತನೆ
ದೇವರು , ಧರ್ಮ  ಮತ್ತು  ಆಧುನಿಕ
ಸಂಶಯ

ಪ್ರತಿಯೊಂದು  ಅಧ್ಯಾಯಕ್ಕಿಂತ ಮೊದಲು  ಕನ್ನಡ  ಮತ್ತು  ಇಂಗ್ಲಿಷ್ ಲೇಖಕ  ಮತ್ತು  ಲೇಖಕಿಯರ  ನುಡಿಮುತ್ತುಗಳಿವೆ.

ಮೊದಲನೆಯ  ಅಧ್ಯಾಯದಲ್ಲಿ  ವ್ಯಕ್ತಿಯಲ್ಲ, ಶಕ್ತಿ… ಪ್ರತಿಭೆಯ ಹಿಂದಿದೆ  ಪರಿಶ್ರಮ… ಏಳಿ  ಎದ್ದೇಳಿ… ತಾಳಿದವ  ಬಾಳಿಯಾನು
ಸಹನೆಯಿಂದ  ಸಿದ್ಧಿ.. ಅರ್ಹತೆಗೆ ಒಲಿದ  ಅದೃಷ್ಟ..ಪ್ರಯತ್ನವೇ  ಪರಮ ಪೂಜೆ..ಅಸಾಧ್ಯವೂ  ಸಾಧ್ಯ…
ಆತ್ಮವಿಮರ್ಶೆಯ  ಅಭ್ಯಾಸ..
ಪರಿಸರದ  ಪ್ರಭಾವ.
ಯೋಚನೆಯೇ  ರೂವಾರಿ.. ನಿಮಗೆ
ನೀವೇ.. ನನ್ನ  ಸಮಯ  ಅಮೂಲ್ಯ
ಯೋಗ್ಯತೆಯ  ಅಳತೆಗೋಲು.. ಛಲದಿಂದ  ಬಲ.. ಗುರಿ ಮತ್ತು ದಾರಿ.. ಬಾಳಿಗೊಂದು  ಗುರಿ..
ಬದುಕಿನ  ಸಾರ್ಥಕತೆ…ಯೋಜನೆಯಿಂದ
ಸಾಧನೆ.. ಸಾಮಾನ್ಯನು ಸಮರ್ಥನಾದ… ಇಷ್ಟೆಲ್ಲ  ವಿಷಯಗಳನ್ನು  ಕಥೆ , ಉಪಕಥೆ , ಸನ್ನಿವೇಶ, ಸಂದರ್ಭಗಳ  ಜೊತೆಗೆ  ಪ್ರಯತ್ನವೇ  ಪರಮಾರ್ಥದ  ಕಡೆಗೆ  ದಾರಿ  ಎಂದು ಒತ್ತಿ  ಒತ್ತಿ  ಹೇಳಿದ್ದಾರೆ.

ಎರಡನೆಯ  ಅಧ್ಯಾಯದಲ್ಲಿ  ಕಣ
ಕಣದಲ್ಲೂ  ಶಕ್ತಿ  ಸಾಗರ… ಬಿಂದುವಿನಲ್ಲಿ  ಸಿಂಧು.. ರಹಸ್ಯದ  ಕೀಲಿಕೈ.. ಆಂತರ್ಯದ   ಆಳದಲ್ಲಿ..
ಮನೋಮಂಡಲದ  ವಿಶ್ವರೂಪ..
ಸುಪ್ತಮನದ  ಗುಪ್ತ ನಿಧಿ.. ಶಕ್ತಿಯ  ಸೆಲೆ, ಮುಕ್ತಿಯ  ನೆಲೆ , ಸ್ವವ್ಯಕ್ತಿತ್ವ ಚಿತ್ರ… ಸುಧಾರಣೆಯ  ಸೋಪಾನ
ವಿಕಾಸವಾದ..ಹೀಗೆ   ಹಲವಾರು ವಿಷಯಗಳನ್ನು  ದೃಷ್ಟಾ0ತಗಳ ಜೊತೆ  ಜೊತೆಗೆ  ಎಲ್ಲರೂ  ಸರಳವಾಗಿ   ಅಳವಡಿಸಿಕೊಳ್ಳಬಹುದಾದಂತಹ  ಸೂತ್ರಗಳನ್ನು  ಮತ್ತು  ಎಲ್ಲರಲ್ಲೂ  ಅಪಾರ  ಶಕ್ತಿಯಿದೆ ಎನ್ನುವುದನ್ನು  ಮನದಟ್ಟು  ಮಾಡಿಕೊಟ್ಟಿದ್ದಾರೆ.

ಮೂರನೆಯ  ಅಧ್ಯಾಯದಲ್ಲಿ ಚಿಂತೆ
ಗೊಂದು  ಬೊಂತೆ ಕಟ್ಟಿ…ಉದ್ವೇಗದ  ಉಪಟಳ.. ಮಾನಸಿಕ  ಮೂಲ… ಬಾಂಧವ್ಯದ
ಬೆಸುಗೆ.. ಗೆಲುವಿನ  ಗುಟ್ಟು..ಈ  ಕ್ಷಣ  ಮುಂದಾಗಿ…ತೀರದ  ದುಃಖ
ಕಷ್ಟದ  ಕುಲುಮೆ.. ಭಯದ ಮೂಲ
ಜಾಲ…ಶ್ರದ್ಧೆಯಿಂದ   ಸಿದ್ಧಿ… ಮನಸ್ಸಿಗೊಂದು  ಟಾನಿಕ್.. ಮನೋಬಲವೇ  ಮಹಾಬಲವು.. ಮನಸ್ಸಿನ  ಅಗಾಧ  ಶಕ್ತಿ..ಹೀಗೆ  ವಿವಿಧ  ವಿಷಯಗಳ  ಮೇಲೆ  ಬೆಳಕು  ಚೆಲ್ಲುತ್ತಾ… ಚಿಂತೆಯ  ಕೂಪದಿಂದ  ಹೇಗೆ  ಹೊರಗೆ  ಬಂದು  ಸಹಜ  ಜೀವನ  ನಡೆಸಬೇಕು  ಎನ್ನುವ  ಅಮೂಲ್ಯ  ಸಲಹೆಗಳನ್ನು  ಇಲ್ಲಿ  ಹೇಳಹೊರಟಿದ್ದಾರೆ.

ನಾಲ್ಕನೆಯ   ಅಧ್ಯಾಯದಲ್ಲಿ  ಪ್ರೀತಿ
ಮಾಡುವ  ಮೋಡಿ… ಪ್ರೀತಿಯೇ ಪರಮೌಷಧ… ಹಳೆ  ಬೇರು, ಹೊಸ  ಚಿಗುರು .. ನಲ್ಮೆಯಿಂದ  ನಲಿವು… ಪ್ರೀತಿಯ  ಪವಾಡ.. ಪ್ರೀತಿಯ  ಮಹಿಮೆ.. ಪ್ರೀತಿಯ  ಪ್ರತಿಧ್ವನಿ.. ಒಲವು  ಗೆಲುವು…ಪರಿವರ್ತನೆಯ  ಹರಿಕಾರ…ಹೀಗೆ  ಪ್ರೀತಿಯ  ಬೇರೆ ಬೇರೆ  ಮಜಲುಗಳನ್ನು  ವಿವರಿಸುತ್ತಾ.. ಪ್ರೀತಿಯಿಂದ  ಏನನ್ನು  ಬೇಕಾದರೂ  ಗೆಲ್ಲಬಹುದು ಎನ್ನುವುದನ್ನು  ಅತ್ಯಂತ  ಸ್ಪಷ್ಟವಾಗಿ
ವಿವರಿಸಿದ್ದಾರೆ.

ಐದನೆಯ  ಅಧ್ಯಾಯದಲ್ಲಿ  ನೂತನ  ದೃಷ್ಟಿ ಕೋನ.. ಕರ್ಮದ  ನೆಲೆ -ಬೆಲೆ… ಕಾರ್ಯ -ಕಾರಣಗಳ  ಸಾ0ಗತ್ಯ.. ಮಹಿಮೆಯ  ಮೂಲ..
ಬದುಕು  ಸೇವೆಗಾಗಿ.. ಬೇಡ  ನಿರಾಶಾವಾದ…ಹೀಗೆ  ಬಹಳಷ್ಟು ವಿಷಯಗಳ  ಮೇಲೆ  ಬೆಳಕು  ಚೆಲ್ಲುತ್ತಾ  ನಾವು  ನಮ್ಮ  ಮಕ್ಕಳನ್ನು  ಹುಟ್ಟಿದಾಗಿನಿಂದ  ಹೇಗೆ  ಬೆಳೆಸಬೇಕು..ಬಿತ್ತಿದಂತೆ  ಬೆಳೆ… ಎಂದು  ಹೇಳುತ್ತಾ  ಅದರ ಮಹತ್ವವನ್ನು  ಅರುಹಿದ್ದಾರೆ.

ಆರನೆಯ  ಅಧ್ಯಾಯದಲ್ಲಿ  ಅದ್ಭುತಗಳ   ಯಥಾರ್ಥತೆ … ಸತ್ಯಾ ನ್ವೇಷಣೆಯ  ಮುಕ್ತ ಮಾರ್ಗ.. ವಿಚಿತ್ರವಾದರೂ  ನಿಜ.. ಮರೆತುಹೋದ  ಸತ್ಯ.. ವಿಜ್ಞಾನದ  ಕೊಡುಗೆ…ಅಮೂಲ್ಯ  ನೆರವು..
ಕನಸಲ್ಲ  ನನಸು… ಸಾವಿನ  ಆಚೆಗೆ ಏನು ?  ಹೀಗೆ  ಜೀವನದಲ್ಲಿ  ನಡೆಯುವ  ಅದ್ಭುತಗಳನ್ನು   ಎಲ್ಲರೂ   ಒಪ್ಪುವ  ರೀತಿಯಲ್ಲಿ  ಇಲ್ಲಿ  ಮಂಡಿಸಿದ್ದಾರೆ.

ಏಳನೆಯ  ಅಧ್ಯಾಯದಲ್ಲಿ  ದೇವರಲ್ಲಿ  ಮೊರೆ.. ಪ್ರಾರ್ಥನೆಯ ಪರಿ… ದೀನನಾಗಿ  ಬೇಡು… ಸಂತರು  ನೀಡಿದ  ಸಾಂತ್ವನ..  ಆಂತರ್ಯದ  ಅಳಲು..ನನ್ನನಳಿಸು
ನಿನ್ನ  ಮೆರೆಸು..ಅಂತ:ಶಕ್ತಿಯ  ಆಗರ…ಧ್ಯಾನಕ್ಕೆ  ಪ್ರೇರಕ, ಪೂರಕ
ದಿವ್ಯ  ಆಸ್ವಾದನೆ…ಪ್ರಯತ್ನದಿಂದ  ಫಲ.. ಹೀಗೆ  ಪ್ರಾರ್ಥನೆಯ  ಅಪಾರ  ರೂಪಗಳನ್ನು  ನಮಗೆ  ಕಟ್ಟಿಕೊಟ್ಟಿದ್ದಾರೆ. ಪರಿವರ್ತನೆಯ ಹಾದಿಯಲ್ಲಿ  ನಡೆಯಲು  ಅನುವು ಮಾಡಿಕೊಟ್ಟಿದ್ದಾರೆ.

ಕೊನೆಯ  ಅಧ್ಯಾಯದಲ್ಲಿ  ದೇವರು
ಧರ್ಮ   ಮತ್ತು  ಆಧುನಿಕ  ಸಂಶಯದ  ಅಡಿಯಲ್ಲಿ  ಎಲ್ಲಾ ಪ್ರಶ್ನೆಗಳಿಗೆ  ಸಮರ್ಪಕವಾದ   ಉತ್ತರ ಕೊಡುತ್ತಾ, ಎಲ್ಲರ  ಮನಸುಗಳಿಗೆ
 ಸಮಾಧಾನಕರವಾಗುವಂತೆ   ಮಾಡಿದ್ದಾರೆ.

” ಈಸಬೇಕು, ಈಸಿ  ಜಯಿಸಬೇಕು
ಎನ್ನುವ  ಮನುಷ್ಯನಿಗೆ  ತನ್ನ   ಗುಣಾವಗುಣ , ಇತಿಮಿತಿ, ಬೇಕು ಬೇಡಗಳ  ತಿಳಿವು  ಅತ್ಯಗತ್ಯ. ” ಬದುಕಲು  ಕಲಿಯಿರಿ ” ಆ  ನಿಟ್ಟಿನಲ್ಲಿ  ಎಂಥವನಿಗೂ  ಸಮರ್ಥ
ಮಾರ್ಗದರ್ಶನ  ಮಾಡಿಸುತ್ತದೆ. ಮನದಲ್ಲಿ  ಮಂಡಿಗೆ  ತಿಂದು ಆಕಳಿಸುವ  ಆಲಸಿಗೆ  ಬಾಳು ನಿಶ್ಪ್ರಯೋಜಕವಾದೀತೆ0ಬುದನ್ನು
ತೋರಿಸಿ, ಪ್ರಯತ್ನದಿಂದ  ಪರಮಾರ್ಥ  ಸಾಧ್ಯ  ಎಂದು ಸ್ಪಷ್ಟ
ಪಡಿಸಿ, ಆಂತರ್ಯದಲ್ಲಿರುವ  ಅಪಾರ  ಶಕ್ತಿಯ  ಸೆಲೆಯನ್ನು ಬಿಂಬಿಸಿ, ದಿನಬೆಳಗಾದರೆ  ತಲೆ ತಿನ್ನುವ  ಚಿಂತೆ, ಕ್ರೋಧ, ಭಯ… ಅಷ್ಟೇಕೆ , ಅರಿಷಡ್ವರ್ಗಗಳ  ಮಾರಕ ಶಕ್ತಿಯ  ಚೇತೋಹಾರಿ  ಚಿತ್ರಣವನ್ನು  ಒದಗಿಸಿ, ಪ್ರೀತಿಯ  ಪ್ರಚಂಡ  ಪ್ರಭಾವದಿಂದ  ಬಾಳಿನ ಸಾರ್ಥಕ್ಯದ  ವಿಧಿ ವಿಧಾನಗಳನ್ನು
ಉಲ್ಲೇಖಸಿ, ದೇವರು  ಧರ್ಮಗಳ  ಬಗೆಗಿನ  ಸಂಶಯಗಳನ್ನು  ಪರಿಹರಿಸಿ, ಪ್ರಾರ್ಥನೆಯಿಂದ  ಆಗುವ  ಪರಿವರ್ತನೆಯ ನಾನಾ ಮುಖಗಳನ್ನು   ಚಿತ್ರಿಸಿರುವ  ಈ  ಕೃತಿ ರತ್ನವು, ಜೀವನ-ಕರ್ಮ – ಜನ್ಮ
ವೃತ್ತಾ0ತಗಳ  ವಿವಿಧ  ವಿಸ್ಮಯ ವಿಶೇಷಗಳನ್ನು   ಸಾರ್ವಕಾಲಿಕ  ಸತ್ಯದೋಪಾದಿಯಲ್ಲಿ  ಸುಂದರವಾಗಿ  ನಿರೂಪಿಸಿದೆ, ಸವಿವರವಾಗಿ  ವಿಮರ್ಶಿಸಿದೆ. ಅಂತಿರುವಾಗ  ” ಬದುಕಲು  ಕಲಿಯಿರಿ ” ಬದುಕಿನ  ಭವ್ಯತೆಗೆ ಕೀಲಿಕೈ  ಅಲ್ಲದೆ  ಮತ್ತೇನು ?

ಒಟ್ಟಾರೆ  ಎಲ್ಲರೂ ಓದಲೇಬೇಕಾದ  ನನ್ನ   ಅಚ್ಚುಮೆಚ್ಚಿನ   ಕೃತಿ  ಇದು.

—————————[

ಸುಧಾ ಪಾಟೀಲ್

ಸುಧಾ ಪಾಟೀಲ್ ಅವರು ಮೂಲತಹ ಗದಗ ಜಿಲ್ಲೆಯವರು.ಇವರ ಸಾಹಿತ್ಯದ ಪಯಣಕ್ಕೆ ಇವರ ದೀಕ್ಷಾಗುರುಗಳಾದ ಲಿ. ಡಾ. ಜ.ಚ. ನಿ ಶ್ರೀಗಳೇ ಪ್ರೇರಣೆ.
ಸುಧಾ ಪಾಟೀಲ್ ಅವರ ಲೇಖನಗಳು.. ಕವನಗಳು ವಿವಿಧ ಪತ್ರಿಕೆಯಲ್ಲಿ.. ಪುಸ್ತಕಗಳಲ್ಲಿ ಪ್ರಕಟಗೊಂಡಿವೆ. ಇವರ ಜ. ಚ.ನಿ ಶ್ರೀಗಳ ” ಬದುಕು -ಬರಹ ” ಕಿರು ಹೊತ್ತಿಗೆ ಕಿತ್ತೂರು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿದೆ. ಸಂಪಾದಕೀಯ ಕಾರ್ಯದಲ್ಲಿಯೂ ಇವರು ತಮ್ಮ ಸೇವೆಯನ್ನು ಗೈದಿದ್ದಾರೆ.
ಹಲವಾರು ಸಂಘ -ಸಂಸ್ಥೆಗಳಲ್ಲಿ ಕಾರ್ಯಕಾರಿ ಸದಸ್ಯೆಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಯಾವತ್ತೂ ಇವರದು ಅಳಿಲುಸೇವೆ ಇದ್ದೇ ಇರುತ್ತದೆ.ಸುಧಾ ಪಾಟೀಲ್ ಅವರನ್ನು ಅರಸಿ ಬಂದ ಪ್ರಶಸ್ತಿಗಳು..ಅನುಪಮ ಸೇವಾ ರತ್ನ ಪ್ರಶಸ್ತಿ (ಪೃಥ್ವಿ ಫೌಂಡೇಶನ್ )
ಮಿನರ್ವ ಅವಾರ್ಡ್ ಮತ್ತು ದತ್ತಿ ನಿಧಿ ಪ್ರಶಸ್ತಿ ( ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ )ರಾಜ್ಯೋತ್ಸವ ಪ್ರಶಸ್ತಿ ( ಚೇತನಾ ಫೌಂಡೇಶನ್ )

6 thoughts on “

  1. Excellent introduction of Your liked Book ಬದುಕಲು ಕಲಿಯಿರಿ
    Amazing style

  2. ಕನ್ನಡ ವಿಮರ್ಶೆ ಲೋಕಕ್ಕೆ ಇನ್ನೊಂದು ಹೊಸ ಪ್ರತಿಭೆ ಸುಧಾ ಪಾಟೀಲ ಮೇಡಂ ಬೆಳಗಾವಿ

  3. ಸುಂದರ ಸುಧಾರ ಬರವಣಿಗೆ ಕವನ ಪುಸ್ತಕ ಪರಿಚಯ ಎಲ್ಲವೂ ಬಳು ಸುಂದರ
    ಗೆಳತಿಗೆ ಶುಭ ಕಾಮನೆಗಳು
    ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಹಸ್ರಾರು ಪ್ರಶಸ್ತಿ ಪಡೆಯಿರಿ

  4. Very sincere efforts in introducing
    Your Liked Books
    Good luck to
    you in all your future endeavours
    Sudhaji

  5. ಪುಸ್ತಕಗಳು ಓದುಗರ ಭವಿಷ್ಯದ ಕನ್ನಡಿ

Leave a Reply

Back To Top