ನಿಶ್ಚಿತ ಎಸ್. ಕವಿತೆ- ಹೆಣ್ಣಿನ ಜೀವನ

ಕಾವ್ಯ ಸಂಗಾತಿ

ನಿಶ್ಚಿತ ಎಸ್.

ಹೆಣ್ಣಿನ ಜೀವನ

ಆಸೆಗಳನ್ನ ಅಗ್ನಿಗೆ ಹಾಕಿ,,,
ಕನಸನ್ನು ನೀರಲ್ಲಿ ತೇಲಿಸಿ,,,
ಭಾವನೆಗಳನ್ನ ನನ್ನಲ್ಲೇ ಬಂಧಿಸಿ,,,
ನಾ ಬಂದಿಯಾದೆ ತಾಳಿಗೆ,,, ಸಾಯಿಸುತ್ತ ನನ್ನಾಸೆಯ…

ಗಂಡನಿಗೆ ಅರ್ಧಾಂಗಿಯಾಗಿ,,
ಅತ್ತೆ ಮಾವನಿಗೆ ನಾಮಗಳಾಗಿ,,,
ಆ ಮನೆಯ ಜ್ಯೋತಿಯಾಗಿ,,
ನಾ ಬಂಧಿಯಾದೆ ಸೊಸೆಯಾಗಿ,,
ಸಾಯಿಸುತ್ತಾ ನನ್ನಾಸೆಯ..

ಡಿಗ್ರಿ ,ಪದವಿಗಳನ್ನು ಫೈಲಿಗೆ ಹಾಕಿ,,
ಅಮ್ಮನ ಪದವಿಯ ನಾ ಹೊತ್ತು,,
ಅಲ್ಲಿಂದ ಶುರುವಾಯಿತೊಂದು ಹೊಸ ಜೀವನ,,
ನನ್ನ ಮಗನಾದನು ನನ್ನ ಜಗತ್ತು,,
ಅಲ್ಲಿ ನಾ ಬಂಧಿಯಾದೆ ಅಮ್ಮನಾಗಿ..
ಸಾಯಿಸುತ್ತ ನನ್ನಾಸೆಯ..

ಮಗನನ್ನೇ ಸರ್ವಸ್ವವೆಂದು,,
ಅವನಿಗಾಗಿ ಎಲ್ಲಾನು ಧಾರೆ ಎರೆದು,,
ಸೊಸೆಹುಡುಕಿ ಮದುವೆ ಮಾಡಿಸಿ,,
ಅಲ್ಲಿ ನಾ ಬಂಧಿಯಾದೆ ಅತ್ತೆಯಾಗಿ,,
ಸಾಯಿಸುತ್ತ ನನ್ನಾಸೆಯ…

ನನ್ನಂತೆ ಅವಳಾಗಬಾರದೆಂದು,,
ಅವಳ ಕನಸ ನಾ ಈಡೇರಿಸಲು ಹೋಗಿ,,
ಅಲ್ಲಿ ಸೋತು ಸುಮ್ಮನಾದೆ,,
ಮಗನಿಂದಲೂ ನಾ ದೂರವಾದೆ,,
ಮುಂದೆ ಮುಕ್ತಿ ಸಿಕ್ಕಿತು ಸಮಾಧಿಯಾಗಿ ,,,
ಜೊತೆಗೆ ಸಾಯುತ್ತ ನನ್ನಾಸೆಯು..


Leave a Reply

Back To Top