ಮಾಜಾನ್ ಮಸ್ಕಿ ಕವಿತೆ-ಜಾನ್ ಪದ್ಯಗಳು

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಜಾನ್ ಪದ್ಯಗಳು

ಉನ್ನತ ವಿಚಾರ ಮಿದುಳು ಸ್ವೀಕರಿಸಿದೆ
ಜಾನ್!!
ಕ್ಷುಲ್ಲಕ ಕೆಲಸಗಳಿಗೆ ಹೃದಯ ಮಿಡಿಯದು…

ತಾನೇ ಶ್ರೇಷ್ಠ ಎಂದು ಅವಮಾನಿಸಲಿ ಬಿಡು
ಜಾನ್!!
ಕೈ ಹಿಡಿದ ಕೆಲಸ ಬಿಡದೆ ನೀ ಸಾಗುತ್ತಿರು…

ಗುರು ಸಿಗದಿದ್ದರೆ ಏನಾಯಿತು?!
ಜಾನ್!!
ಮೌನವನ್ನೇ ನಿನ್ನ ಗುರುವಾಗಿಸಿಕೋ

ಸೋಲಬೇಕು ನಿನ್ನ ಪ್ರೀತಿಸಿದವರ ಮುಂದೆ
ಜಾನ್!!
ಅವರ ಹೆಸರು ನಿನ್ನ ಗೋರಿಯ ಉಸಿರಾಗುವಂತೆ


Leave a Reply

Back To Top