ರೇಖಾ ಸುದೇಶ್ ರಾವ್ ಕವಿತೆ-ಜಂಜಾಟ

ಕಾವ್ಯ ಸಂಗಾತಿ

ರೇಖಾ ಸುದೇಶ್ ರಾವ್

ಜಂಜಾಟ

ಕಾಣದ ಕೈಗಳು ಮೇಲಿರುವ ಸೂತ್ರಧಾರ
ನೊಂದ ಜೀವವಿಹುದು ಇಲ್ಲಿ ತರತರ
ಹಗ್ಗದೆಳೆ ಗಾತ್ರದ ಹಿಡಿತದಲ್ಲಿ ಪಾತ್ರದಾರ
ಮಾಡಲೇಬೇಕು ಕೂಲಂಕುಷ ವಿಚಾರ

ಹೆಣ್ಣಿನ ಜೀವನ ಜಂಜಾಟದಲ್ಲಿ ನಿರಂತರ
ಗಂಡು ಹೆಣ್ಣಿನ ವೈ ಮನಸಿನಿಂದ ಅಂತರ
ಊಹೆಗೂ ನಿಲುಕದಷ್ಟು ಬೆಡಗಿ ವೈಯಾರ
ಕುಣಿಸುವ ಕೈಗಳಿರಲು ಆತನೇ ಸರದಾರ

ಪ್ರದರ್ಶನ ನೀಡಲು ಹಲವಾರು ತಯಾರು
ಅಸೂಯೆಯ ಜೀವ ಎರಚಲು ಕೆಸರು
ಬಾಳಬೇಕಿದ್ದ ಜೀವದ ನಿಂತ ಉಸಿರು
ಬಾಡಿದೆ ಹಚ್ಚ ಹಸಿರು ಆಗಬೇಕಾಗಿದ್ದ ಹೆಸರು

ಅರಿಯದೆ ತೊಳಲಾಟದಲ್ಲಿ ಚಿತ್ತದ ಚಿತ್ರ
ಮುಖವಾಡ ಧರಿಸಿ ಉಳಿಸುವಾತನ ಕುತಂತ್ರ
ಉಚ್ಚರಿಸಿರಲು ವಶೀಕರಣದ ಮಂತ್ರ
ಜೀವ ಉಳಿಯುವುದು ಎಚ್ಚರಿಕೆ ಇದ್ದಲ್ಲಿ ಮಾತ್ರ


ರೇಖಾ ಸುದೇಶ್ ರಾವ್

Leave a Reply

Back To Top