ಬೆಂಗಳೂರಿನ ನುಡಿತೋರಣ
ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ
ಮೊದಲನೆಯ ವಾರ್ಷಿಕೋತ್ಸವ
ಬೆಂಗಳೂರಿನ ನುಡಿತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ಮೊದಲನೆಯ ವಾರ್ಷಿಕೋತ್ಸವವನ್ನು ಹಿರಿಯ ಸಾಹಿತಿಯರಾದ ಡಾ ಬೈರಮಂಗಲ ರಾಮೇಗೌಡ್ರು ಮತ್ತು ಶ್ರೀಮತಿ ಅನುಸೂಯ ಸಿದ್ಧರಾಮ ರವರು ಉದ್ಘಾಟಿಸಿದರು. ರಾಸು ವೆಂಕಟೇಶ್ ಜೊತೆ ಬಳಗದ ಸಂಚಾಲಕರಾದ ಶ್ರೀಕಾಂತ್ ಪತ್ರೆಮರ, ಮಧುರಾ ಭಟ್ ಮುಂತಾದವರು ಉಪಸ್ಥಿತರಿದ್ದರು .
ಬೆಳಿಗ್ಗೆ 8.30 ಕ್ಕೆ ಬೆಳಗಿನ ಉಪಹಾರದೊಂದಿಗೆ ಆರಂಭವಾದ ನುಡಿ ಸಂಭ್ರಮ ಸಮಾವೇಶ ಸಂಜೆ 7 ಗಂಟೆಗೆ ಕಾಫಿ , ತಿಂಡಿಯೊಂದಿಗೆ ಮುಕ್ತಾಯವಾಯಿತು. ಬೆಳಿಗ್ಗೆ 9.30 ರಿಂದ 10 ಗಂಟೆಯ ತನಕ ಬಳಗದ ಸದಸ್ಯರು ಗೀತಗಾಯನದಿಂದ ಸಭಿಕರನ್ನು ಮನರಂಜಿಸಿದರು. 10 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಗದ ಹಿರಿಯ ಸದಸ್ಯೆ ಅನಸೂಯಾ ಸಿದ್ಧರಾಮ ಅವರು ವಹಿಸಿದ್ದರು. ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಬೈರಮಂಗಲ ರಾಮೇಗೌಡ್ರು ಮುಖ್ಯ ಅತಿಥಿಗಳಾಗಿ ಹಾಗೂ ಉದ್ಘಾಟಕರಾಗಿ ಆಗಮಿಸಿ ದೀಪ ಬೆಳಗಿದರು. ಮಾತಿನ ಮನೆಯ ಶ್ರೀಯುತ ರಾ ಸು ವೆಂಕಟೇಶ, ಶ್ರೀ ತ ನಾ ಶಿವಕುಮಾರ್, ಶ್ರೀಮತಿ ಶೈಲಾ ಜಯಕುಮಾರ್ ಮತ್ತು ಬಳಗದ ಸಂಚಾಲಕರಾದ ಶ್ರೀಯುತ ಶ್ರೀಕಾಂತ ಪತ್ರೆಮರ, ಶ್ರೀಮತಿ ಮಧುರಾ ಭಟ್, ಶ್ರೀಮತಿ ಜಯಂತಿ ಚಂದ್ರಶೇಖರ್ ರವರು ಈ ಸಂದರ್ಭದಲ್ಲಿ ಜೊತೆಗಿದ್ದರು.
ದೀಪ ಪ್ರಜ್ವಲನೆ ನಂತರ ಹಿರಿಯ ಲೇಖಕರಾದ ಶ್ರೀಯುತ ತ ನಾ. ಶಿವಕುಮಾರ್ ರವರ ‘ಕಂದನ ಪದ್ಯಗಳು’ ಮತ್ತು ಶ್ರೀಮತಿ ಶೈಲಾ ಜಯಕುಮಾರ್ ಅವರ ‘ಪುರಾಣ ಪ್ರಮಾಣ’ ಕೃತಿಗಳು ಲೋಕಾರ್ಪಣೆಗೊಂಡವು.
ಶ್ರೀಯುತ ತ ನಾ ಶಿವಕುಮಾರ್ ಅವರ ಕಂದನ ಪದ್ಯಗಳು ಕೃತಿ ಪರಿಚಯವನ್ನು ಶ್ರೀ ರಾ ಸು ವೆಂಕಟೇಶ್ ಅವರು ನಂತರ ಶ್ರೀಮತಿ ಶೈಲಾ ಜಯಕುಮಾರ್ ಅವರ ಪುರಾಣ ಪ್ರಮಾಣ ಕೃತಿ ಪರಿಚಯವನ್ನು ಶ್ರೀ ಕಿರಣ್ ಹಿರಿಸಾವೆಯವರು ಬಹಳ ಸೊಗಸಾಗಿ ತಿಳಿಸುತ್ತ ಕೊಂಡು ಓದಲು ಯೋಗ್ಯವಾದ ಕೃತಿಯೆಂದು ಸಲಹೆ ನೀಡಿದರು. ಮುಖ್ಯ ಅತಿಥಿಗಳಾದ ಬೈರಮಂಗಲ ರಾಮೇಗೌಡ್ರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯು ಬಹಳ ಉನ್ನತ ಮಟ್ಟದ ಕೆಲಸ ಮಾಡುತ್ತಿದೆ ಎಂದು ಹೇಳುತ್ತಾ ಶಿಶು ಸಾಹಿತ್ಯದ ಕಡೆಗೆ ಆಸಕ್ತಿ ವಹಿಸಬೇಕಿದೆ ಎಂದರು.
ಡಾ ರುಕ್ಮಿಣಿ ಸಿ ವ್ಯಾಸರಾಜ್, ಡಾ ಸರೋಜ ಜಿ ಎಸ್, ಡಾ ಶಿವಕುಮಾರ್ ಟಿ, ಶ್ರೀ ಜೀವರಾಜ ಛತ್ರದ್, ಶ್ರೀ ವೇಣುಕುಮಾರ್ ಶರ್ಮ ಇವರ ಉಪಸ್ಥಿತಿಯಲ್ಲಿ
1 ಗಂಟೆಯ ತನಕ ಬಳಗದ ಅಂಕಣಕಾರರಿಗೆ ಮತ್ತು ಸ್ಪರ್ಧಾ ವಿಜೇತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮಧ್ಯಾನದ ಬೋಜನದ ನಂತರ 2 ಗಂಟೆಯಿಂದ 4 ಗಂಟೆಯ ತನಕ ಕವಿಗೋಷ್ಟಿಯಿತ್ತು. ಕವಿಗೋಷ್ಟಿಗೆ ಅಧ್ಯಕ್ಷರಾಗಿ ಶ್ರೀಯುತ ಈಶ್ವರ ಜಿ ಸಂಪಗಾವಿಯವರು ಮತ್ತು ಅತಿಥಿಗಳಾಗಿ ಶ್ರೀಮತಿ ಮಧುರಾ ಕರ್ಣಂ, ಶ್ರೀಯುತ ಎಂ ವೆಂಕಟೇಶ ಶೇಷಾದ್ರಿ, ಶ್ರೀಮತಿ ಪಂಕಜ ಕೌರಿ ಅವರು ಉಪಸ್ಥಿತರಿದ್ದರು.
ಸಂಜೆಯ ಲಘು ಉಪಹಾರದ ನಂತರ 4.30 ರಿಂದ ಸಮಾರೋಪ ಸಮಾರಂಭಕ್ಕೆ ಅಧ್ಯಕ್ಷರಾಗಿ ಬೆಂ ಜಿಲ್ಲಾ ನಗರ ಕ.ಸಾ.ಪ ಅಧ್ಯಕ್ಷರಾದ ಶ್ರೀ ಎಂ ಪ್ರಕಾಶ ಮೂರ್ತಿಯವರು, ಮುಖ್ಯ ಅತಿಥಿಗಳಾಗಿ ಕಸ್ತೂರಿ ಮಾಸಪತ್ರಿಕೆ ಸಂಪಾದಕರಾದ ಶ್ರೀಮತಿ ಶಾಂತಲಾ ಧರ್ಮರಾಜು, ಶ್ರೀಮತಿ ಜಯಂತಿ ಕೆ ವೈ ಅವರೊಂದಿಗೆ ಶ್ರೀ ಕಿರಣ್ ಹಿರಿಸಾವೆಯವರು ಉಪಸ್ಥಿತರಿದ್ದರು.
ವಸ್ತ್ರಲಕ್ಷ್ಮಿಯನ್ನು, ಪುಸ್ತಕಗಳನ್ನು, ಲೇಖನಿಯನ್ನು ನುಡಿ ತೋರಣದ ಚಿತ್ತಾರವಿರುವ ಸೆಣಬಿನ ಚೀಲದಲ್ಲಿ ನೆನಪಿನ ಉಡುಗೊರೆಯಾಗಿ ಎಲ್ಲಬೆಂಗಳೂರಿನ ನುಡಿತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ಮೊದಲನೆಯ ವಾರ್ಷಿಕೋತ್ಸವವನ್ನು ಹಿರಿಯ ಸಾಹಿತಿಯರಾದ ಡಾ ಬೈರಮಂಗಲ ರಾಮೇಗೌಡ್ರು ಮತ್ತು ಶ್ರೀಮತಿ ಅನುಸೂಯ ಸಿದ್ಧರಾಮ ರವರು ಉದ್ಘಾಟಿಸಿದರು. ರಾಸು ವೆಂಕಟೇಶ್ ಜೊತೆ ಬಳಗದ ಸಂಚಾಲಕರಾದ ಶ್ರೀಕಾಂತ್ ಪತ್ರೆಮರ, ಮಧುರಾ ಭಟ್ ಮುಂತಾದವರು ಉಪಸ್ಥಿತರಿದ್ದರು .
ಬೆಳಿಗ್ಗೆ 8.30 ಕ್ಕೆ ಬೆಳಗಿನ ಉಪಹಾರದೊಂದಿಗೆ ಆರಂಭವಾದ ನುಡಿ ಸಂಭ್ರಮ ಸಮಾವೇಶ ಸಂಜೆ 7 ಗಂಟೆಗೆ ಕಾಫಿ , ತಿಂಡಿಯೊಂದಿಗೆ ಮುಕ್ತಾಯವಾಯಿತು. ಬೆಳಿಗ್ಗೆ 9.30 ರಿಂದ 10 ಗಂಟೆಯ ತನಕ ಬಳಗದ ಸದಸ್ಯರು ಗೀತಗಾಯನದಿಂದ ಸಭಿಕರನ್ನು ಮನರಂಜಿಸಿದರು. 10 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಗದ ಹಿರಿಯ ಸದಸ್ಯೆ ಅನಸೂಯಾ ಸಿದ್ಧರಾಮ ಅವರು ವಹಿಸಿದ್ದರು. ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಬೈರಮಂಗಲ ರಾಮೇಗೌಡ್ರು ಮುಖ್ಯ ಅತಿಥಿಗಳಾಗಿ ಹಾಗೂ ಉದ್ಘಾಟಕರಾಗಿ ಆಗಮಿಸಿ ದೀಪ ಬೆಳಗಿದರು. ಮಾತಿನ ಮನೆಯ ಶ್ರೀಯುತ ರಾ ಸು ವೆಂಕಟೇಶ, ಶ್ರೀ ತ ನಾ ಶಿವಕುಮಾರ್, ಶ್ರೀಮತಿ ಶೈಲಾ ಜಯಕುಮಾರ್ ಮತ್ತು ಬಳಗದ ಸಂಚಾಲಕರಾದ ಶ್ರೀಯುತ ಶ್ರೀಕಾಂತ ಪತ್ರೆಮರ, ಶ್ರೀಮತಿ ಮಧುರಾ ಭಟ್, ಶ್ರೀಮತಿ ಜಯಂತಿ ಚಂದ್ರಶೇಖರ್ ರವರು ಈ ಸಂದರ್ಭದಲ್ಲಿ ಜೊತೆಗಿದ್ದರು.
ದೀಪ ಪ್ರಜ್ವಲನೆ ನಂತರ ಹಿರಿಯ ಲೇಖಕರಾದ ಶ್ರೀಯುತ ತ ನಾ. ಶಿವಕುಮಾರ್ ರವರ ‘ಕಂದನ ಪದ್ಯಗಳು’ ಮತ್ತು ಶ್ರೀಮತಿ ಶೈಲಾ ಜಯಕುಮಾರ್ ಅವರ ‘ಪುರಾಣ ಪ್ರಮಾಣ’ ಕೃತಿಗಳು ಲೋಕಾರ್ಪಣೆಗೊಂಡವು.
ಶ್ರೀಯುತ ತ ನಾ ಶಿವಕುಮಾರ್ ಅವರ ಕಂದನ ಪದ್ಯಗಳು ಕೃತಿ ಪರಿಚಯವನ್ನು ಶ್ರೀ ರಾ ಸು ವೆಂಕಟೇಶ್ ಅವರು ನಂತರ ಶ್ರೀಮತಿ ಶೈಲಾ ಜಯಕುಮಾರ್ ಅವರ ಪುರಾಣ ಪ್ರಮಾಣ ಕೃತಿ ಪರಿಚಯವನ್ನು ಶ್ರೀ ಕಿರಣ್ ಹಿರಿಸಾವೆಯವರು ಬಹಳ ಸೊಗಸಾಗಿ ತಿಳಿಸುತ್ತ ಕೊಂಡು ಓದಲು ಯೋಗ್ಯವಾದ ಕೃತಿಯೆಂದು ಸಲಹೆ ನೀಡಿದರು. ಮುಖ್ಯ ಅತಿಥಿಗಳಾದ ಬೈರಮಂಗಲ ರಾಮೇಗೌಡ್ರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯು ಬಹಳ ಉನ್ನತ ಮಟ್ಟದ ಕೆಲಸ ಮಾಡುತ್ತಿದೆ ಎಂದು ಹೇಳುತ್ತಾ ಶಿಶು ಸಾಹಿತ್ಯದ ಕಡೆಗೆ ಆಸಕ್ತಿ ವಹಿಸಬೇಕಿದೆ ಎಂದರು.
ಡಾ ರುಕ್ಮಿಣಿ ಸಿ ವ್ಯಾಸರಾಜ್, ಡಾ ಸರೋಜ ಜಿ ಎಸ್, ಡಾ ಶಿವಕುಮಾರ್ ಟಿ, ಶ್ರೀ ಜೀವರಾಜ ಛತ್ರದ್, ಶ್ರೀ ವೇಣುಕುಮಾರ್ ಶರ್ಮ ಇವರ ಉಪಸ್ಥಿತಿಯಲ್ಲಿ
1 ಗಂಟೆಯ ತನಕ ಬಳಗದ ಅಂಕಣಕಾರರಿಗೆ ಮತ್ತು ಸ್ಪರ್ಧಾ ವಿಜೇತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮಧ್ಯಾನದ ಬೋಜನದ ನಂತರ 2 ಗಂಟೆಯಿಂದ 4 ಗಂಟೆಯ ತನಕ ಕವಿಗೋಷ್ಟಿಯಿತ್ತು. ಕವಿಗೋಷ್ಟಿಗೆ ಅಧ್ಯಕ್ಷರಾಗಿ ಶ್ರೀಯುತ ಈಶ್ವರ ಜಿ ಸಂಪಗಾವಿಯವರು ಮತ್ತು ಅತಿಥಿಗಳಾಗಿ ಶ್ರೀಮತಿ ಮಧುರಾ ಕರ್ಣಂ, ಶ್ರೀಯುತ ಎಂ ವೆಂಕಟೇಶ ಶೇಷಾದ್ರಿ, ಶ್ರೀಮತಿ ಪಂಕಜ ಕೌರಿ ಅವರು ಉಪಸ್ಥಿತರಿದ್ದರು.
ಸಂಜೆಯ ಲಘು ಉಪಹಾರದ ನಂತರ 4.30 ರಿಂದ ಸಮಾರೋಪ ಸಮಾರಂಭಕ್ಕೆ ಅಧ್ಯಕ್ಷರಾಗಿ ಬೆಂ ಜಿಲ್ಲಾ ನಗರ ಕ.ಸಾ.ಪ ಅಧ್ಯಕ್ಷರಾದ ಶ್ರೀ ಎಂ ಪ್ರಕಾಶ ಮೂರ್ತಿಯವರು, ಮುಖ್ಯ ಅತಿಥಿಗಳಾಗಿ ಕಸ್ತೂರಿ ಮಾಸಪತ್ರಿಕೆ ಸಂಪಾದಕರಾದ ಶ್ರೀಮತಿ ಶಾಂತಲಾ ಧರ್ಮರಾಜು, ಶ್ರೀಮತಿ ಜಯಂತಿ ಕೆ ವೈ ಅವರೊಂದಿಗೆ ಶ್ರೀ ಕಿರಣ್ ಹಿರಿಸಾವೆಯವರು ಉಪಸ್ಥಿತರಿದ್ದರು.
ವಸ್ತ್ರಲಕ್ಷ್ಮಿಯನ್ನು, ಪುಸ್ತಕಗಳನ್ನು, ಲೇಖನಿಯನ್ನು ನುಡಿ ತೋರಣದ ಚಿತ್ತಾರವಿರುವ ಸೆಣಬಿನ ಚೀಲದಲ್ಲಿ ನೆನಪಿನ ಉಡುಗೊರೆಯಾಗಿ ಎಲ್ಲ ಸದಸ್ಯರಿಗೂ ವಿತರಿಸಲಾಯಿತು. ನಂತರ ಸಂಜೆ 7 ಗಂಟೆಗೆ ಬಳಗದ ಸದಸ್ಯರೆಲ್ಲ ಹರಟುತ್ತ ಕಾಫಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಫೋಟ ಆಲ್ಬಂ
ವರದಿ:
ಮಧುರಾ ಮೂರ್ತಿ