ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಮಳೆ ಬರಲಿ
ಮಳೆ ಬರಲಿ ವಸುಧಿಶ
ಬಿತ್ತುವೇನು ಬಸವೇಶಾ
ದನ ಕರುಗಳು ಹಸಿದಿವೆ
ಕಾಯೋ ನೀ ಪರಮೇಶ
ಬಿರುಕು ನೆಲದಲಿ ಬದುಕು
ರೈತ ಕಾರ್ಮಿಕರ ದುಗುಡು
ತುಂತುರು ಹನಿ ಮಳೆಗೆ
ನೆಲವೆಲ್ಲ ಸೊಗಡು
ತೆನೆಗಳೆದ್ದು ಮೆರೆಯಲಿ
ಹುಲುಸು ಜೋಳ ರಾಗಿ
ಮೈ ಮುರಿದು ದುಡಿದವನೆ
ಕಾಯಕದ ಯೋಗಿ
ಕೈ ಮುಗಿದು ಬೇಡುವೆನು
ಕೃಪೆಯಾಗು ಮಳೆರಾಜ
ಸರಿಸಿ ಕೋಪ ಮುನಿಸು
ಜೀವ ಜಾಲವ ಹರಿಸು
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ರೈತ ಕಾರ್ಮಿಕರ ದುಗುಡ ದುಃಖ ದೂರ ಮಾಡುವ ಮಳೆಯ ಕುರಿತ ಕವನ ತುಂಬಾ ಚೆನ್ನಾಗಿದೆ ಸರ್