ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹನಿ ಬಿಂದು

ನಾನು ಹಾಗೆಯೇ

ನಾನು ಹಾಗೆಯೇ
ಯಾರ ಮಾತನ್ನೂ ಕೇಳುವುದಿಲ್ಲ
ನನಗೆ ತೋಚಿದ್ದ ಮಾಡುವೆ

ನಾನು ಹಾಗೆಯೇ
ಅಪ್ಪ ಅಮ್ಮನಿಗೆ ಗದರುವೆ
ಹುಡುಗಿಗೆ ಖರ್ಚು ಮಾಡುವೆ

ನಾನು ಹಾಗೆಯೇ
ಮಡದಿ ಬಳಿ ಇದ್ದರೂ
ಅಂದದ ಹುಡುಗಿಯ ನೋಡುವೆ

ನಾನು ಹಾಗೆಯೇ
ಪತಿ ಕೆಲಸಕ್ಕೆ ಹೋದ ಕೂಡಲೇ
ಗೆಳೆಯನಿಗೆ ಫೋನಾಯಿಸುವೆ

ನಾನು ಹಾಗೆಯೇ
ಅಕ್ಕ ತಂಗಿಯರ ಜೊತೆ ಜಗಳವಾಡುವೆ
ಪಕ್ಕದ ಮನೆಯವರ ಜೊತೆ ಹರಟೆ ಹೊಡೆಯುವೆ

ನಾನು ಹಾಗೆಯೇ
ಸುಮ್ಮನೆ ಮಲಗಿದ್ದ ನಾಯಿಗೆ ಕಲ್ಲು ಹೊಡೆಯುವೆ
ಬೆಕ್ಕಿನ ಬಾಲ ಜಗ್ಗಿ ಖುಷಿ ಪಡುವೆ

ನಾನು ಹಾಗೆಯೇ
ಗೆಳೆಯರಿಂದ ಬೇಕಾದ್ದು ಪಡೆದು
ಗೆಳೆಯರ ಸದಾ ದೂರುವೆ..

ನಾನು ಹಾಗೆಯೇ
ಪ್ರತಿ ಕ್ರಿಕೆಟಿಗರನ್ನು ದೂರಿ ತಿದ್ದಿ ಬುದ್ದಿ ಹೇಳುವೆ
ಪ್ರತಿ ಸಿನೆಮಾ ನಟರಿಗೆ ಕಮೆಂಟ್ ಮಾಡುವೆ

ನಾನು ಹಾಗೆಯೇ
ರಾತ್ರಿ ಲೇಟಾಗಿ ಮಲಗುವೆ
ಬೆಳಗ್ಗೆ ತಡವಾಗಿ ಏಳುವೆ

—————-
ಹನಿಬಿಂದು

About The Author

Leave a Reply

You cannot copy content of this page

Scroll to Top