ಕಾಡಜ್ಜಿ ಮಂಜುನಾಥ ಕವಿತೆ-ಪ್ರಭುತ್ವದ ಬಹುಮುಖ !!

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಪ್ರಭುತ್ವದ ಬಹುಮುಖ !!

ಪ್ರಭುತ್ವಕ್ಕೆ ಯಾವಾಗ್ಲೂ
ಬಹುಮುಖ;
ಆಡಳಿತ ಮಾಡುವಾಗ
ಒಂದು ಮುಖ;
ಅಧಿಕಾರ ಇಲ್ಲದಿದ್ದಾಗ
ಇನ್ನೊಂದು ಮುಖ;
ಒಮ್ಮೊಮ್ಮೆ
ಸಂವಿಧಾನ, ನ್ಯಾಯಾಲಯ,
ಕಾಲು ಕಸ ;
ಮತ್ತೊಮ್ಮೆ
ಅವುಗಳಿಂದಲೇ ಮಾಡುವರು
ಕಸದಿಂದ ರಸ;
ಇನ್ನೊಮ್ಮೆ
ಅಧಿಕಾರ, ಭ್ರಷ್ಟಾಚಾರವೇ
ಅಭಿವೃದ್ಧಿಯ ಪರ ;
ಮಗದೊಮ್ಮೆ
ಅಭಿವೃದ್ಧಿಯ ನೋಟದ
ಮಾತಿಗೂ ಬರ ;
ಕುರ್ಚಿಯ ಮೋಹಕೆ
ಮನೆಯ ಮೂದಲಿಸುವ ಚಟ;
ಕಾಲ ನಂತರ
ಅದೇ ಮನೆಗೆ ಪ್ರವೇಶಿಸಲು
ಕೈಲಾಗದ ವ್ಯರ್ಥ
ಹೋರಾಟ;
ಪ್ರಜೆಗಳ ಬದುಕಿಗೆ ಮರುಗದ
ಮೈಮನ;
ದುರಾಸೆಯ ಕುದುರೆಯೇರಿಸಿ
ಮುಗ್ದ ಜನರ ಜೀವನ
ಮುಗಿಸುವ ರಾಕ್ಷಸತನ !!


ಕಾಡಜ್ಜಿ ಮಂಜುನಾಥ

Leave a Reply

Back To Top