ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಲೇಖನ-ಆತ್ಮ – ಸತ್ಯಾಪನೆ!!

ಲೇಖನ ಸಂಗಾತಿ

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

ಆತ್ಮ – ಸತ್ಯಾಪನೆ!!

ಸಮನಾದ ತಪಸ್ಸಿಲ್ಲ , ಸಂತೋಷಕ್ಕಿಂತ ಮಿಗಿಲಾದ ಸುಖವಿಲ್ಲ , ಆಸೆಗಿಂತ ರೋಗವಿಲ್ಲ , ದಯೆಗಿಂತ ಹಿರಿದಾದ ಧರ್ಮವಿಲ್ಲ .

ಈ ಸೃಷ್ಟಿಯು ಸೃಷ್ಟಿಕರ್ತನ ಅಭಿವ್ಯಕ್ತಿಯೇಯಾಗಿದೆ , ಯಾರ ಮನಸು ಸತ್ಯಂ ಶಿವಂ ಸುಂದರಂ ಸೃಷ್ಟಿಯಲ್ಲಿ ಒಂದಾಗಿದೆಯೋ ಅವರು ಕವಿಗಳೆಂದು , ಯಾರ ಮನಸು ಸೃಷ್ಟಿಕರ್ತನಲ್ಲಿ ಪರಮ ಸತ್ಯದಲ್ಲಿ ಒಂದಾಗಿದೆಯೋ ಅವರು ಋಷಿಗಳಾಗಿ , ಕವಿಯೂ ಆಗಿರುತ್ತಾನಂತೆಯೇ , ‘ ಋಷಿಯಾಗಲಾರದವನು ಕವಿಯಾಗಲಾರನು , ಆ ಪರಮ ಸತ್ಯ ಅರಿಯಲು ಪರಮಾತ್ಮನ ದರ್ಶನ ಪಡೆಯಬೇಕು .

ಹಾಗೇ – ಸಂಗೀತಕಲೆಯೊಂದು ಸಾಹಿತ್ಯ ಕಲೆಯೊಂದು
ಅಂಗಾಂಗ ಭಾವ ರೂಪಣದ ಕಲೆಯೊಂದು
ಸಂಗಳಿಸಲೀ ಕಲೆಗಳನುನಯವು
 ಚರ್ಯೆಯಲಿ

ಮಂಗಳೋನ್ನತ ಕಲೆಯೋ – ಮಂಕುತಿಮ್ಮ ಎಂಬ ಡಿ ವಿ ಜಿ ಅವರ ನುಡಿಯಂತೆ ನಾನು ನನ್ನದು ಎನ್ನುವ ಅಹಂ ಅನ್ನು ಕಡಿಮೆ ಮಾಡುತ್ತ ಬರಬೇಕು , ಇದಕ್ಕೆ ಅಭ್ಯಾಸ ಮುಖ್ಯ , ಅದರಿಂದ ಕೇಲವು ಕಲೆಗಳನ್ನು  ನಮ್ಮದಾಗಿಸಿಕೊಳ್ಳಬೇಕು , ಸಂಗೀತಾ ಸಾಹಿತ್ಯ ನೃತ್ಯಗಳು ನಮ್ಮ ಅಂತರಂಗವನ್ನು ಒಂದು ಸಂಸ್ಕಾರಕ್ಕೆ ಒಳಪಡಿಸುತ್ತವೆ .
ಈ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂಬ ಹಂಬಲವುಳ್ಳ  ವ್ಯಕ್ತಿಗಳು ಪ್ರಪಂಚದ ತುಂಬ ಆಗಿ ಹೋದರು , ಅದರಲ್ಲಿ ಮುಂಚೂಣಿ ಇರುವವರು ಬುದ್ಧ , ಮಹಾವೀರ , ಬಸವ , ಏಸು , ಗುರುನಾನಕ್ , ತುಕಾರಾಂ , ಕನ್ಫ್ಯೂಸಿಯಸ್ ಹಾಗೂ ಸಂತರು ಮೊದಲಾದ ಮಹಾತ್ಮರು ಸತ್ಯದ ಸಾಕ್ಷಾತ್ಕಾರಕ್ಕಾಗಿ ಮಾಡಿದ ತ್ಯಾಗ ಸಾಮಾನ್ಯವಲ್ಲ .
ಬುದ್ದನಂತೆ ಅನೇಕ ರಾಜ ಮಹಾರಾಜರು ಸತ್ಯದರ್ಶನಕ್ಕಾಗಿ ರಾಜಭೋಗವನ್ನು ತ್ಯಾಗ ಮಾಡಿ ಸನ್ಯಾಸ ಸ್ವೀಕರಿಸಿದ್ದನ್ನು ಕೇಳಿರುತ್ತೇವೆ ,  ” ತ್ಯಾಗೇನೇಕನ ಅಮೃತತ್ತ್ವ ಮಾನುಷಮ್ : ತ್ಯಾಗದಿಂದಲೇ ಅಮೃತ ತತ್ತ್ವದ ಪ್ರಾಪ್ತಿ ” ,  ಎಂಬ ಮಂತ್ರಕ್ಕೆ ಈ ಜೀವನವೇ ನಿದರ್ಶನವಾಗಿದೆ .
ಮನುಷ್ಯನು ಒಂದು ಸಣ್ಣ ಹುಳುವನ್ನೂ ಸೃಷ್ಟಿಸಲಾರ ಆದರೂ ಅಸಂಖ್ಯಾತ ದೇವರುಗಳನ್ನು ಸೃಷ್ಟಿ ಮಾಡಿದ್ದಾನೆ , ಆದರೆ , ದೇವರು ಒಬ್ಬನೇ ನಾಮ ಹಲವು ಇದು ನಿತ್ಯ ಸತ್ಯ , ಸತ್ಯದ ನಿಲುವು ಅರಿಯಲು ಮನುಷ್ಯ ಅಸಮರ್ಥನಾಗಿದ್ದಾನೆ ಎಂದರ್ಥ , ಇದಕ್ಕೆ ಮೂಲ ಕಾರಣ ನಮ್ಮಲ್ಲಿ ಅಡಗಿರುವ ಸ್ವಾರ್ಥ ಹಾಗೂ ಸಂಕುಚಿತ ಮನೋಭಾವ .
ರಕ್ತದಲ್ಲಿ ವಿಷವು ಸೇರುವುದು ಭಯಂಕರವಾದದ್ದು , ತತ್ವ ಸಿದ್ಧಾಂತಗಳಿಗೆ ಅಪಚಾರವಾದರೆ  ಇಡೀ ಮಾನವ ಸಮಾಜಕ್ಕೆ ಕಳಂಕವು ತಪ್ಪಿದ್ದಲ್ಲ , ಮಾನವನ ಕಲ್ಯಾಣವೇ ಇವುಗಳ ಉದ್ದೇಶವಾಗಿದೆಯೇ ಹೊರತು ಮತ್ತೊಂದಲ್ಲ , ಉರಿಯುತ್ತಿರುವ ದೀಪ ತನ್ನ ಪ್ರಕಾಶದಿಂದ ಇತರೆ ಸಾವಿರಾರು ಲಕ್ಷ ದೀಪಗಳನ್ನು ಪ್ರಕಾಶಿಸಬಲ್ಲದು , ಅದೇ ರೀತಿ ಜ್ಞಾನಿಗಳು ಜ್ಞಾನ ಬೋಧೆಯ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಅರಿತು ಮಾಡಬೇಕಾಗಿದೆ . ನೆಮ್ಮದಿ ಮತ್ತು ಶಾಂತಿಯನ್ನು ಅರಿತು ತಂತಾನೆ ಆಚರಣೆಯ ಮೂಲಕ ಸಾಕ್ಷಾತ್ಕಾರ ಪಡಿಸಿಕೊಳ್ಳಬೇಕು .
ಮನುಷ್ಯ ಎಷ್ಟು ವರುಷ ಬದುಕಿದನೆಂಬುದು ಮುಖ್ಯವಲ್ಲ , ಬದುಕಿರುವಷ್ಟು ದಿನ ಯಾವ ರೀತಿ ನೀತಿಯಲ್ಲಿ ಸೌಹಾರ್ದತೆ ಶಾಂತಿಯಿಂದ ಬಾಳಿದೆವು ಎಂಬುದರ ಮೂಲಕ ಅಮೂಲ್ಯವಾಗುತ್ತಾರೆ ,
ಗಣನೆಗೆ ಬರುವುದು , ಒಳ್ಳೆಯ ಘಟನೆಗಳು , ನಿಷ್ಠೆ ಪ್ರಾಮಾಣಿಕತೆ , ಆದರ್ಶ, ಅಹಿಂಸೆ ಮಾರ್ಗ , ಮಾನವೀಯತೆ ಗುಣಗಳು ಪರಮವಾಗುತ್ತದೆ , ಅವು ಕೈಹಿಡಿದು ಸದಾ ಜಯದ ಹಾದಿಯಲ್ಲಿ ಕರೆದೊಯ್ಯುತ್ತದೆ  .
ಕರ್ತವ್ಯ ವಿಮುಖರಾದವರು ಮುನ್ನಡೆವ ದೃಢ ಸಂಕಲ್ಪ ತೊಟ್ಟವನರು ವಿಜೇಯಶಾಲಿಯಾಗುವರು , ಪ್ರಸ್ತುತ ವಿದ್ಯಮಾನದಲ್ಲಿ  ಮಾನವೀಯತೆಯ ಆದರ್ಶ ಮೌಲ್ಯಗಳು ಕುಸಿಯುತ್ತಿರುವ ದಿನಗಳಲ್ಲಿ ಧರ್ಮಪ್ರಜ್ಞೆ , ಸಾಮಾಜಿಕ ಅರಿವು , ಸಾಮರಸ್ಯ , ದೇಶಪ್ರೇಮ ಮತ್ತು ಕ್ರಿಯಾಶೀಲ ಭಾವನೆಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ .

ಅತಿಯಾದ ವೈಚಾರಿಕತೆ ಮನುಷ್ಯನ ಮನಶಾಂತಿಯನ್ನು ಕದಡದಂತೆ , ಬಾಹ್ಯ ಸೌಂದರ್ಯ ನಾಗರೀಕತೆಯ ಸಂಕೇತ , ಆಂತರಿಕ ಸೌಂದರ್ಯ ಸಂಸ್ಕೃತಿಯ ಪ್ರತಿರೂಪ  ಮರೆಯಬಾರದು .
ಕಾಲಕಾಲಕ್ಕೆ ಮರದ ಎಲೆಗಳು ಉದುರಿದರು ಮರದ ಬೇರು ಭದ್ರವಾಗಿರುತ್ತವೆ , ಅಂತೆಯೇ ಮನುಷ್ಯನ ಅಭಿಪ್ರಾಯಗಳು  ತತ್ವ – ಸಿದ್ಧಾಂತಗಳು  ಬದಲಾಗಬೇಕಾಗಿದೆ .
ಮಾನವನಿಗೆ ಆಲೋಚನೆ ಶಕ್ತಿ ಮತ್ತು ಮಾತನಾಡುವ ಶಕ್ತಿ ಇರುವುದರಿಂದಲೇ ಉತ್ತಮನಾಗಿದ್ದಾನೆ , ಭೂಮಿಯಲ್ಲಿ ಮನುಷ್ಯರ ನಡುವೆ ದ್ವೇಷ ಅಂಧಕಾರ ಅಳಿಸಿ , ಮನುಷ್ಯ ಮನುಷ್ಯನಾಗಿ , ದೀನ ದಲಿತರ ಸೇವೆಯಲ್ಲೇ ಭಗವಂತನ ಕಾಣುವ ಮೂಲಕ ಆಧ್ಯಾತ್ಮಿಕ ಶಕ್ತಿಯನ್ನು ಬೆಳೆಸಿಕೊಳ್ಳುವುದುದರ ಮೂಲಕ ಸಾಗಬೇಕಾಗಿದೆ .
ಜನರು – ಜಾತಿ ದೆವ್ವ ಭೂತ ವಾಸ್ತು ಹರಕೆಯೆಂಬ ಭಯದ ಪ್ರಳಯದಿಂದ , ಈ ಅನಿಷ್ಟ ಪದ್ಧತಿ ಮೌಢ್ಯತೆಯಿಂದ ಹೊರಬರಬೇಕಾಗಿದೆ .

ಮಾನವ ತನ್ನ ಸ್ವಾರ್ಥ ಅಹಂಕಾರ ಮೌಢ್ಯಗಳಿಂದ ಎಸುಗುತ್ತಿರುವ ದೌರ್ಜನ್ಯ , ಭೂಮಿಯ ಮೇಲೆ ನಡೆಸುತ್ತಿರುವ ಪರಿಸರ ಮಾಲಿನ್ಯ ನಾಶಗಳನ್ನು ನಿಯಂತ್ರಿಸಿದರೆ ಭೂಮಿ ಮತ್ತೆ ನಳನಳಿಸುತ್ತದೆ , ಜಲ ವಾಯು ಆಹಾರ ಭೂಮಿಯ ಮಾಲಿನ್ಯಗಳನ್ನು ನಿಯಂತ್ರಿಸಬೇಕಾಗಿದೆ .
ನೀಚ ಮಾಲಿನ್ಯಗಳನ್ನು ತೊಡೆದು ಹಾಕಲು ಅದಕ್ಕೆ ಇರುವುದು ಒಂದೇ ಮಾರ್ಗ , ಮನದ ಇಳೆಯ ಹಸನು ಮಾಡಿ ಅರಿವ ಬೆಳೆಯ ಫಸಲು ತೆಗೆದರೆ ಮಾತ್ರ ಬುವಿಯಲ್ಲಿ ನಿತ್ಯವು ನಿತ್ಯೋತ್ಸವ .

ಸರಿಯಾಗಲಿಲ್ಲ ಮಾಡು ಸರಿಯಿದಲ್ಲವೆನುತ
ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ
ಕೊರೆಯಾದೊಡೋ ನೊಂದು ನೆರೆದೊಡೋ ನಿನ್ನೊಂದು

ಒರಟು ಕೆಲಸವೊ ಬದುಕು ಮಂಕುತಿಮ್ಮ – ಡಿ ವಿ ಜಿ ಯವರ ನುಡಿಯಂತೆ ..!!


ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

One thought on “ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಲೇಖನ-ಆತ್ಮ – ಸತ್ಯಾಪನೆ!!

Leave a Reply

Back To Top