ಡಾ ದಾನಮ್ಮ ಝಳಕಿ ಕವಿತೆ-ಇದ್ದು ಬಿಡು ಇಲ್ಲದಂತೆ

ಕಾವ್ಯ ಸಂಗಾತಿ

ಡಾ ದಾನಮ್ಮ ಝಳಕಿ

ಇದ್ದು ಬಿಡು ಇಲ್ಲದಂತೆ

ಹೊಗಳಿಕೆಗೆ ಹಿಗ್ಗದೇ
ತೆಗಳಿಕೆಗೆ ಹೆದರದೇ
ಕಷ್ಟಕ್ಕೆ ಕರಗದೇ
ಸುಖಕ್ಕೆ ಹಿಗ್ಗದೇ
ಇದ್ದು ಬಿಡು ಇಲ್ಲದಂತೆ

ಸ್ನೇತರಂತೆ ನಟಿಸುತಾ
ಬಂಧುಗಳಂತೆ ಅಪ್ಪುತಾ
ಮೋಸದ ಜಾಲದಲಿ
ಜಗದ ನಂಟು ಇಲ್ಲದಂತೆ
ಇದ್ದು ಬಿಡು ಇಲ್ಲದಂತೆ

ನಾನೆಂಬ ಅಹಂ ತುಂಬಿ
ನನ್ನಿಂದ ಎಂದು ಬೀಗುತಿರುವ
ಹೋಗಳಿಕೆಯ ದಾಸರಿಗೆ
ನೀತಿ ಹೇಳದೇ
ಸುಮ್ಮನಿದ್ದು ಬಿಡು ಇಲ್ಲದಂತೆ

ಕಾಯಕ ದಾಸೋಹ ತತ್ವ ಪಾಲಿಸುತಾ
ಶರಣರ ಹಾದಿಯಲಿ ನಡೆಯುತಾ
ಲಿಂಗ ಬೇಧ ತೊರೆಯುತಾ
ನುಡಿಯಂತೆ ನಡೆಯುತಾ
ಇದ್ದು ಬಿಡು ಇಲ್ಲದಂತೆ

ಪ್ರಕೃತಿ ಸವಿಯುತಾ
ಸರಳ ಜೀವನ ಸಾಗಿಸುತಾ
ಕಾಯಕವೇ ಕೈಲಾಸ ಪಾಲಿಸುತಾ
ಅರಿವಿನ ಹಾದಿಯನು ಕಾಣುತಾ
ಇದ್ದು ಬಿಡು ಇಲ್ಲದಂತೆ

ಅಷ್ಟಾವರಣ, ಷಟಸ್ಥಲ ಆಚರಿಸುತಾ
ಬದುಕಿನಲಿ ಶರಣರಂತೆ ನಡೆಯುತಾ
ದಯವೇ ಧರ್ಮದ ಮೂಲ ಪಾಲಿಸುತಾ
ಮರಣವೇ ಮಹಾನವಮಿಯೆಂದು ಅರಿತು
ಇದ್ದು ಬಿಡು ಇಲ್ಲದಂತೆ

—————-

ಡಾ ದಾನಮ್ಮ ಝಳಕಿ

Leave a Reply

Back To Top