ಶಕುಂತಲಾ. ದಾಳೇರ ಕವಿತೆ-ಕನ್ನಡ ಕಾಣುತ್ತಿಲ್ಲ

ಕಾವ್ಯ ಸಂಗಾತಿ

ಶಕುಂತಲಾ. ದಾಳೇರ

ಕನ್ನಡ ಕಾಣುತ್ತಿಲ್ಲ

ಅಳಿಯದ ಆನಂದಭಾಷ್ಪದ ಭಾಷೆಯೇ
ಕನ್ನಡದ ಮಾತು ಖರ್ಚು ಆಗುತ್ತಿಲ್ಲವೆ
ಆರ್ದ್ರ ಕಣ್ಣುರೆಪ್ಪೆಗಳಲ್ಲಿ ನೋವು
ಕಣ್ಣೀರಿನ ಮಾಲೆ ಕೆನ್ನೆಗೆ ಮಾತ್ರ ನೇಯುತ್ತೇ

ನೆನಪಿರಲಿ…..

ಮೊದಲ ಮುಟ್ಟಿನ ನೋವು
ಮೊದಲ ಹುಟ್ಟಿನ ಕೂಗು
ಅವನಿಗೆ ಹರಿಸಿದ ಅವ್ವನ ಬೆವರು
ಈಗ ಅನಪೇಕ್ಷಿತ…
ಹರಿವ ಹಾಳೆಯ ಅಕ್ಷರದ ಪ್ರತ್ಯೇಕತೆ…

ABCDಯ ಕಟ್ಟಡಗಳೇ ತಲೆಯೆತ್ತಿವೆ
ಪರಭಾಷಾ ಪರದೇಶಿಯ ಬಲೆಯಲ್ಲಿ
ಹೊಟ್ಟೆ ಸೀಳದ
ಒತ್ತು ಕೊಂಬುಗಳ್ಳಿಲ್ಲದ
ಲಂಗು ಲಗಾಮು ಇಲ್ಲದ
ಇಪ್ಪತ್ತಾರರ ಬೇಬಿ ಬಾಯಲ್ಲಿ ಬಾಹೆಟ್ ಆಗಿದೆ
ಬಕೆಟ್ ಕೊಳದಲ್ಲಿ ಕನ್ನಡದ ಅಸ್ಮಿತೆ ಕಳೆದು ಕೊಂಡಿದೆ

ಕನ್ನಡ ಕಲಿತವರೆಲ್ಲ
ಕಾರ್ಣಿಕ ನುಡಿದು
ಸಿಟಿ ಮಾರ್ಕೆಟಗೆ ಸಿನ್ಸಿಯರ್ ಆಗಿ ಬೆತ್ತಲಾಗಿದ್ದಾರೆ

ಲಂಗ ದಾವಣಿ ಈಗಿಲ್ಲ ಬಿಡಿ
ಲಾಡಿಯಿಲ್ಲದ ಯೂನಿಫಾರ್ಮ್ಟೀ ಈಗೆಲ್ಲಾ
ಅದೇ ಅಲ್ಲವೇ
ಈಗೀಗ ಬೇಕಾಗಿರುವುದು
ಕುಪ್ಪಸ ಕುಂಡಿ ಕಾಣುವ ಡ್ರೆಸ್ಸು
ಗ್ಯಾದರಿಗೆಗೊಂದು ಡಾನ್ಸು

ಕನ್ನಡ ಕನ್ನಡಿಯಲ್ಲಿ ಕಂಡ ವಾಸ್ತವ
ಅಪ್ಪನ ಬೆರಳು ಎಣಿಸಿದ ಬೆವರು
ಅವ್ವನ ಗಂಟು ಕಟ್ಟಿದ ಸೆರಗು
ಕಾದ ಹಂಚಿನ ಕಸುವ ರೊಟ್ಟಿ
ಕಾವು ನೀಡಿದ ಹುಬ್ಬಿನ ಕಣ್ಣು
ಲೆಕ್ಕ ಹಾಕಿದ ಸಂತೆಯ ರೊಕ್ಕ

ಈಗಿಲ್ಲ …ಇಲ್ಲವೇ ಇಲ್ಲ..

ಕಾರಣ ಬಾಹೇಟ್ ಗೆ ಬಲಿಯಾದ ಕೋಣೆಯ ಕೂಸುಗಳು

ಅಂತವರಿಗಾಗಿ ಏನು ಹೇಳಲಿ ?
ಹೇಗೆ ತಿದ್ದಲಿ.. ?
ಹಪಹಪಿಸಿದೆ ಮಾತೆಗಾಗಿ ಈ ಮನ
ಎಲ್ಲಿ ಅರಸಲಿ ಕಸ್ತೂರಿ
ಕನ್ನಡಿಗರಿಗಾಗಿ ಇಹದಲ್ಲಿ

ರಿಯಾಲಿಟಿ ಗೊತ್ತೇ

ಬಿತ್ತಿ ಬೆಳೆದವರು ಬೆಳೆದು ದೊಡ್ಡವರಾದರು ಕನ್ನಡದಲ್ಲೇ
ಕನ್ನಡ ತೋಟದಲ್ಲೇ

ಬಿತ್ತಿದ ಅನ್ನಕಹಿಯಾಗಿದೆ ಆರ್ಥಿಕತೆಯ ಹೆಸರಿನಲ್ಲಿ
ಅರಿಯ ಕನ್ನಡ ಕುಡಿಗಳು
ಇಂಗ್ಲಿಷಿನ ಕೇಡಿಗಳಾಗಿದ್ದಾರೆ
ಅಕ್ಷರದ ದಾಹಕೆ ದುಡ್ಡು ಕೊಡುತಿದ್ದಾರೆ

ನೊಂದಲಾರದು
ನಂದಿಸಲಾರದು
ಕನ್ನಡದ ಕಿಡಿ ಹಾರಿಸಿದರೆ
ಜ್ವಾಲೆಯಾದಿತು
ಜ್ವಾಕಿ
ಅದು ಹೃದಯದ ಭಾಷೆ
ಒಪ್ಪಂದದಲ್ಲಿ ಸಂಭಂದವನು
ಸುಡದಿರಿ
ನೀವು ಸುಟ್ಟು ಕೊಳ್ಳದಿರೋ
ಕನ್ನಡಿಗರೇ..
ಕಣ್ಣಿದ್ದು ಕುರುಡರಾಗದಿರಿ…
ಕಾಲವಿನ್ನು ಕಾಯುತಿದೆ
ಕಾಲ ಮಿಂಚಿಲ್ಲವಿನ್ನು…!!


ಶಕುಂತಲಾ. ದಾಳೇರ.

Leave a Reply

Back To Top