ಆಶಾ ಯಮಕನಮರಡಿ ಕವಿತೆ-ಪಾತ್ರ

ಕಾವ್ಯ ಸಂಗಾತಿ

ಆಶಾ ಯಮಕನಮರಡಿ

ಪಾತ್ರ

ನನ್ನ ಹಣೆಬರಹಕ್ಕೆ ನೀನು ಕನ್ನಡಿಯಾಗಿದೆ
ಬರೆದವರು ಯಾರೋ ಗೊತ್ತಿಲ್ಲ ನನಗೆ
ಅಳಿಸಲಾಗದ ಬರಹ ಕಾಣದು ಯಾರಿಗೆ
ನೀ ಬಂದು ತೋರಿದೆ ವಿಧಿ ಲಿಖಿತದಂತೆ

ಅವನಾಜ್ಞೆ ಇಲ್ಲದೆ ಜರುಗದು ತೃಣವದು
ಎಲ್ಲರ ಭೇಟಿಯದು ಋಣಾನುಬಂಧದಂತೆ
ನಾವು ಸಂಧಿಸಿ ಬಂಧಿಯಾದೆವು ಬಾಳಲಿ
ನಾಟಕದ ಪಾತ್ರಧಾರಿಗಳಾಗಿ ನಟಿಸುತಿಹೆವು

ಜಾತಿ ಕುಲ ಅಧಿಕಾರ ಅಂತಸ್ತು ಎಲ್ಲವು ಸಮ
ನೂರಾರೂ ಕಡೆಗೆ ಹುಡುಕಿ ಕೂಡಿಸಿದರು
ಎಲ್ಲವು ಹೊಂದಿತ್ತಾದರು ಬೆರೆಯಲಿಲ್ಲ ಮನ
ಬ್ರಹ್ಮ ಗಂಟಿನ ನೆಪಕ್ಕೆ ಕೊರಳಾದ ಆ ಕ್ಷಣ

ಎಲ್ಲರ ಗೌರವ ಉಳಿಸಲು ಪಣವಾದಾಕೆ
ಸೊಲ್ಲನಡಗಿಸಿ ಕೊಂಡು ಸುಮ್ಮನಿರುವಳು
ಗೊತ್ತು ಆಕೆಗೂ ಅಂಕದಾಪರದೆ ಜಾರಬೇಕು
ಅಲ್ಲಯವರೆಗೂ ಬಣ್ಣಬಳೆದ ಮುಖದಲ್ಲಿ
ನಗೆ ಇರಲೇ ಬೇಕು


ಆಶಾ ಯಮಕನಮರಡಿ

Leave a Reply

Back To Top