ಗಾಯಿತ್ರಿ ಮೋನಪ್ಪ ಬಡಿಗೇರಕವಿತೆ- ಮಲ್ಲಿಗೆ

ಕಾವ್ಯ ಸಂಗಾತಿ

ಗಾಯಿತ್ರಿ ಮೋನಪ್ಪ ಬಡಿಗೇರ

ಮಲ್ಲಿಗೆ

ಮನಿಮುಂದ ಗ್ವಾಡಿ ಮ್ಯಾಗ
ಮನಿಹಿಂದ ಹಿತ್ತಲ್ಲದಾಗ
ಹೆಣಿಕೆ ಹೆಣೆದ ಬಳ್ಯಾಗ
ಹಚ್ಚ ಹಸಿರ ಗುಂಪಿನ್ಯಾಗ
ಪೆಣಿಕಿ ಮೊಸರ ಚೆಲ್ಲಿದಾಂಗ
ಸಾಲು ಮೇಲಿನ ಮೊಗ್ಗಿನ್ಯಾಗ
ಅರಳಿದ ಮಲ್ಲಿಗೆ ಮನಸ್ಸೆಳೆದಾಗ
ಹೃದಯ ಅರಳಿತಾಗ

ಬೆಳ್ಳಿಚುಕ್ಕಿ ಮುನುಗುವ
ಮೂಡಲು ಹರಿಯುವ
ಮಂಜು ಮುಸುಕುವ
ನಸಕಿನ ಜಾವ
ಪರಿಮಳ ಚೆಲ್ಲುವ
ಸೊಬಗನ್ನು ಬೀರುವ
ಜಾಜಿ ಮಲ್ಲಿಗೆ ಹೂವ
ಜಡೆ ತುಂಬ ಮುಡಿಯುವೆ

ಉಡಿ ತುಂಬಿದ ಮಲ್ಲಿಗೆ
ಪದರುಳ್ಳ ಮಲ್ಲಿಗೆಯ ಬಗೆ
ಹಾಕಿದೆ ಸೂಜಿ ದಾರಿಗೆ
ಅಂದ ಕಾಣುವ ಹಾರಿಗೆ
ಮಾರೂದ್ದ ಜಡೆಯ ನಾರಿಗೆ
ಸೌಂದರ್ಯ ಚೆಲುವೆಗೆ
ಮುಡಿಸಿದೆ ಮೆಲ್ಲಗೆ

…..———————-


ಗಾಯಿತ್ರಿ ಮೋನಪ್ಪ ಬಡಿಗೇರ

Leave a Reply

Back To Top