ಕಾವ್ಯ ಸಂಗಾತಿ
ಜಿ. ಶಿವಕುಮಾರ್ ಸೋಗಿ
ಶೋಷಣೆ
ಕೆಲವೊಮ್ಮೆ ಹಾಗೆ, ಮಾತು ಮೌನವಾಗಿಬಿಡುತ್ತೆ
ಒಮ್ಮೊಮ್ಮೆ ಮೌನವೇ ಮಾತನಾಡಿಬಿಡುತ್ತೆ!
ರಾತ್ರಿ ಕಂಡ ಕನಸು ನನಸಾಗಬೇಕೆಂದೇನಿಲ್ಲವಲ್ಲ
ಬಿದ್ದಾಗ-ಬಿದ್ದವರಿಗೆ!
ಹಾಗಿಲ್ಲದೆ ಹೇಳುತ್ತಾರಯೇ ಇದು ಬಯಸದೆ ಬಂದ ಭಾಗ್ಯ.
ಗೆದ್ದಾಗ-ಗೆದ್ದವರು!
ಕೆಲವೊಮ್ಮೆ ಹಾಗೆ, ಮಾತು ಮೌನವಾಗಿಬಿಡುತ್ತೆ
ಒಮ್ಮೊಮ್ಮೆ ಮೌನವೇ ಮಾತನಾಡಿಬಿಡುತ್ತೆ!
ಬದುಕು ಬೇಡವೆಂದರೂ ಬಣ್ಣ ಬಣ್ಣ ಕೆಲವರಿಗೆ
ಬಣ್ಣ-ಬಂದಾಗ!
ಬದುಕನ್ನೆ ಬಗೆ ಬಗೆದು ಬಣ್ಣಗೆಟ್ಟವರು ಹಲವರು.
ಬಣ್ಣ-ಮಾಸಿದಾಗ!
ಕೆಲವೊಮ್ಮೆ ಹಾಗೆ, ಮಾತು ಮೌನವಾಗಿಬಿಡುತ್ತೆ
ಒಮ್ಮೊಮ್ಮೆ ಮೌನವೇ ಮಾತನಾಡಿಬಿಡುತ್ತೆ!
ಸತ್ಯ ಹೇಳುವ ನಾಲಿಗೆಗೂ ಏಕೋ ನಾಚಿಕೆ
ಕಂಡು-ಕಾಣದಂತಿರುವವರು!
ನ್ಯಾಯ ಕೇಳಲು ಕಿವಿಗೂ ಅಂಜಿಕೆ.
ಕಂಡರೂ-ಕೆಳದಿರುವವರು!
ಕೆಲವೊಮ್ಮೆ ಹಾಗೆ, ಮಾತು ಮೌನವಾಗಿಬಿಡುತ್ತೆ
ಒಮ್ಮೊಮ್ಮೆ ಮೌನವೇ ಮಾತನಾಡಿಬಿಡುತ್ತೆ!
ನೋಡುವವರ ಕಣ್ಣಿಗೆ ಕಾಮಾಲೆಯೋ
ಹೇಳುವವರ ಕಂಟದಲ್ಲಿ ಕಾಮದಲೆಯೋ
ಜಾಣ-ಕುರುಡ,ಕಿವುಡರ ಸಂಘದಲ್ಲಿ
ಪುಂಡಪೋಕರಿಗಳೆಲ್ಲ ಪಂಡಿತರೇ!
ಕೆಲವೊಮ್ಮೆ ಹಾಗೆ, ಮಾತು ಮೌನವಾಗಿಬಿಡುತ್ತೆ
ಒಮ್ಮೊಮ್ಮೆ ಮೌನವೇ ಮಾತನಾಡಿಬಿಡುತ್ತೆ!
ಜಿ. ಶಿವಕುಮಾರ್ ಸೋಗಿ
ಸೂಪರ್…