ಕಾವ್ಯ ಸಂಗಾತಿ
ಅನಿತಾ ಶೆಟ್ಟಿ
ಕನಸುಗಳಿಗೆ ಜೋಂಪು

ಕತ್ತು ಸೋತಿದೆ …
ಕಾಣದಾದ ಕನಸುಗಳು ಜೋಂಪು ಹಿಡಿದಿದೆ
ಹಕ್ಕಿ ಕಾನು ಬಿಟ್ಟು ಗೂಡು ಸೇರಬೇಕಿತ್ತು
ಗೂಡು ಸೋರುತಿದೆಯಲ್ಲ ..
ಮತ್ತೆ ಮುಸುಕಿನ ಗುದ್ದಾಟ ಬೇಡವಾಗಿತ್ತು
ಹಾಗೆ ಕಲ್ಪನೆಯ ಗಾಳಿಯ ಹಿತ
ಮಂಜಿನ ತಂಪು
ಮುದ್ದಾಗಿ ಬೆನ್ನ ಸವರಿತ್ತು
ಕನಸುಗಳಿಗೆ ಕಾಯಕಲ್ಪ ಇಲ್ಲ ಬಿಡಿ
ತಾರೆಗಳ ಸಲ್ಲಾಪಕ್ಕೆ ಕೊನೆ ಇರಲಿಲ್ಲ
ತಂಗಾಳಿಯ ಸ್ಪರ್ಶಕ್ಕೆ ನಾಚಿ ನೀರಾಗುತ್ತಿದ್ದರವರು ಹಾಗೆ ಬೆಳದಿಂಗಳ ಸ್ಪುರಣೆ..
ಕಣ್ಣ ನೋಟ ಶೃಂಗ ತಲುಪಿತ್ತು
ತ್ರಿಶಂಕು ಸ್ವರ್ಗ.. ಅಯೋಮಯ
ಮರಳಿ ಗೂಡಿಗೆ… ಮೋಡ ಮತ್ತೆ ಕಟ್ಟಲಿಲ್ಲ
ಸೋನೆ ಮಳೆಗೆ ಸೋರುತ್ತಿದ್ದ ಗೂಡು ..
ಕೊನೆಯ ಎಳೆ ಕಳಚಿ ಅನಾಥವಾಗಿತ್ತು
ಕನಸುಗಳಿಗೆ ಜೋಂಪು…
ಅನಿತಾ ಶೆಟ್ಟಿ
