ಹನಿಬಂದು ಕವಿತೆ-ತಿಳಿಯದೆನಗೆ..

ಕಾವ್ಯಸಂಗಾತಿ

ಹನಿಬಿಂದು

ತಿಳಿಯದೆನಗೆ..

ತಿಳಿದ ಜನ ಎಂದು ಅರಿತ
ಮಂದಿ ನಮ್ಮ ಬೆನ್ನ ಹಿಂದೆ
ಏನ ಮಾತ ಆಡಿದರೂ
ತಿಳಿಯದೆನಗೆ ಜಗದ

ಬಂಧು,ಬಳಗ ಗೆಳೆಯ ಕಲ
ಕಹಿಯೆನಿಸಲು ಹಲವು ಸಲ
ಅವರ ಬಿತ್ತರಿಸುವ ಕಲೆಯು
ತಿಳಿಯದೆನಗೆ ಜಗದಲಿ

ಸಖ ಸಖಿಯರು ಎನಿಸಿಕೊಂಡ
ಎದೆಯ ಗುಡಿಗೆ ಸನಿಹವಾದ
ನನ್ನನಷ್ಟು ಬಳಸಿಕೊಂಡ
ಜನರ ಮನದ ಒಳ ಭಾವದ
ಸಣ್ಣ ಹನಿಯ ಬಿಂದು ಕೂಡ
ತಿಳಿಯದೆನಗೆ ಜಗದಲಿ

ಸುತ್ತ ಮುತ್ತ ಸಾಸಿರ ಜನ
ಕಷ್ಟ ಬರಲು ಇಲ್ಲ ಕಣ
ಬೆಟ್ಟದಂತೆ ಕಠಿಣ ಮನ
ಜೀವಂತ ಸತ್ತ ಹೆಣ!
ತಿಳಿಯದೆನಗೆ ಜಗದಲಿ

ನಾಯಿ ನರಿ ಕತ್ತೆ ಹುಲಿ
ಕಾಯಿ ಹಣ್ಣು ಹೂವು ಎಲೆ
ಎಲ್ಲ ತರದ ನೈಜ ಕಳೆ
ಬಾಳ ಹಾದಿ ನಿತ್ಯ ಎಳೆ
ತಿಳಿಯದೆನಗೆ ಜಗದಲಿ

ರಾಶಿ ರಾಶಿ ಆಲೋಚನೆ
ಕೋಟಿ ಕೋಟಿ ಕನಸುಗಳು
ನನಸ ದಾರಿ ಅರಿವು ಹೇಗೋ
ದುಃಖ ನೋವು ದಾರಿಯಲ್ಲಿ
ತಿಳಿಯದೆನಗೆ ಜಗದಲಿ

ಮಾತಿನಲ್ಲಿ ಮಮಕಾರ
ಮೆದುಳಿನಲ್ಲಿ ಹಾಹಾಕಾರ
ದೇಹದಲ್ಲಿ ಅಲಂಕಾರ
ಎದುರಿನಲ್ಲಿ ಜೈ ಜೈ ಕಾರ
ಹಿಂದೆ ಹೇಗೋ ಏನೋ ಎಂದು
ತಿಳಿಯದೆನಗೆ ಜಗದಲಿ

ಮನದಿ ಒಂದು ಎದೆಯಲೊಂದು
ಭಾವವೊಂದು ಮಾತು ಒಂದು
ಆಲೋಚನೆ ಮತ್ತೊಂದು
ಯಾರು ಎಲ್ಲಿ ಹೇಗೆ ಎಂದು
ತಿಳಿಯದೆನಗೆ ಜಗದಲಿ


Leave a Reply

Back To Top