ಕಾವ್ಯ ಸಂಗಾತಿ
ಅಶ್ವಿಜ ಶ್ರೀಧರ್
ಪ್ರೀತಿಯಲ್ಲವೇ…..
ಇರದು ಎಂದೂ ಅಭ್ಯಂತರ
ಭಾವ ಒಂದೇ ಇಲ್ಲಿ ಸುಂದರ
ನನಗೆ ನೀನು ನಿನಗೆ ನಾನು
ಪ್ರೀತಿಯಲ್ಲವೇ ಇದು ಪ್ರೀತಿಯಲ್ಲವೇ…!
ಬೆರೆತ ಕ್ಷಣ ಮರೆತೆ ನೋವ
ಬೆಳೆಸಬೇಕೇ ಪಡೆದ ಗೆಲುವ
ಮನದ ಒಳಗೆ ನಗುವ ಭಾವ
ಪ್ರೀತಿಯಲ್ಲವೇ ಇದು ಪ್ರೀತಿಯಲ್ಲವೇ…!
ನಡೆಯಬೇಕು ಹೆಜ್ಜೆ ದೂರ
ತಿಳಿಸಬೇಕು ವಿಷಯ ಸಾರ
ನೆನೆದಂತೆ ಮನವು ಹಗುರ
ಪ್ರೀತಿಯಲ್ಲವೇ ಇದು ಪ್ರೀತಿಯಲ್ಲವೇ…!
ಕಣ್ಣಿನಲ್ಲೇ ಮಾತು ಪೂರ
ಮನದಲ್ಲಿ ಅರ್ಥ ಸಾವಿರ
ನೀಜೊತೆಯಿರೆ ಮೌನ ದೂರ
ಪ್ರೀತಿಯಲ್ಲವೇ ಇದು ಪ್ರೀತಿಯಲ್ಲವೇ…!
ಕನಸು ಕಂಗಳಲಿ ಸಂತಸ ತರುವ
ಬಿಡೆನು ಹಿತವಿರುವ ಈ ಬಂಧವ
ಬಿಡಿಸಿ ಸ್ವಲ್ಪ ಹೇಳು ಗೆಳೆಯಾ
ಪ್ರೀತಿಯಲ್ಲವೇ ಇದು ಪ್ರೀತಿಯಲ್ಲವೇ…!
ಸಹೋದರಿ ಅಶ್ವಿಜರೇ,
ಸಾಹಿತ್ಯವನ್ನು ಆಲಿಂಗಿಸಿಕೊಂಡು ಕಾವ್ಯ, ಕವಿತೆಗಳನ್ನು ಅತ್ಯಂತ ಪ್ರೀತಿಯಿಂದ ಗೀಚುತ್ತಿರುವುದರಿಂದ ನೀವು ಸಾಹಿತ್ಯವನ್ನು ಪ್ರೀತಿಸುತ್ತಿರುವುದು ಪ್ರೀತಿಯಲ್ಲವೇ?ಪ್ರೀತಿಯಲ್ಲದೆ ಮತ್ತೇನೂ ಅಲ್ಲವೇ ಅಲ್ಲ.ಬರಹ ತುಂಬಾನೆ ರಸವತ್ತಾಗಿ ಮೂಡಿ ಬಂದಿದೆ..ಅಭಿನಂದನೆಗಳು ನಿಮಗೆ ಸಾಹಿತ್ಯದ ಪಯಣ ಇನ್ನಷ್ಟು ಎತ್ತರಕ್ಕೇರಲಿ.ಶುಭವಾಗಲಿ.ಜಿ ಮಂಜುನಾಥ ಸವಣಾಲು
ಧನ್ಯವಾದಗಳು ಮಂಜುನಾಥಣ್ಣ