ಎಸ್. ಜೇ. ಟಿ. ಸ್ವಾಮಿ ಚುಟುಕುಗಳು

ಕಾವ್ಯ ಸಂಗಾತಿ

ಎಸ್. ಜೇ. ಟಿ. ಸ್ವಾಮಿ

ಚುಟುಕುಗಳು

.
ಇಷ್ಟು ದಿನ ಪಟ ಪಟ ಮಾತಾಡ್ತಿದ್ದಳು
ಬೇಕೆಂದು ಬೆಳ್ಳಿ
ಈಗ ಸುಧೀರ್ಘ ಮೌನ
ಕೊಡಿಸಬೇಕಿದೆ ಬಂಗಾರ.

ಆಗ ಅವಳ ನಲುಮೆಯ ಓಲೆ ನೋಡಿ
ಓಲೆ ಓಲೆ ಓಲೆ….
ಈಗ ಕೇಳಿದಾಗ ಕಿವಿಯೋಲೆ..
ಒಲ್ಲೆ… ಒಲ್ಲೆ…. ಒಲ್ಲೆ…..

ಅವನೆಂದ ” ನಲ್ಲೆ ,
ನಿನಗೇನು ಕೊಡಲಿ?
ಅವಳೆಂದಳು ‘ ಅಪ್ಪ ಹಿಡಕೊಂಡು
ಬಂದಾನ ಕೊಡಲಿ’

ಸಿಗಲಿಲ್ಲ ಅವನಿಗೆ,
ಬಟ್ಟಲುಗಣ್ಣಿನ ಚೆಲುವೆ,
ಈಗ ಪ್ರತಿದಿನ ಹಿಡಿದಿದ್ದಾನೆ
ಶರಾಬಿನ ಬಟ್ಟಲು!

ಹೊರಗೆ ಜನರ ಆರ್ಭಟ
ಕ್ರಾಂತಿ ಕ್ರಾಂತಿ ಕ್ರಾಂತಿ
ಒಳಗೆ ಮಹಾ ಮಂತ್ರಿಗಳ
ವಿಶ್ರಾಂತಿ, ವಿಶ್ರಾಂತಿ!

ಪ್ರೇಯಸಿ ನೋಡುವ ಪುಳಕ,
ಕಾದಿದ್ದ ಬೆಳತನಕ
ಮಡದಿಯಾದ ಮೇಲೆ ತಪ್ಪಿಸಿಕೊಳ್ಳಲು
ಹುಡುಕುತ್ತಿದ್ದಾನೆ ನೆವಕ!

ಅವಳಿದ್ದಾಗ ದಿನಾ
ಮನೆಯಲ್ಲಿ ಸಾಂಬಾರು
ಇಲ್ಲದಿದ್ದಾಗ ಬರೀ
ಬೀರಲ್ಲಿ ಬಾರಿನ ಬೀರು!

ಹಿಂದಿನ ರಾಮ ಗೆದ್ದ ಸೀತೆಯನ್ನು
ಎತ್ತಿ ಶಿವನ ದೊಡ್ಡ ಬಿಲ್ಲು.
ಇಂದಿನ ಸೋಮ ಸೋತ ಗೀತಾಳನ್ನು
ಎತ್ತಲಾರದೇ ಹೋಟೆಲ್ ಬಿಲ್ಲು!

ಅವಳ ಹಿಂದೆ ಓಡಾಡಿ
ಅಲೆದಾಡಿ …ಸುತ್ತಾಡಿ…
ಸಾಕಾಗಿ ಬಿಟ್ಟನೀಗ
ಉದ್ದನೆಯ ದಾಡಿ!

ಎಷ್ಟಿದ್ದರೇನು
ಜಗದಲಿ ಜನಗಳು?
ಮನೆ ಬೆಳಗಲು
ಸಾಕು ಒಬ್ಬ ಮಗಳು!



7 thoughts on “ಎಸ್. ಜೇ. ಟಿ. ಸ್ವಾಮಿ ಚುಟುಕುಗಳು

Leave a Reply

Back To Top