ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ಕಣ್ಣಿಗೂ ಪ್ರೀತಿಗೂ ಇರುವ ಬಂಧವೇನದು..

ಆಖೋಂಹಿ ಆಖೋಂಮೆ ಇಶಾರಾ ಹೋಗಯಾ
ಬೈಠೆ ಬೈಠೆ ಜೀನೆ ಕಾ ಸಹಾರಾ ಹೋಗಯಾ..

ಮೊದಲು ಗುರಿಯಿಟ್ಟದ್ದೇ ಕಣ್ಣುಗಳಲ್ಲವಾ. ಹೃದಯವೊಂದು ಹೃದಯಕ್ಕೆ ಕೊಡುವ ಸೂಚನೆಯೇ ಕಣ್ಣಿನ ಮೂಲಕವಲ್ಲವಾ. ಆ ಕಣ್ಸನ್ನೆಯೇ ಬಾಳಿ ಬದುಕಲು ಒಂದು ನೆಪವಾಗಿಬಿಡುತ್ತದೆ. ಆಸರೆಯಾಗಿ ನಿಲ್ಲುತ್ತದೆ. ಇದೇನಿದು ಹೀಗೆ ಹಾಡು ಹಾಡುತ್ತಿರುವುದು? ಹೃದಯದ ಬಳಿ ಅದೇಕೆ ಆ ಕೈ? ಅದ್ಯಾವ ಧ್ಯಾನದಲ್ಲಿ ಮುಳುಗಿದೆ? ಅಂಥದ್ದೇನಾಗಿದೆ? ಇಂಥ ಸ್ಥಿತಿ ಬಂದಿದ್ದಾದರೂ ಯಾವಾಗ? ಎಂದೆಲ್ಲ  ಕೇಳಿಬಿಡಬಾರದೇ? ಗುಟ್ಟೆಲ್ಲವ ಹೇಳಿಬಿಡಬಾರದೇ? ಹೀಗೆ ಎಲ್ಲ ಪ್ರಶ್ನೋತ್ತರಗಳೂ ಕಣ್ಣಂಚಲ್ಲೇ ನಡೆಯುತ್ತಿದೆ.
ಕೈಸಾ ಯೆ ಪ್ಯಾರ್ ಹೆ ಕೈಸಾ ಯೆ ನಾಝ್ ಹೆ
ಹಮ್ ಭೀ ತೋ ಕುಛ್ ಸುನೆ ಹಮ್ಸೆ ಕ್ಯಾ ರಾಝ್ ಹೆ..
ಗಾತೆ ಹೋ ಗೀತ್ ಕ್ಯೂ
ದಿಲ್ ಪೆ ಕ್ಯೂ ಹಾಥ್ ಹೆ
ಖೋಯೆ ಹೋ ಕಿಸ್ ಲಿಯೆ
ಐಸೀ ಕ್ಯಾ ಬಾತ್ ಹೆ
ಯೆ ಹಾಲ್ ಕಬ್ ಸೆ ತುಮ್ಹಾರಾ ಹೋಗಯಾ.
.

ಕದ್ದು ನೋಡುವೆ ಏಕೆ ಎಲೆ ಕಣ್ಣೇ
ಕದಿವುದೆಲ್ಲಾ ನಲುಮೆಯಲದ್ದಿರುವಾಗ..

ಒಲವಿನ ರೂಪವನ್ನು ನೋಡುವ ಮಾಧ್ಯಮವೇ ಕಣ್ಣಲ್ಲವಾ? ಕಣ್ತುಂಬ ನೋಡದಿದ್ದರೆ ಒಲವಲ್ಲವಾ? ಅದಕ್ಕೆಷ್ಟು ಅಡೆತಡೆ! ಕದ್ದುಮುಚ್ಚಿ ನೋಡುವ ಸಂಕಟ. ಇನ್ನಷ್ಟು ಮತ್ತಷ್ಟು ಅಂದವನ್ನು ನೋಡುವ ಆತುರ. ಆದರೆ ದಿಟ್ಟಿಸಿ ನೋಡಲು ದೃಷ್ಟಿಯಾದರೆ ಎಂಬ ಭಯ. ಸುತ್ತಲಿನವರು ಗಮನಿಸಿದರೆ ಎಂಬ ಸಂಕೋಚ. ಕಣ್ಣುಗಳು ಸಂಧಿಸಿದಾಗ ನಾಚಿಕೆ..ನೋಡುವ ಆಸೆಗೊಂದು ಬೇಲಿ ಹಾಕಬೇಕಿದೆ. ಪ್ರೀತಿಯು ಕೈಗೂಡುತ್ತಿರುವಾಗ ಕಣ್ಣುಗಳಿಗೆ ತಾಳ್ಮೆ ಕಲಿಸಬೇಕಿದೆ.
ರೂಪವ ನೋಡೆ ಆತುರವೆ
ದೃಷ್ಟಿ ತಾಕೀತೆಂಬ ಕಾತುರವೆ
ಆರಂಭವೀಗ ಬದುಕು ಕಾದಿರುವಾಗ
ಅವಸರವೇಕೀಗ ಎಲ್ಲವೂ
ನಿನ್ನದೆ ಆಗಿರುವಾಗ..

ಯೆ ಆಂಖೆ ದೇಖಕರ್ ಹಮ್ ಸಾರಿ
ದುನಿಯಾ ಭೂಲ್ ಜಾತೆ ಹೆ
ಇನ್ಹೆ ಪಾನೇ ಕಿ ಧುನ್ ಮೆ ಹರ್ ತಮನ್ನ
ಭೂಲ್ ಜಾತೆ ಹೆ..

ಈ ಕಣ್ಣೇ ಅಲ್ಲವೇ ದಾರಿ ತಪ್ಪಿಸಿದ್ದು. ಇದನ್ನು ಕಂಡೇ ಅಲ್ಲವೇ ಪ್ರಪಂಚವನ್ನೇ ಮರೆತುಹೋದದ್ದು. ಇದನ್ನು ಪಡೆಯುವ ಧ್ಯಾನದಲ್ಲೇ  ತಾನೇ ಬೇರೆಲ್ಲ ಆಕಾಂಕ್ಷೆಗಳನ್ನು ಮರೆತಿದ್ದು. ಆಡಬೇಕಾದ ಮಾತುಗಳು ಎಷ್ಟೆಲ್ಲ ಮನಸ್ಸಲ್ಲಿದ್ದರೂ ಎದುರುಬದುರು ಬಂದಾಗ‌ ಮರೆತುಹೋಗುವುದು. ಅದು ಹಾಗೇ ಅಲ್ಲವಾ ಪ್ರೀತಿಯಲ್ಲಿ ತುಟಿಗಳು ಸುಮ್ಮನಾಗುವುದು ಮತ್ತು ಕಣ್ಣುಗಳೇ ಮಾತಿಗಿಳಿಯುವುದು. ಮರೆತಿದ್ದ ಎಲ್ಲಾ ಭಾವನೆಗಳನ್ನೂ ಮಾತಿನ ರೂಪವಾಗಿಸಿ ತಲುಪಿಸಿಬಿಡುವುದು..
ಮೊಹಬ್ಬತ್ ಮೆ ಜ಼ುಬಾ ಚುಪ್ ಹೋ ತೋ
ಆಂಖೆ ಬಾತ್ ಕರತೀ ಹೆ
ವೋ ಕೆಹೆದೇತೀ ಹೆ ಸಬ್ ಬಾತೆ
ಜೋ ಕೆಹೆನಾ ಭೂಲ್ ಜಾತೆ ಹೆ…

ಕಣ್ಣು ಕಣ್ಣು ಒಂದಾಯಿತು
ನನ್ನ ನಿನ್ನ ಮನ ಸೇರಿತು..
ಕಣ್ಣು ಕಲೆತಾಗ ಮನಸ್ಸು ಬೆರೆತಾಗ ಬರೀ ಕನಸೇ ಮುಂದೆ. ಪ್ರಿಯರಾದವರಿಗಿಂತ ಸುಂದರ ಬೇರೆ ಯಾರೂ ಇಲ್ಲ. ಅವರ ಮಾತೇ ಅಂತಿಮ.
ಹೂವಿಗಿಂತ ಚಂದ ಈ ನಿನ್ನ ಮೊಗದ ಅಂದ
ಕಾಣುವ ಕಣ್ಣಿಗೆ ಏನೋ ಆನಂದ..

ಒಂದು ಮನೆಯ ಕಣ್ಣೇ ಹೆಣ್ಣು. ಆ ಹೆಣ್ಣಿನ ವೈಶಿಷ್ಟ್ಯವೇ ಅವಳ ಕಣ್ಣು. ನೋವು ನಲಿವು, ಸುಖ ದುಃಖ ಎಲ್ಲಕ್ಕೂ ಕಾರಣವೇ ಅವಳು.
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ..

ಯೆ ಹೋ ಕಹಿ ಇನ್ಕಾ
ಸಾಯಾ ಮೇರೆ ದಿಲ್ ಸೆ ಜಾತಾ ನಹಿ
ಇನ್ಕೆ ಸಿವಾ ಅಬ್ ತೋ ಕುಛ್
ಭಿ
ನಝರ್ ಮುಝ್ ಕೋ ಆತಾ ನಹಿ...


ಎಲ್ಲೇ ಇರಲಿ ಇದು, ಹೃದಯದ ಮೇಲೆ ಎಂದಿಗೂ ತಂಪಾದ ನೆರಳಾಗಿರುವುದು. ಹೇಗೇ ಇರಲಿ ಇದಲ್ಲದೇ ಬೇರೆಲ್ಲೂ ಏನೂ ಕಾಣದೆ ಹೋಗುವುದು. ಪೆಟ್ಟು ಬಿದ್ದಾಗ, ನೋವಲ್ಲಿ ನರಳುವಾಗ ಕೂಗಿ ಸಂತೈಸುವುದು. ಎಂದೆಂದಿಗೂ ಸಹಯಾತ್ರಿಯಾಗಿ ಜೊತೆಗಿದ್ದು ಆಸರೆಯಾಗುವುದು. ಇಷ್ಟು ಸಾಕಲ್ಲ!!
ಠೋಕರ್ ಜಹಾ ಮೇನೆ ಖಾಯಿ
ಇನ್ಹೋನೆ ಪುಕಾರಾ ಮುಝೆ
ಯೆ ಹಮ್ಸಫರ್ ಹೆ ತೋ
ಕಾಫಿ ಹೆ ಇನ್ಕಾ ಸಹಾರಾ ಮುಝೆ..
ಯೆ ಉಠೆ ಸುಬಹ್ ಚಲಿ
ಯೆ ಝುಕೆ ಶಾಮ್ ಢಲಿ
ಮೇರಾ ಜೀನಾ ಮೇರಾ ಮರ್ನಾ
ಇನ್ಹಿ ಪಲಕೋಂಕೆ ತಲೆ…

ಏಳುತ್ತಿದ್ದರೆ ಬೆಳಗಾಗುವುದು. ಬಗ್ಗಿ ನಿಂತಾಗ ಸಂಜೆಯಾಗುವುದು. ಜೀವನ ಮರಣಗಳೆಲ್ಲವೂ ಈ ಕಣ್ಣೆವೆಗಳ ಅಂಚಲ್ಲೇ ನಿರ್ಧಾರವಾಗಿಬಿಡಬಹುದು. ಅಬ್ಬ ಆ ಕಣ್ಣುಗಳ ಶಕ್ತಿಯೇ! ಆ  ನಯನಗಳಲ್ಲದೇ  ಈ ಜಗತ್ತಿನಲ್ಲಿ ಬೇರೆ ಇದೆಯಾದರೂ ಏನು ಹಾಗಾದರೆ?
ತೇರಿ ಆಖೋಂಕೆ ಸಿವಾ
ದುನಿಯ ಮೆ ರಖಾ ಕ್ಯಾ ಹೆ..

ಜೀವನ್ ಸೆ ಭರಿ ತೇರಿ ಆಂಖೆ
ಮಜಬೂರ್ ಕರೆ ಜೀನೇ ಕೇಲಿಯೆ
ಸಾಗರ್ ಭೀ ತರಸ್ತೇ ರೆಹೆತೆ ಹೆ
ತೇರೆ ರೂಪ್ ಕಾ ರಸ್ ಪೀನೇ ಕೇಲಿಯೆ..

ಪ್ರೀತಿಯ ಸೂಸುವ ಆ ಕಣ್ಣುಗಳು ಅದೆಷ್ಟು ಜೀವನ್ಮುಖಿ ಪ್ರೇಮಿಯ ಪಾಲಿಗೆ. ಬದುಕುವ ಅನಿವಾರ್ಯತೆ ಸೃಷ್ಟಿಸುವ ಸಂಜೀವಿನಿಯದು. ಇನ್ನು ಆ ತುಟಿಗಳ ರಸ ಹೀರಲು ಸಾಗರದಂಥ ಸಾಗರವೇ ದಾಹದಿಂದ ಬಳಲಿ ದೇಹಿ ಎಂದುಬಿಡುತ್ತದೆ. ಪ್ರಿಯೆಯ ಕಣ್ಣುಗಳನ್ನು ಬಣ್ಣಿಸಲು ಅವನಲ್ಲಿ ಪದಗಳದೇ ಕೊರತೆ. ಚಿತ್ರವಾಗಿಸಲು ಬಣ್ಣಗಳೂ ಸಾಲದಾಗತ್ತೆ.
ಆಹಾ ಎಂಥ ಚಂದದ ಕಣ್ಣುಗಳವು. ಅವುಗಳಲ್ಲೇ ಜೀವ ಅಡಗಿದೆ. ಅವನ್ನು ನೋಡುನೋಡುತ್ತ ಬದುಕನ್ನೇ ಕಳೆಯಬಿಡಲೂ ಸಾಧ್ಯವಿದೆ.
ಕ್ಯಾ ಖೂಬ್ ಆಂಖೆ ಹೆ ತೇರಿ
ಇನ್ ಮೆ ಜ಼ಿಂದಗಾನೀ ಹೆ ಮೇರಿ
ಜೀಲೇಂಗೆ ಹಮ್ ದೇಖ್ ದೇಖ್ ಕೆ ಇನ್ಕೋ..
ತುಮ್ ಸೆ ಬಢಕರ್ ದುನಿಯಾ ಮೆ
ನಾ ದೇಖಾ ಕೋಯೀ ಔರ್..

ನೂರು ಕಣ್ಣು ಸಾಲದು ನಿನ್ನ ನೋಡಲು
ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು..

ಎಷ್ಟು ಕಣ್ಣುಗಳಿದ್ದರೂ ಸಾಲದು ರೂಪ ನೋಡಲು. ಎಷ್ಟು ಪದಪುಂಜಗಳಿದ್ದರೂ ನೆನಪಾಗದು ಸೌಂದರ್ಯವ ಹೊಗಳಲು.
ಈ ಹೊಳೆವ ಕಣ್ಣ ನೋಟ
ಮುಂಗುರುಳ ತೂಗುವಾಟ
ಈ ಚೆಲುವ ಮೈಯ್ಯ ಮಾಟ..

ಅವಳಿಗೂ, ಅವಳ ಕಣ್ಣಿಗೂ, ಆ ಪ್ರೀತಿಗೂ ಜನ್ಮಜನ್ಮಾಂತರದ ಬಂಧವೇ ಇರಬೇಕೇನೋ ಎಂಬ ದಟ್ಟ ಅನುಮಾನವೂ ಸುಳಿಯತ್ತೆ…
ನೋಡಲು ಮೋಹಕ ಕೂಡಲು ಪ್ರೇರಕ
ಏನು ಮಾಯವೋ
ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ…
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ…


ಅಮೃತಾ ಮೆಹೆಂದಳೆ

2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ


Leave a Reply

Back To Top