ಲಲಿತಾ ಕ್ಯಾಸನ್ನವರ
ಅವ್ವ
ನಿನ್ನ ನೆನಪುಗಳು ಸಮುದ್ರದ ಅಲೆಗಳು ಬಂದಂತೆ ಉಕ್ಕಿ ಅಬ್ಬರಿಸುವ ತೆರದಿ…
ತೆರೆಯ ನೊರೆಯಂತೆ ಒಂದಾದ ಮೇಲೊಂದು ಅಪ್ಪಳಿಸುತ್ತಲೆ ಇವೆ…
ಶರಧಿಯ ನೀರಿನಂತೆ…
ಭೂಮ್ಯಾಗಸದ ವಿಸ್ತಾರದಂತೆ ಅಳೆಯಲಾಗದ ಮರೆಯಲಾಗದ ಅನುಭವದಂತೆ..
ನಿನ್ನ ಜೊತೆ ಕಳೆದ ಕ್ಷಣಗಳು ನಿತ್ಯ ನಿರಂತರ ಭತ್ತದ ವರತೆಯಂತೆ ಆರದ ದೀಪದಂತೆ ದಾರಿದೀಪವಾಗಿವೆ….
ಅವ್ವ ನೀನಿಲ್ಲದೆ ಕಳೆದ ತಿಂಗಳು ದಿನ ತುಂಬಾ ಭಾರ ಭಾರ ಅವ್ವ…. ಮತ್ತೆ ಮತ್ತೆ ಮಗುವಾಗುವವಾಸೆ.. ನಿನ್ನ ಮಡಿಲಲಿ
ನನಗಾಗಿ ನನ್ನ ನೀರೀಕ್ಷೆಯಲಿ
ತುದಿಬಾಗಿಲಲಿ ತುದಿಗಾಲಲ್ಲಿ
ಕಾಯುತ್ತಿದ್ದ ನಿನ್ನ ಆ ಕಾತುರತೆ..
ತುಂಬಿ ನಿಂತಿದೆ ಆ ಚಿತ್ರ
ಇಂದೂ ನನ್ನ ಅಕ್ಷಿಯಲಿ..
ಮರಳಿ ಬಾರದೂರಿಗೆ ನಿನ್ನ ಪಯಣ ನ್ಯಾಯವಲ್ಲದು..
ಆದರೂ ಒಪ್ಪಲೇ ಬೇಕು ವಿಧಿನಿಯಮ.. ವಿರೋಧಿಸಲಾಗದು..
ಲಲಿತಾ ಕ್ಯಾಸನ್ನವರ