ಎ ಎಸ್. ಮಕಾನದಾರ
ಅವ್ವ ಬಿತ್ತಿದ್ದೆ ಹಾಗೆ
ಎರೆ ಹೊಲದಲ್ಲಿ
ಅವ್ವ ಅಕ್ಕಡಿ ಸಾಲು
ಬಿತ್ತಿದ್ದೆ ಹಾಗೆ
ಒಂದು ಅಕ್ಕಡಿ ಫಕೀರ
ಇನ್ನೊಂದು ಅಕ್ಕಡಿ ಜಂಗಮ
ಮತ್ತೊಂದು ಅಕ್ಕಡಿ
ಬಿಸಿಲಿಗೆ ಗರ್ಭ ಸೀಳಿ ಬರುವ
ಎಳ್ಳು ತೊಗರಿ
ನಾನು
ದಿಗಂಬರ
ಮೇಲೆ ಹೊಯ್ದಡುತಿದೆ ಅಂಬರ
ಮಸೀದಿ ಚರ್ಚು ಈಗರ್ಜಿ
ಮಠ ಮಂದಿರ ಮಾರುದೂರ
ಅಮ್ಮ ದೇವರು
ಅಪ್ಪ ಆಸ್ತಿ
ಮಿಕ್ಕಿದ್ದು ಗೆಳೆತನ
ಪಂಜರದ ಗಿಳಿಗೆ
ಗುಡಿಸಲು ಅರಮನೆ ಸೆರೆಮನೆ ವ್ಯತ್ಯಾಸ ಕಾಣಲಿಲ್ಲ
ತಿಂದಿದ್ದು ನಾರು ಬೇರು
ಕುಡಿದಿದ್ದು ಸೊಪ್ಪಿನ ಸಾರು
ಎ ಎಸ್. ಮಕಾನದಾರ
ಒಂದು ಅಕ್ಕಡಿ ಫಕೀರ
ಇನ್ನೊಂದು ಅಕ್ಕಡಿ ಜಂಗಮ… ಎಂತಹ ಅದ್ಭುತವಾದ ಸಾಲುಗಳು ಸರ್
ತಾಯಿ ಬಿತ್ತಿದ ಅಕ್ಕಡಿ ಸಾಲು
ಸೌಹಾರ್ದತೆಯ ಬೀಜಗಳನ್ನು.
ಅಭಿನಂದನೆಗಳು ಸರ್.
ಧನ್ಯವಾದಗಳು ಮೇಡಂ