ಅಮ್ಮನಿಗೊಂದು ನಮಸ್ಕಾರ

ಅಮ್ಮನಿಗೊಂದು ನಮಸ್ಕಾರ

ಅಮೃತಾ ಮೆಹೆಂದಳೆ

ತಾಯಿಗೇಕೆ ಗುಣಗಾನ

ತಾಯಿಗೇಕೆ
ಗುಣಗಾನ
ಬೇಕಿರುವುದು
ಚೂರೇ ಸಾಂತ್ವನ

ನಮ್ಮೆಲ್ಲ
ಅಸಹನೆಗೆ
ಅಹಂಭಾವಕ್ಕೆ
ಆತಂಕಕ್ಕೆ
ಅಸಹಾಯಕತೆಗೆ
ಅವಮಾನಕ್ಕೆ
ಅಳುವಿಗೆ
ಅಕಾರಣ
ಹೊಣೆಯಾಗಿಸಲ್ಪಟ್ಟ
ಜೀವ
ಅಮ್ಮ..

ಆಡಲೇಬೇಕಾದ
ಸಾವಿರ ಕಹಿ ನುಂಗಿ
ನೂರು ಸಿಹಿ ಮಾತಾಡಿಯೂ
ಒಂದೇ ಹುಳಿಮಾತಿಗೆ
ದೂಷಣೆ ಹೊತ್ತಳು
ಹೆತ್ತವಳು..

ಅಮ್ಮನಾಗದ ಹೊರತು
ಹೆಣ್ಣಿಗೆ ಬದುಕೇ ಇಲ್ಲ
ಎನ್ನುವ ಮೂಢರೇ
ಅವಳು ಹುಟ್ಟುತ್ತಲೇ
ತಾಯ್ತವನ ಹೊತ್ತವಳು
ಮರೆಯಬೇಡಿರಿ

ತಾಯಿಯೆಂಬ ಪಟ್ಟ

ಹೊತ್ತು ಹೆತ್ತವಳಿಗಷ್ಟೇ ಯಾಕೆ
ತುತ್ತಿಟ್ಟು ಮುತ್ತು ಕೊಟ್ಟು
ಕೆತ್ತಿ ಆಕಾರ ಕೊಟ್ಟ
ಸಲಹಿದವಳಿಗೇ ಸೂಕ್ತ..

ಅಮ್ಮನಾಗುವ ಕನಸು


ಅಮ್ಮನಾಗುವ ತನಕ
ಅಮ್ಮನ ಅರಿಯುವುದು
ಅಮ್ಮನಾದ ಬಳಿಕ


ಅಮೃತಾ ಮೆಹೆಂದಳೆ

ಅಮ್ಮನಿಗೊಂದು ನಮಸ್ಕಾರ

ಅಮೃತಾ ಮೆಹೆಂದಳೆ

ತಾಯಿಗೇಕೆ ಗುಣಗಾನ

Leave a Reply

Back To Top