ಅಮ್ಮನಿಗೊಂದು ನಮಸ್ಕಾರ
ಶಾಂತಾ ಜಯಾನಂದ್
ಅಮ್ಮನಿಗೊಂದು ಪತ್ರ
ಮಾತೃಶ್ರೀ ಮಂಗಳೆ
ನೀನು ಸೌಖ್ಯವೇ
ನಾನಿಲ್ಲಿ ಸೌಖ್ಯ
ಅಮ್ಮ ನೀ ಕಟ್ಟಿದ
ನಕ್ಷತ್ರದ ಗೂಡಿನಲಿ
ನಮ್ಮ ನೋಡುತಿಹೆಯೇನಮ್ಮ
ನಾನು ನಿನ್ನೆಡೆ
ಬಂದು ಸೇರಲೇನಮ್ಮ
ನಿನ್ನ ನಗು ಮೊಗ
ನಿನಾಡುತ್ತಿದ್ದ ಒಂದೊಂದು
ಮಾತುಗಳು
ನನಗೆ ಜೀವ ಚೈತನ್ಯವಮ್ಮಾ
ನೀ ಹಾಕಿ ಕೊಟ್ಟ ಹಾದಿಯಲೆ
ನಡೆಯುತ್ತಿರುವೆನಮ್ಮಾ
ಆದರೂ ಆಣೆಯಮ್ಮ
ನಿನ್ನೊಂದಿಗೆ ನೀನಿರುವ
ನಕ್ಷತ್ರದರಮನೆಗೆ
ನಾಬರಬೇಕಮ್ಮ
ನಿನ್ನ ಪ್ರೀತಿ ತುಂಬಿದ
ಮಡಿಲಲ್ಲಿ ತಲೆಯಿಟ್ಟು
ಮಲಗಬೇಕಮ್ಮಾ
ನಿನ್ನ ಪ್ರೀತಿಯ ಕಾಳಜಿಯ
ಧ್ವನಿಯಾ ಕೇಳಬೇಕೆನಿಸಿ ದೆಯಮ್ಮ
ಜೀವನದ ಒಂದೊಂದು
ಅನುಭವ ಸಾರ
ನೀ ನನಗಿಟ್ಟ ಬಿಕ್ಷೆಯಮ್ಮ
ತಿಳಿದೋ ತಿಳಿಯದೆಯೋ
ನಾನು ತಪ್ಪನೆಸಗಿದ್ದರೆ
ನಿನ್ನ ಕಂದನ ಕ್ಷಮಿಸಮ್ಮಾ
ಪ್ರೀತಿ ವಂಚಿತಳು ನಾನು
ಪ್ರೀತಿಗಾಗಿ ಹಪ ಹಪಿಸುತ್ತಿರುವೆನಮ್ಮಾ
ನಿನ್ನಾ ದರ್ಶಗಳು
ನಮಗಿಲ್ಲವೇನೋ?
ತಿಳಿಯದಮ್ಮ
ನೋವು ತುಂಬಿದಾ ಹೃದಯದ
ಪವಿತ್ರ ಪತ್ರವಾಗಿಹುದಮ್ಮ
ನಿನ್ನ ಸೌಂದರ್ಯ ರಾಶಿಯ
ನೆನಪು ಹಚ್ಚ ಹಸಿರಮ್ಮ
ನಿನ್ನ ನಗೆಯ ಸೌಂದರ್ಯ
ನಾ ಮರೆಯಲಾರೆನಮ್ಮಾ
ಪ್ರೀತಿ ತುಂಬಿದ ಹೃದಯದ
ಆದರ್ಶ ಜೀವನವ ನಿನ್ನದಮ್ಮ
ದೊಡ್ಡ ಸಂಸಾರವ ತೂಗಿಸಿದ
ಗಟ್ಟಿಗಿತ್ತಿಯಮ್ಮ
ಶಾಂತಾ ಜಯಾನಂದ್