ಮನ್ಸೂರ್ ಮುಲ್ಕಿ ಕವಿತೆ-

ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿ

ಚಂದ

ಅರಳುವ ಹೂವು ಬಾನನು ನೋಡಿ
ಬೀರುವ ನಗುವು ಕಾಣಲು ಚಂದ
ಉದುರುವ ಎಲೆಯ ಮಾಸಿದ ಬಣ್ಣ
ನೋಡಲು ಅಂದ ಭೂಮಿಗೂ ಚಂದ

ಕತ್ತಲೆ ಒಳಗೆ ಉದುರುವ ಚುಕ್ಕಿ
ನಲಿಯುವ ಚಂದ್ರ ಬಾನಿಗೂ ಚಂದ
ತಿರುವಿನ ನದಿಯು ತೇಲುವ ದೋಣಿ
ಬೆಳಗುವ ದೀಪ ನದಿಗೂ ಚಂದ.

ಬೀಸುವ ಗಾಳಿಗೆ ಮೈಯನು ಒಡ್ಡಲು
ಮನಸ್ಸಿಗೆ ಅಂದ ನೆನಪಿಗು ಚಂದ
ಸಂಜೆಯ ಬಾನಿಗೆ ಕಾಣುವ ಕಿರಣ
ಕಡಲಿಗೆ ಅಂದ ನಮಗೂ ಚಂದ

ಶಿಶುವಿನ ನಗುವು ತೊದಲು ನುಡಿಯು
ತಾಯಿಯ ಕಣ್ಣಿಗೆ ಹೊನ್ನಿನ ಚಂದ
ಗಾಳಿಯ ಮಾತು ಕಿವಿಯಲಿ ಉಸುರಲು
ತಾಯಿಯ ಮನಸ್ಸಿಗೆ ಇದುವೇ ಚಂದ.

—————


ಮನ್ಸೂರ್ ಮುಲ್ಕಿ

Leave a Reply

Back To Top