ಕಾವ್ಯ ಸಂಗಾತಿ
ಯಾ. ಮ. ಯಾಕೊಳ್ಳಿ
ತನಗಗಳು
೧
ಅದಿನ್ನೂ ಸಮಿಪದಿ
ಇದ್ದರೆ ಬಹು ಅರ್ಥವು
ಕಣ್ಣಿನೊಳಿದೆ ಬೇರೆ
ಕಾಂತಿ ಅಯಸ್ಕಾಂತವು
೨
ಮನಕೆ ತಿಳಿವುವು
ಕೆಲವು ಭಾವಗಳು
ಪ್ರೇಮವದು ಅಂಥದೆ
ಒಂದು ಭಾವರತ್ನವು
೩
ಬರಿ ಹಾಡಲೆ ಇಷ್ಟು
ಸೊಗವು ಆ ಸೊಗಸು
ಇನ್ನು ಕೈಗೆ ಸಿಕ್ಜರೆ
ಸಕ್ಕರೆ ಯ ಸರಸು
೪
ಎದೆ ಕವಾಟದಲಿ
ಅವಳ ಜಾಗವು
ಬದ್ರವಾಗಿದೆ ಜಾಗ
ಯಾರೂ ಕಾಣದೆಯು
೫
ಪದಕೆ ಪದವಾಗಿ
ಎದೆಗೆ ಎದೆಯಾಗಿ
ಉಸಿರ ಉಸಿರಲೆ
ಈಗ ಅವಳ ಧ್ಯಾನ
೬
ಆದೀತೆ ತನಗವು
ಬರಿ ಮಾತಿನೊಳಗೆ
ಇರಬೇಕು ಮಾತಲಿ
ಅರ್ಥ ರಸದೊಸಗೆ
೭
ಹರಿದು ಹೋಗೊ ಬಂಧ
ಎಂದಿಗೂ ಬೆಳೆಯದು
ಬಿಡಬೇಕೆಂದ ಮೇಲೆ
ಸ್ವರ್ಗವೂ ಉಳಿಯದು
೮
ಉಂಗುರ ಬೇಡಿದನು
ದುಷ್ಯಂತ ಪ್ರೀತಿಗಾಗಿ
ಸಾಕ್ಷಿ ಬೇಡುವ ಪ್ರೀತಿ
ಹೋಯ್ತು ನೀರುನೀರಾಗಿ
೯
ಮಾತು ಮಾತು ಘರ್ಷನ
ಕದನಕದು ದಾರಿ.
ಮಾತು ಮೌನ ಸುಸ್ನೇಹ
ಸೋಲು ತಾ ಸೋಲುವದು
ಶಾಸ್ವತವೆಂದುಕೊಂಡ
ಬಂಧ ಹರಿಯುವವು
ನೀರಗುಳ್ಳೆಯ ಥರ
ಗಾಳಿಗೆ ಆರುವವು
೧೦
ಮಾತು ಕೂಡಿಸುವದು
ಮನವ ದೂರದಿಂದ
ಕೂಡಿದ ಮನ ಹಾಳು
ಒಂದು ಮಾತಿನಿಂದಲಿ
೧೧
ಮಾತಿನಾಚೆಗೂ ಮಾತು
ರೀತಿಯಾಗಿ ಇಹುದು
ಬರಿಮಾತು ತೂತಾಗಿ
ಅರ್ಥವು ಸೋರುವದು
ಯಾಕೊಳ್ಳಿ ವೈ.ಎಂ