ಪ್ರಜ್ವಲಾ ಶೆಣೈ ಕವಿತೆ-ನಿರೀಕ್ಷೆ

ಕಾವ್ಯ ಸಂಗಾತಿ

ನಿರೀಕ್ಷೆ

ಪ್ರಜ್ವಲಾ ಶೆಣೈ

ಮಳೆಯು ಸುರಿಯಿತು
ಕೆಸರು ಕೆದರಿತು
ಕಮಲವರಳಲೆ ಇಲ್ಲ
ಸಿಡಿಲು ಬಡಿಯಿತು
ಗುಡುಗು ಅಬ್ಬರಿಸಿತು
ಕಳೆಗಳಾಗಲೆ ಚಿಗುರಿತು…..

ಗಾಳಿ ಬೀಸಿತು
ಮರಗಳದುರಿತು
ಹಣ್ಣು ಬೀಳಲೇ ಇಲ್ಲ
ಸುನಾಮಿ ಉಕ್ಕಿತು
ಸುಳಿಯು ಸೆಳೆಯಿತು
ಚಿಗುರು ಆಗಲೇ ಮುರುಟಿತು…..

ಮೋಡ ಕಳೆಯಿತು
ಮೇಘ ಅತ್ತಿತು
ಧರೆಯು ತಣಿಯಲೆ ಇಲ್ಲ
ಬಿಸಿಲು ಬಂದಿತು
ಬಿರುಕ ತಂದಿತು
ನೆಲವು ಆಗಲೇ ದಣಿಯಿತು……

ಬಿಲ್ಲು ಅರಳಿತು
ಕಣ್ಣು ಮಿಂಚಿತು
ಬೆಳಕು ಹರಿಯಲೆ ಇಲ್ಲ
ಬೆಸುಗೆ ಹರಿಯಿತು
ಬಂಧ ಕಳೆಯಿತು
ಹೃದಯವಾಗಲೇ ಒಡೆಯಿತು…..


ಪ್ರಜ್ವಲಾ ಶೆಣೈ

3 thoughts on “ಪ್ರಜ್ವಲಾ ಶೆಣೈ ಕವಿತೆ-ನಿರೀಕ್ಷೆ

Leave a Reply

Back To Top