ಬಸವರಾಜ್ ಚಿಕ್ಕಮಠ ಕವಿತೆ-ತನ್ಮಯತೆ

ಕಾವ್ಯ ಸಂಗಾತಿ

ಬಸವರಾಜ್ ಚಿಕ್ಕಮಠ

ತನ್ಮಯತೆ

ಅವಳ ಕೋಮಲ ಬೆರಳುಗಳ ಹಿಡಿದು
ಹಾದಿಗುಂಟ ಸಾಗುವಾಗ
ಬಿರುಬೇಸಿಗೆಯಲ್ಲೂ
ನೆತ್ತಿಯ ಮೇಲೆ ಸೋನೆ ಸುರಿದಂತೆ

ಅವಳ ತುಟಿಗೆ ತುಟಿಯೊತ್ತಿ
ಕಣ್ಮುಚ್ಚಿ ಹಿತವಾಗಿ ಹ್ಮ್ ಎನ್ನುವಾಗ
ಮರಳುಗಾಡಿನಲ್ಲೂ
ಜಲಬುಗ್ಗೆ ಉಕ್ಕಿದಂತೆ
ಮೈಯುದ್ದಗಲಕ್ಕೂ ತಣ್ಣನೆ ಹಿತ

ಅವಳೊಂದಿಗೆ
ಅವಳಿ ಕಣ್ಣುಗಳೊಂದಿಗೆ ಮಾತಿಗಿಳಿದ
ರಸನಿಮಿಷ
ನನ್ನೆಲ್ಲಾ ಆಯಾಸ ದೂರಾಗಿ
ಎದೆಗೊಳದಲ್ಲಿ ಕನ್ನೈದಿಲೆ ಬಿರಿದಂತೆ

ಆ ಹೆಣ್ಣು ಕೇವಲ ಹೆಣ್ಣಲ್ಲ
ನನ್ನಲ್ಲೋ ಅಳೆಯುವ ಮಾಪಕವಿಲ್ಲ,
ಆ ನಗೆಯ ಸೆರೆಮನೆ ಹೊಕ್ಕ ನಾನು
ಬಿಡುಗಡೆಯ ಬಯಸಲಾರೆ
ಆ ಇರಿವ ನೋಟಕ್ಕೆ ಎದೆಗೊಟ್ಟು ನಿಲ್ಲಬಲ್ಲೆ
ಆ ಮಾತು
ಆ ಮೋಡಿ
ಆ ಸೆಳೆತ
ಆ ಪುಳಕ
ಆ ಗಮಲು
ಆ ಅಮಲು
ಆ ಮಿಲನ
ಆ ಮೆಲ್ಲುಸಿರು…

ಅಯ್ಯೋ ಮರಣ ಬರಲಿ ಇದೀಗಲೇ
ನಾ ಕಣ್ಮುಚ್ಚುವೆ ನೆಮ್ಮದಿಯಿಂದ
ಪಾರು ಮಾಡದಿರಲಿ
ಯಾರೂ ಈ ನಶೆಯಿಂದ

ನಾ ಧನ್ಯ
ನಾ ತೃಪ್ತ


ಬಸವರಾಜ್ ಚಿಕ್ಕಮಠ

Leave a Reply

Back To Top