ಮಂಜುಳಾ ಪ್ರಸಾದ್ ಕವಿತೆ-ಸರ್ಕಾರಿ ಕೆಲಸ …

ಕಾವ್ಯ ಸಂಗಾತಿ

ಮಂಜುಳಾ ಪ್ರಸಾದ್

ಸರ್ಕಾರಿ ಕೆಲಸ …

ಹಾಗೇ ಸುಮ್ಮನೆ ಸಿಗೋದಿಲ್ಲ ಸರ್ಕಾರಿ ಕೆಲಸ,
ಶ್ರಮದ ಮೂಟೆಯ ಹೊತ್ತು,
ಕ್ಷಣ ಕ್ಷಣದ ಸುಖವ ಬಲಿಗೊಟ್ಟು,
ವಿಶ್ರಾಂತಿ ವಿಲಾಸಗಳ ಮರೆತುಬಿಟ್ಟು
ಭ್ರಾಂತಿ, ಭ್ರಮೆಗಳನ್ನು ಸುಟ್ಟು ಬಿಟ್ಟು
ಅವಿರತ ಪ್ರಯತ್ನ ಸಾಗಿದಾಗಲೇ
ಸಿಗುವುದು ಸರ್ಕಾರಿ ಕೆಲಸ.

ಸರ್ಕಾರಿ ಕೆಲಸವೆಂದರೆ
ದೇವರ ಕೆಲಸ,ಆದರೆ ದೇವರನ್ನು ನಾಮಕಾವಸ್ಥೆ ಪೂಜಿಸಿದಂತಲ್ಲ,
ಭಕ್ತಿ ಶೃದ್ಧೆಯಿಂದ ಕರ್ತವ್ಯ ನಿರತನಾದಾಗಲೇ ದೇವನೊಲಿಯುವನು,
ಕೆಲಸ ಕೈಗೂಡಿಸುವನು.

ಕಷ್ಟಪಟ್ಟು ದೊರೆತ ಸರ್ಕಾರಿ ಕೆಲಸದಿ
ಕಷ್ಟಪಟ್ಟು ದುಡಿಯುವ ಭಾವವರಳುವುದು.
ಕಾಸು ಕೊಟ್ಟು ದೊರೆತ ಸರ್ಕಾರಿ ಕೆಲಸದಿ,
ಕಾಸು ಪಡೆವ ಹೀನ ಬುದ್ಧಿ ಬೆಳೆಯುವುದು.

ಪ್ರಾಮಾಣಿಕತೆಯ
ಲೇಪವಿರುವವರು ಬೇರೆ,
ಪ್ರಾಮಾಣಿಕ ಕೆಲಸಗಾರರೇ ಬೇರೆ,
ಇವೆರಡೂ ಎಂದಿಗೂ ಸಮನಾಗಲಾರದು.
ಇವೆರಡೂ ಎಂದಿಗೂ ಸರಿದೂಗಲಾರದು.
ಪಗಾರ ಪಡೆಯುವಲ್ಲಿ ನಿಯತ್ತಿರಲಿ,
ರೊಕ್ಕ ಪಡೆವ ಸೊಕ್ಕು ನಿನ್ನದಾದರೂ ಹಕ್ಕು ನಿನ್ನದಲ್ಲ ..
ನಿಯತ್ತಿಗೇ ಬೆಲೆ,ನೀತಿಗೇ ಬಾಗುವುದು ತಲೆ!
ಇಲ್ಲವಾದಲ್ಲಿ ನಿನಗಿಲ್ಲ ನೆಲೆ!

ಕಾಯಕವೇ ಕೈಲಾಸ
ಪಡೆವ ವೇತನಕ್ಕೇಕೆ ಮೋಸ?
ದುಡಿಮೆಯಿಂದಲೇ ನಮ್ಮ ಹರುಷ
ಆಲಸ್ಯಕ್ಕೆ ಅಪಹಾಸ್ಯ ಮಾಡಿದರೆ ಏಕೆ ಆವೇಶ?
ಹಲವರಿಂದ ಕೆಲವರಿಗೆ ಆಗದಿರಲಿ ಆಭಾಸ!!

ಹೊಗೆಯಿಲ್ಲದೆ ಬೆಂಕಿಯಾಡೀತೇ?ಎಚ್ಚರಿರೋಣ.
ಹೊಗೆಯ ಸೃಷ್ಟಿಸುವ ಬಗೆಯ ಒಗೆಯೋಣ.
ಸ್ವಚ್ಛ ಕಾಯಕದಿ ಸರ್ವರ ಮನಗೆಲ್ಲೋಣ.
ಭೃಷ್ಟತೆಯ ಅಳಿಸಿ,ಸ್ಪಷ್ಟತೆಯ ಮರುಕಳಿಸೋ ಕನಸ ನನಸಾಗಿಸೋಣ.

ಸರ್ಕಾರೀ ನೌಕರರೇ, ಆಡೋ ಮಾತಿಗೆ ಸುಲಭ ತುತ್ತಾಗಬಾರದು ನಾವು,
ಮಾಡೋ ಕೆಲಸದಿ ಒಲವಿರಲಿ, ದೇಶದಭಿವೃದ್ಧಿಯ ಕಸುವಿರಲಿ,
ಒಳಿತು ಮಾಡೋ ತಪವಿರಲಿ,
ಶ್ರಮವಿರಲಿ,ಹಗೆಯಾಡದೇ ಒಗ್ಗಟ್ಟಿನ ಬಲವಿರಲಿ.
ಯಾಕೆಂದರೆ,
ಇದು ಹಾಗೇ ಸುಮ್ಮನೇ ಸಿಗೋದಿಲ್ಲ,
ಇದು ನಮ್ಮಜ್ಞಾನದ ಸ್ವತ್ತು,
ಇದು ನಮ್ಮ ಪರಿಶ್ರಮದ ತಾಕತ್ತು!!


  • ಮಂಜುಳಾ ಪ್ರಸಾದ್ ದಾವಣಗೆರೆ

15 thoughts on “ಮಂಜುಳಾ ಪ್ರಸಾದ್ ಕವಿತೆ-ಸರ್ಕಾರಿ ಕೆಲಸ …

  1. ಸರ್ಕಾರಿ ನೌಕರರಿಗೆ ಮನ ಮುಟ್ಟು ವಂತಿದೆ

  2. ತುಂಬಾ ಒಳ್ಳೆಯ ಕವಿತೆ ಮೇಡಂ
    ನೌಕರಿ ಸಿಗುವ ಮುನ್ನ ಇರುವ ಕಾಳಜಿ , ಶ್ರದ್ಧೆ ,
    ಪಡೆಯಲೇಬೇಕೆಂಬ ಛಲ ಇವೆಲ್ಲವೂ
    ಆಮೇಲೆ ಇರುವದಿಲ್ಲ ನಾವೆಲ್ಲರೂ ಅಂತರಾವಲೋಕನ ಮಾಡಿಕೊಳ್ಳಲು ಈ ಪದ್ಯವು ಪ್ರೇರಕವಾಗಿದೆ

  3. ಯಾವುದೇ ಕೆಲಸವಿರಲಿ ಪ್ರಾಮಾಣಿಕತೆಯಿಂದ ಮಾಡಬೇಕು…. ಕವನ ಚೆನ್ನಾಗಿದೆ

  4. Nice, poem ,

    we can find the God even in private sector too, the farmer , cleaners paintetrs corpents coblers , daily workers , if any one not work , the life becomes hard, a medical shopkeeper wakes up 24/7midnight too, a nurse too, these are the gods , and they work coz work is worship.

Leave a Reply

Back To Top