ಸ್ಮಿತಾ ಬನಹಟ್ಟಿಯವರ ಕವಿತೆ

ಕಾವ್ಯ ಸಂಗಾತಿ

ಸ್ಮಿತಾ ಬನಹಟ್ಟಿ.

ದಾದಿಯರು

ಕಗ್ಗತ್ತಲ ಸರಿಸಿ ನಭದಿ ಮೂಡಿಹ ಚಂದಿರನಂತೆ
ಉಸಿರುಳಿಸುವ ದಾದಿಯಂದಿರು ದೇವರಂತೆ
ಆರೈಕೆಯಲಿ ನಿಸ್ವಾರ್ಥ, ನಿರ್ಮಲಮನದ ಮಾತೆ
ಬಡವ-ಬಲ್ಲಿದ ಭೇದವ ತೊರೆದ ಮರುಜನ್ಮದಾತೆ

ಜಗವ ತಲ್ಲಣಿಸಿರಲು ಮಹಾಮಾರಿ ಶಕ್ತಿಯಾಟ ನಲುಗಿಸುತ ಜೀವಿಗಳನ್ನೆಲ್ಲಾ ಅಣುವಿನ ಮಾಟ
ಎದುರಿಸಿ ಹೋರಾಡಲು ಬಂದರು ಸೈನಿಕರಂತೆ
ಹೆದರದೆ ಶುಶ್ರೂಷೆ ಮಾಡುತಿಹರು ಸೇವಕರಂತೆ

ಮೀಸಲಿಡದೆ ಸಮಯವ ತಮ್ಮಯ ಪರಿವಾರಕೆ
ಕರುಳಕುಡಿಯನಗಲಿ ಬಂದಿಹರು ಉಪಚಾರಕೆ
ಅಹೋರಾತ್ರಿ ಸಿದ್ಧರಾಗಿ ಸೇವೆಗೈವರು ಬೇಸರಿಸದೆ
ಮಾಡುತ ರೋಗಿಯ ನಿತ್ಯಕರ್ಮ ಅಸಹ್ಯಪಡದೆ

ಗರ್ಭದಿ ಕಂದನಿದ್ದರೂ ಮಾಡುತಿಹರು ಕಾಯಕ
ಆಯುರಾರೋಗ್ಯ ಕರುಣಿಸಲಿ ಜಗನ್ನಿಯಾಮಕ
ಸಮವಿಲ್ಲ ಹೇಳಿದರೆಷ್ಟು ನಿಮಗೆ ಧನ್ಯವಾದಗಳು
ನಮ್ಮಾತ್ಮ ತೃಪ್ತಿಗೆ ಅರ್ಪಣೆ ಅನಂತನಮನಗಳು


                   ಸ್ಮಿತಾ ಬನಹಟ್ಟಿ.

Leave a Reply

Back To Top