ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಟ್ಯಾಕ್ಸಿ

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಎಲ್ಲ ಟ್ಯಾಕ್ಸಿಗಳಲು ನಿಯಮಿತ
ಆಸನಗಳಿರುವ ಸುದ್ದಿ ಹಿತ
ದೊಡ್ಡ ಗಾಡಿಗೆ ಹೆಚ್ಚು ಜನ
ಪುಟ್ಟದಕ್ಕೆ ತಕ್ಕಂತೆ ಆಸನ

ಟ್ಯಾಕ್ಸಿ ಚಲಿಸಲೇಬೇಕು ಜರೂರು
ಅದು ಕೆಲಸಲ ಖಾಲಿ ಚಲಿಸಿದರು
ಕೈ ಬೀಸಿದಾಗ ನಿಂತು ಹತ್ತಿಸಿದರು
ಹಾಗೆ ಸುಮ್ಮನೆ ಕಾಸಿಲ್ಲದೆ ಬರದು
ತೆತ್ತಲೇಬೇಕು ಕಾಂಚಾಣ ದುಡಿದು

ಕೆಲವು ಹಲವು ನಿಲ್ದಾಣಗಳಲಿ
ಆಗಾಗ ನಿಂತು ಚಲಿಸುವ ಬಂಡಿ
ಇನ್ನು ಕೆಲವು ಒಂದೂರಿಂದ
ನಿಗದಿಯಾದಂತೆ ಮತ್ತೊಂದೂರಿಗೆ
ಯಾವ ಟ್ಯಾಕ್ಸಿಗು ಇಲ್ಲ ಒಂದೆ ಗತಿ
ಕೆಲವು ಕ್ಷಿಪ್ರ ಹಲವು ಮಂದಗತಿ
ವೈವಿಧ್ಯಮಯ ಈ ಟ್ಯಾಕ್ಸಿ ಚಲನೆ!

ಇರುವುದಕಿಂತ ಅಧಿಕ ಮಂದಿಗೆ
ಅವಕಾಶ ಇಲ್ಲದ್ದು ಜಾರಿ ನಿಯಮ
ಹಾಗಂತ ಇಲ್ಲಿ ಎಲ್ಲ ಕಾಲದಲು
ಚಾಲ್ತಿ ಆಗದು ಇಂಥ ಕಟ್ಟುಪಾಡು

ಒಮ್ಮೊಮ್ಮೆ ಒಬ್ಬರ ಪಕ್ಕ ಒಬ್ಬರಂತೆ
ತುರುಕಿದ ಜನ ತರಕಾರಿ ಮೂಟೆ
ಇಲ್ಲಿ ಎಲ್ಲ ರೀತಿ ನಡೆಯ ಅಡ್ಜಸ್ಟ್ಮೆಂಟು!
ಇದೆ ನಿಜ ಟ್ಯಾಕ್ಸಿ ಚಾಲನೆಯ ಬಾಳು!


ಡಾ. ಅರಕಲಗೂಡು ನೀಲಕಂಠ ಮೂರ್ತಿ

About The Author

1 thought on “ಡಾ. ಅರಕಲಗೂಡು ನೀಲಕಂಠ ಮೂರ್ತಿ ಕವಿತೆ-ಟ್ಯಾಕ್ಸಿ”

  1. D N Venkatesha Rao

    “ಇಲ್ಲಿ ಎಲ್ಲಾ ರೀತಿ ನಡೆಯ ಅಡ್ಜೆಸ್ಟ್ಮೆಂಟು ”
    ಹೌದಲ್ಲಾ,ಮುಂದಡಿಯಿಡಲು ಬೇಕು!
    Congrats Murthy

Leave a Reply

You cannot copy content of this page

Scroll to Top