ರಜಿನಿ ಟಿ ಎಂ ಕವಿತೆ-ಮಾತಿನ ಮುಖವಾಡ

ಕಾವ್ಯ ಸಂಗಾತಿ

ರಜಿನಿ ಟಿ ಎಂ

ಮಾತಿನ ಮುಖವಾಡ

ತಿಳಿ ಮನುಜ ಮುಖವಾಡದ ಮರ್ಮ
ಮಾತಿನ ಹಿಂದಿನ ನಿಗೂಢ ಮನ
ಸುಳ್ಳ ಮೆಚ್ಚಿ ಬೆಳೆಸುವರು
ಸತ್ಯವ ತುಳಿದು ಸಮಾಧಿ ಕಟ್ಟುವರು

ಪರರ ಸಾಧನೆಯ ಸಹಿಸಲಾರದೆ
ತಮ್ಮ ಸೋಲಿಗೆ ಕೊರಗುವರು
ನೀತಿಯ ಭಾಷಣ ಬೀರುತ
ಅನೀತಿಯ ಬಾಳ ನಡೆಸುವರು

ಕೈಯೊಡ್ಡಿ ಬೇಡುವವರ ಮುಂದೆ
ನೀಡದೆ ದಾನಿ ತಾನೆನ್ನುವರು
ನುಡಿಯೊಳು ನಂಬಿಸುತಾ
ಕುತ್ತಿಗೆಯ ಕೊಯ್ಯುವರು

ಮುಂದೆ ಭರವಸೆಯ ಮಾತ ನೀಡಿ
ಹಿಂದೆ ನಿಂದನೆಯ ದನಿಯಲಿರುವರು
ಮುಖದ ಮೇಲೆ ನಗೆಯ ಚೆಲ್ಲಿ
ಮನದ ತುಂಬ ಹಗೆಯಲಿರುವರು

ನುಡಿಯೊಳು ಹಿರಿತನವ ಬೀಗುತ
ನಡೆಯೊಳು ಸಣ್ತನದವರಾಗುವರು
ಮಾತೆಲ್ಲ ತೋರಿಕೆ, ಮಾತೆಲ್ಲ ಮರ್ಮ
ಮಾತಿಗಾದರೆ ಮರುಳು, ಕುತ್ತಿಗೆ ಉರುಳು.


ರಜಿನಿ ಟಿ ಎಂ

ಕವಿ ಪರಿಚಯ:

ರಜಿನಿ ಟಿ ಎಂ
ತಗ್ಗಹಳ್ಳಿ
ಮಂಡ್ಯ ತಾಲೂಕು ಮತ್ತು ಜಿಲ್ಲೆ
ಶಿಕ್ಷಣ – ಎಂ ಎಸ್ ಡಬ್ಲ್ಯೂ
ವೃತ್ತಿ – ಕಾರ್ಮಿಕ ಕಲ್ಯಾಣಾಧಿಕಾರಿ
ಪ್ರಕಟ ಮಾಡಿರುವಂತ ಪುಸ್ತಕದ ಹೆಸರು – ಹೊಂಗನಸು (ಬದುಕು ಭಾವನೆಗಳ ಸಂಗಮ)

Leave a Reply

Back To Top