ಸ್ಮಿತಾ ಬನಹಟ್ಟಿ ಕವಿತೆ-ನೇಗಿಲಯೋಗಿ

ಕಾವ್ಯ ಸಂಗಾತಿ

ಸ್ಮಿತಾ ಬನಹಟ್ಟಿ

ನೇಗಿಲಯೋಗಿ

ಹಗಲಿರುಳು ಎನ್ನದೆ ದುಡಿವ ನೇಗಿಲಯೋಗಿ
ನಮಿಸುವೆವು ನಾವೆಲ್ಲರೂ ನಿನಗೆ ತಲೆಬಾಗಿ

ಮಣ್ಣಲ್ಲಿ ಉತ್ತಿ-ಬಿತ್ತುವದು ನಿನ್ನಯ ಕಾಯಕ
ಅದನ್ನೆ ಚಿನ್ನದಂತಾಗಿಸುವುದು ಶ್ರಮದಾಯಕ

ಬಿಸಿಲುಮಳೆಯಲ್ಲೂ ಸಾಗುವಂಥ ನಿನ್ನ ಕರ್ಮ
ಹಸಿವು ತಣಿಸುವಂತಹ ಅದು ನಿಸ್ವಾರ್ಥಧರ್ಮ

ಸುಖಸಂತಸವನು ಅದಲ್ಲಿಯೆ ಕಾಣುವ ತ್ಯಾಗಿ
ಬೆವರು ಸುರಿಸಿ ದುಡಿಯುತಿರುವೆ ನಮಗಾಗಿ

ನಿನ್ನ ಉಳುಮೆಯಿಂದಲೆ ನಿಂತಿಹುದು ಈ ಜಗ
ಅಂತೆಯೆ ಭೂಮಾತೆಗಾದೆ ನೀ ಚೊಚ್ಚಲಮಗ

ಬೆಳೆಸುವೆಯಯ್ಯಾ ಕೆಸರನ್ನೆ ನಂಬುತ ಹಸಿರು
ಸಕಲರಿಗೂ ನೀಡುತಿರುವೆ ಅನ್ನವೆಂಬ ಉಸಿರು

ಪ್ರತಿಯೊಂದು ಕಾಳಿಗೂ ಅನ್ನದಾತನಾಗಿ ಧಣಿ
ಸರ್ವಕಾಲಕೂ ನಾವೆಲ್ಲರೂ ನಿನಗೆ ಚಿರಋಣಿ


ಸ್ಮಿತಾ ಬನಹಟ್ಟಿ.

Leave a Reply

Back To Top