ಶಿಶುಗೀತೆ-” ಅಜ್ಜಿಯ ಮನೆ ಆತಿಥ್ಯ “

ಮಕ್ಕಳ ವಿಭಾಗ

ಈರಪ್ಪ ಬಿಜಲಿ

” ಅಜ್ಜಿಯ ಮನೆ ಆತಿಥ್ಯ “

ರಜೆಯ ಅನಭವಿಸಲು ಯೋಗ್ಯ
ಅಜ್ಜಿ ಮನೆಯ ಆತಿಥ್ಯ
ಮಜವೋ ಮಜವು ಇರದು ಸಜವು
ತೋಷ ತುಂಬಿದ ಆತಿಥ್ಯ ||

ಅಪ್ಪ ಅಮ್ಮ ಅಕ್ಕ ತಂಗಿ
ಸೇರಿಕೊಂಡು ಹೋಗುವೆವು
ತುಪ್ಪ ಮೊಸರು ಮಜ್ಗಿ ಕುಡಿದು
ಹೊಲದ ತುಂಬ ಹಾಡುವೆವು ||

ಅಜ್ಜಿ ಸೊಂಡ್ಗಿ ಹಪ್ಳ ಕರಿದು
ತಿನ್ನಲು ನಮಗೆ ಕೊಡುತಾಳೆ
ಅಜ್ಜ ಮುಂದೆ ಕೂರಿಸಿ ಚಂದ
ಪುರಾಣ ಕಥೆ ಹೇಳುತಾರೆ ||

ಅಕ್ಕ ಮಾಮ ಅಣ್ಣ ನಾನು
ನೀರಿನಲ್ಲಿ ಈಜುವೆವು
ಚಿಕ್ಕ ಚೊಕ್ಕ ಭಂಗಿ ಕಲಿತು
ಮೋಜು ಮಸ್ತಿ ಮಾಡುವೆವು ||

ಅಜ್ಜಿ ಮನೆಯ ಆತಿಥ್ಯವೇ
ಸ್ವರ್ಗ ನಮ್ಮ ಪಾಲಿಗೆ
ಅಜ್ಜ ಅಜ್ಜಿ ಪ್ರೀತಿ ಎಂದು
ಅಕ್ಷಯ ಪಾತ್ರೆ ಮೊಮ್ಮಕ್ಕಳಿಗೆ ||


ಈರಪ್ಪ ಬಿಜಲಿ ಕೊಪ್ಪಳ

ಕವಿ ಪರಿಚಯ:

ಈರಪ್ಪ ಬಿಜಲಿ ಊರು:ಭಾಗ್ಯನಗರ ತಾ&ಜಿ:ಕೊಪ್ಪಳವೃತ್ತಿ: ಶಿಕ್ಷಕರು
ಕೃತಿಗಳು:೧)ಮುಗಿಲ ಸಂಚಲನ&(೨)ಶ್ವೇತ ಹೃದಯ

Leave a Reply

Back To Top