ಕಾವ್ಯಸಂಗಾತಿ
ಹನಿ , ಗುಬ್ಬಿ ಕವಿರತ್ನ
ಯಾರಿಗೆ ಯಾರುಂಟು
ಚಿಂತಿಸದಿರು ಮನವೇ
ಏತಕೆ ಚಿಂತಿಸುವೆ
ಚಿಂತಿಸಿ ಚಿಂತಿಸಿ ಏತಕೆ ಕೊರಗುವೆ
ಕೊರಗಿ ಕೊರಗಿ ಚಿತೆಯ ಸೇರುವೆ
ನಿನ್ನವರಿಂದು ಬರಲಿಲ್ಲ
ನೀ ಹೋಗುವ ವೇಳೆಗೆ ಅಳಲಿಲ್ಲ
ನಿನ್ನವರ್ಯಾರು ನನ್ನವರ್ಯಾರು
ಹುಟ್ಟಿ ಸಾಯುವಲ್ಲಿ ತಿಂದೋಗುವರು
ನಿತ್ಯದ ಬದುಕಲಿ ಕಷ್ಟಗಳುಂಟು
ನೀ ಮಾಡಿದ ಪಾಪ ಕರ್ಮದ ಗಂಟು
ನೀ ಹರಿತ ಏನು ವಿಧಿಯ ಗುಟ್ಟು
ನೀ ನಡೆಯಬೇಕು ಗರ್ಭವ ಬಿಟ್ಟು
ಯಾರಿಗೆ ಯಾರುಂಟು ..?
ಬಿಚ್ಚು ನಿನ್ನ ಬುದ್ಧಿಯ ಗಂಟು
ಹಣದ ಗುಣವು ಶಾಶ್ವತವಲ್ಲ
ಸತ್ಯವು ಎಂದು ಸಾಯುವುದಿಲ್ಲ
ಏ ಮನುಜ
ಧೈರ್ಯವೇ ನಿನ್ನ ಛಲವು
ಆತ್ಮವೆ ನಿನ್ನ ಭಲವು
ಈ ಕ್ಷಣವೇ ನಿನ್ನ ಕ್ಷಣವೂ
ನೀ ಸಾಧಿಸಿದ್ದೆ ಇಲ್ಲಿ ಶಾಶ್ವತವು
ಈ ಉಸಿರೋದರು ಹೆಸರಿರಬೇಕು .
ಹನಿ , ಗುಬ್ಬಿ ಕವಿರತ್ನ .
ಅಂಜನ್ ಕುಮಾರ್ ಗುಬ್ಬಿ ನಿವಾಸಿಯಾಗಿದ್ದು . ತುಮಕೂರು ಜಿಲ್ಲೆ ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ( ರಿ) ಗುಬ್ಬಿ. ಸಂಸ್ಥಾಪಕ ಅಧ್ಯಕ್ಷರು.ಪ್ರಕಟಿಸಿದ ಪುಸ್ತಕಗಳು : ೦೧ ( ಕಾಲ್ಗೆಜ್ಜೆ , ಕವನ ಸಂಕಲನ )ಸಿನಿಮಾ ನಿರ್ದೇಶನ ಮತ್ತು ಸಂಗೀತ ನಿರ್ದೇಶನ . ಮಲ್ಲಸಂದ್ರ ಕಂಪನಿಯಲ್ಲಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.