ಸ್ಮಿತಾ ಬನಹಟ್ಟಿ ಕವಿತೆ-ಬುದ್ಧ

ಕಾವ್ಯ ಸಂಗಾತಿ

ಬುದ್ಧ

ಸ್ಮಿತಾ ಬನಹಟ್ಟಿ.

ಸಕಲ ಭೋಗ ಭಾಗ್ಯವ ತೊರೆದು ಸರಳಜೀವಿಯಾದೆ
ಸಿದ್ಧಾರ್ಥನ ಮರೆಯಾಗಿಸಿ, ನಿನ್ನನರಿತ ನೀ ಬುದ್ಧನಾದೆ

ಜಗಕ್ಕೆಲ್ಲ ಅಹಿಂಸೆ ಮಾರ್ಗ ತೋರಿದ ಶಾಂತಿದೂತನೆ
ಭೊಧಿಸಿ ಜ್ಞಾನ, ಜನಮನದಲಿ ಮುಗ್ಧದಿ ನೆಲೆಸಿದವನೆ

ನಮ್ಮೆಲ್ಲರ ದ್ವಂದ್ವ ಪರಿಹರಿಸಲೆಂದೆ ಎದ್ದು ಬಂದವನೆ
ತನ್ನತನ ಕಳೆಯುವಷ್ಟು ಆಸೆ ಬೇಡೆಂದು ಸಾರಿದವನೆ

ಅತೃಪ್ತ ಮನಗಳಿಗೆ ಕಾರಣವು ತನ್ನ ಆಮಿಷಗಳೆಂದೆ
ಅವಗುಣ ಮೈಮರೆಯುವಷ್ಟು ಬೇಡ ಮೋಹವೆಂದೆ

ನೊಂದವರನು ಪ್ರೀತಿಸಿ ಸಂತೈಸಿದ ಮಾತೃಸ್ವರೂಪನೆ
ಸಂಸಾರ ದುಃಖದಿ ಮುಳುಗದಿರೆಂದು ಎಚ್ಚರಿಸಿದವನೆ

ಕ್ರೂರಿಯನು ಕ್ಷಮಿಸಿ ಪರಿವರ್ತಿಸಿದ ದಯಾಮಯನೆ
ಚೇತನ ಜಾಗೃತಗೊಳಿಸಿ ಬೆಳಕಿನೆಡೆ ಕರೆದೊಯ್ವವನೆ

ಮಾಡುವರಿಂದು ಪೂಜೆ, ಮರೆತು ನಿನ್ನ ಸಿದ್ಧಾಂತಗಳ
ತತ್ವದಂತೆ ನಡೆಯುವೆವು ಎಂದು ತೊಡಲಿ ಸಂಕಲ್ಪಗಳ.


ಸ್ಮಿತಾ ಬನಹಟ್ಟಿ.

One thought on “ಸ್ಮಿತಾ ಬನಹಟ್ಟಿ ಕವಿತೆ-ಬುದ್ಧ

  1. ಕ್ರೂರಿಯನು ಕ್ಷಮಿಸಿ ಪರಿವರ್ತಿಸಿದ ದಯಾಮಯನೆ ..ಸುಂದರ ಅಭಿವ್ಯಕ್ತಿ.ಅಷ್ಟೇ ಮಾರ್ಮಿಕವಾದ ಸಾಲುಗಳು ಸ್ಮಿತಾ.. ಅಭಿನಂದನೆಗಳು

Leave a Reply

Back To Top