ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ನಿನ್ನಲಿ ಶೀಘ್ರ ಕೋಪಗುಣವಿರೆ ಬರಲಿಬಿಡು ಸಹಜೀವಿ
ನಿನ್ನಲಿ ಅತೀ ಕಾಮಿಯಗುಣವಿರೆ ಇರಲಿಬಿಡು ಸಹಜೀವಿ
ಭುವಿಯೇ ಸಂಪೂರ್ಣ ದುಂಡಗಿಲ್ಲ ಸರಿಯಾವುದಿಲ್ಲ ಇಲ್ಲಿ
ನಿನ್ನಲಿ ಹಠ ಮಾಡುವ ಗುಣವಿರೆ ಮಾಡಿಬಿಡು ಸಹಜೀವಿ
ತನ್ನ ತಾನು ಪ್ರೀತಿಸದವ ಎನನೂ ಪ್ರೀತಿಸಲಾರ ಬದುಕಲಿ
ನಿನ್ನ ಅರಿವಿಗೆ ಮರೆಗುಳಿತನವಿರೆ ಮರೆತುಬಿಡು ಸಹಜೀವಿ
ನಿನ್ನ ಗುಣಗಳಿಂದ ಲೋಕದ ಇತರರಿಗೆ ತೊಂದರೆ ಇದೆಯೇ
ದುರ್ಗುಣಕೆ ಬಿಗಿ ತಡೆಯೊಡ್ಡಿ ನೀನು ಸಹಿಸಿಬಿಡು ಸಹಜೀವಿ
ಎಷ್ಟು ದುರ್ಗಣಗಳಿದ್ದರೇನು ಕಾಯದಿ ಸತ್ತಂತಾಗಿಸು
ಅವು ವಿಜೃಂಬಿಸದಂತೆ ನೋಡೆ ಬುದ್ಧಿಗೆಬಿಡು ಸಹಜೀವಿ
ಕೃಷ್ಣಾ! ನೀ ಹೇಗಿರುವೆಯೋ ಹಾಗೆಯೇ ಇರು ಚಿಂತಿಲ್ಲ
ಮುಖವಾಡರಹಿತ ಸ್ವ ನಿಜ ಚಹರೆಯ ಮೆರಸಿಬಿಡು ಸಹಜೀವಿ