ಗಂಗಾಧರ ಬಿ ಎಲ್ ನಿಟ್ಟೂರ್ ಕವಿತೆ-ವಿಪರ್ಯಾಸ

ಕಾವ್ಯ ಸಂಗಾತಿ

ಗಂಗಾಧರ ಬಿ ಎಲ್ ನಿಟ್ಟೂರ್

ವಿಪರ್ಯಾಸ

ಕಣ್ಣೀರು ಹಾಕುವ ಮೊಸಳೆಗಳು
ಹೆಗಲು ಏರಿ ಹಾರಿವೆ ಬಾನೆತ್ತರ

ಬಾಯಲ್ಲಿ ಪಾಸಿಟಿವ್ ಬೆಣ್ಣೆ
ಬಗಲಲ್ಲಿ ನೆಗೆಟಿವ್ ದೊಣ್ಣೆ
ಹಿಡಿದ ಗೋಸುಂಬೆಗಳು
ಮಿಂಚಿವೆ ಮಿರಮಿರ

ಗುಂಪಿಗೆ ಸೇರದ ವಿಜಾತಿ
ಜಾಣ ನರಿಗಳ ಕೊಳೆತ ವಾಸನೆ
ಸಭ್ಯತೆಯ ಗೋರಿಯೊಳಗೆ

ಪಾಪ ಮೂಳೆ ಸವೆಸಿಕೊಂಡ
ನಿಯತ್ತಿನ ನಾಯಿಗಳು
ಬೀದಿಗೆ ಬಿದ್ದು ಬಡಕಲಾಗಿವೆ
ಬಾಡೂಟದ ಮಾತು ಬದಿಗಾಯ್ತು
ಹೊತ್ತು ಕೂಳಿಗೂ ದಿಕ್ಕಿಲ್ಲ
ಬೀದಿ ಬದಿ ಜಾಗವಿಲ್ಲ
ಕಣ್ಣೆತ್ತಿ ನೋಡುವವರ ಸುಳಿವಿಲ್ಲ

ಸತ್ಯ ಬೊಗಳುವ ನಾಯಿಗೆ
ಸಂತಾನ ಹರಣ ಚಿಕಿತ್ಸೆ
ಇಲ್ಲವೇ ಗಡಿಪಾರು
ಮರು ಬೊಗಳುವ
ಧೈರ್ಯ ತೋರಿದರೆ ವಿಷಮದ್ದು

——————–

    One thought on “ಗಂಗಾಧರ ಬಿ ಎಲ್ ನಿಟ್ಟೂರ್ ಕವಿತೆ-ವಿಪರ್ಯಾಸ

    Leave a Reply

    Back To Top