ಆಶಾ ಯಮಕನಮರಡಿ ಕವಿತೆ-ವೀರಭದ್ರ

ಕಾವ್ಯ ಸಂಗಾತಿ

ಆಶಾ ಯಮಕನಮರಡಿ

ವೀರಭದ್ರ

ಬೆಲೆ ಏರಿಕೆ ಬಜಾರದಲ್ಲಿ
ಎಲ್ಲದರ ದರವು ದುಪ್ಪಟ್ಟು
ನಿನ್ನೆಯ ಬೆಲೆ ಇಂದಿಲ್ಲಾ
ನಾಳೆಯು ಹಾಗೆ ಇರುವುದಿಲ್ಲಾ

ದುಬಾರಿ ದುನಿಯಾದಲ್ಲಿ
ಇತನೊಬ್ಬನೆ ಅಗ್ಗದ ಸರಕು
ಪ್ರತಿಬಾರಿಯ ಮತದಾನಕ್ಕೂ
ಒಂದೆ ನೋಟಿನ ಸವಾಲು

ಎಷ್ಟು ದುಡಿದರೂ ಸಾಲದು
ಇವರಿಗೆ ಅದು ಗೊತ್ತಾಗದೆ
ಒಂದೆ ದಿನಕಾಗುವ ಸಾರಾಯಿ
ಬದುಕಿನುದ್ದದ ನೋವ ಮರೆಸಿತೆ

ನೂರಾರು ಚಿನ್ಹೆಗಳ ಬಾವುಟ
ಬಣ್ಣಗಳೆ ಅವರ ಸೂಚಕ
ನೂಲಿನೆಳೆಗಳೆ ಧರ್ಮ ಸಂಕೇತ
ಯಾರು ನಮ್ಮವರು ತಿಳಿಯದ ತಾಕಲಾಟ

ಬೇಡಿಕೆಗಳ ಕೂಗುತಿರುವ ಇತ
ತಥಾಸ್ತು ಎನ್ನುತ್ತಿರುವ ಆತ
ದಾನಮಾಡಿದವನಿಗ ಕೋಡಂಗಿ
ಪಡೆದು ಗೆದ್ದವನವ ವೀರಭದ್ರ


ಆಶಾ ಯಮಕನಮರಡಿ

Leave a Reply

Back To Top