ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೇ-ದಿನದ ವಿಶೇಷ

ಡಾ ಡೋ.ನಾ.ವೆಂಕಟೇಶ

ನಮ್ಮ ಮೇ ದಿನ

ಅರ್ಧ ಶತಮಾನದ ಹಿಂದೆ
ಹೀಗಿರಲಿಲ್ಲ ಆಧುನಿಕ ವೈದ್ಯಕೀಯ ವೃತ್ತಿ
ಇರಲಿಲ್ಲ ಇಲ್ಲಿ
ಕಾರ್ಮಿಕನ ಗತ್ತು

ಹಳೆ ಸೂಟು ಬೂಟು ಹಾಕಿ
ಹಳೆ ಹ್ಯಾಟು!
ರೋಗಿ ಮನೆ ಹಿರಿಯ
ಹಿಡಿದವನ ಬ್ಯಾಗು
ಹಿಂದೆ ಮುಂದೆ !

ಕಾಲ ಚಕ್ರ ಓಡಾಡಿದೆ ಇಲ್ಲೆ
ಈಗ
ಡಾಕ್ಟರ್ರು ಬರೆ
ತಾಪೇದಾರ್ರು

ಯಮ ಬದುಕಿಸಲಾಗದ ಜೀವಕ್ಕೆ ಜೀವ
ತುಂಬಲೇ ಬೇಕಿವನು
ಓದಿದ ಕಾರ್ಮಿಕನಿವನು
ನಮ್ಮ ದೇಹದ ಕಾವಲುಗಾರ

ಮೇ ದಿನಕ್ಕೊಂದು ಪ್ರಾರ್ಥನೆ
ಬಹುಜನರೆ
ನಿಮ್ಮ ಆರೋಗ್ಯ ರಕ್ಷಕರು ನಾವು
ಮೇ ದಿನ ಆಚರಿಸದಂತೆ
ಮೇ ದಿನ
ದಿನ ನಿತ್ಯ ಸ್ಮರಿಸುವವರು ನಾವೂ ಕಾರ್ಮಿಕರು


ಡಾ ಡೋ.ನಾ.ವೆಂಕಟೇಶ

About The Author

8 thoughts on “”

  1. Dr K B SuryaKumar

    ಉಳಿದವರ ಕೆಲಸಕ್ಕೆ ಸಮಯ ಮಿತಿ ಇದ್ದರೆ ವೈದ್ಯರು 24 ಗಂಟೆ ದುಡಿಯುವ ಕಾರ್ಮಿಕರು.. ಮೇ ದಿನದ ಶುಭಾಶಯಗಳು.

    1. D N Venkatesha Rao

      24×7 ದುಡಿಯುವ ‘ಕಾರ್ಮಿಕರು’ ಅನ್ನಿಸಿ ಕೊಳ್ಳದ ಕಾರ್ಮಿಕರು
      ಇನ್ನೂ ಚೆನ್ನಾಗಿ ಬರೆಯ ಬಹುದಿತ್ತು!
      Thanks Surya!

  2. ಮೇ ದಿನದ ಶುಭಾಶಯಗಳು.
    ಕವಿತೆ ತುಂಬಾ ಚೆನ್ನಾಗಿದೆ.
    ಶುಭವಾಗಲಿ.

Leave a Reply

You cannot copy content of this page

Scroll to Top