ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೇ-ದಿನದ ವಿಶೇಷ

ಡಾ.ಮಮತ (ಕಾವ್ಯಬುದ್ಧ)

ಅಲ್ಪ ತೃಪ್ತಿಗಳು ನಾವು

ಹಗಲಿರುಳೆನ್ನದೆ
ಕಷ್ಟ-ನಷ್ಟಗಳ ಲೆಕ್ಕಿಸದೇ
ದುಡಿದು ತಿನ್ನುವ ಕಾರ್ಮಿಕರು
ಅಲ್ಪ ತೃಪ್ತಿಗಳು ನಾವು

ಬಿಸಿಲು-ಗಾಳಿ-ಚಳಿ-ಮಳೆಗಳಿಗಂಜದೆ
ಕೃಷಿ ಕೈಗಾರಿಕೆ ಎಲ್ಲೆಡೆ ದುಡಿಯುತಾ
ನೋವು-ಕಷ್ಟಗಳ ದಹಿಸಿ
ಯಶಸ್ಸಿಗಾಗಿ ಪರಿತಪಿಸುತ್ತಾ
ನಿತಂತರ‌ ಕಾರ್ಯನಿರತ ಕಾರ್ಮಿಕರು
ಅಲ್ಪತೃಪ್ತಿಗಳು ನಾವು

ಬಿಡಿಗಾಸಿಗಾಗಿ ಶ್ರಮಿಸುವೆವು ದಿನನಿತ್ಯ
ಮಡದಿ-ಮಕ್ಕಳ ಪೋಷಿಸಲು
ತನ್ನವರಿಗಾಗಿ ಹೆಣಗಾಡುತಾ
ಸಂಸಾರ ನೌಕೆಯ ತೂಗಿಸಲು
ಹರಸಾಹಸ ಮಾಡುವ ಕಾರ್ಮಿಕರು
ಅಲ್ಪತೃಪ್ತಿಗಳು ನಾವು

ಯಾವುದೇ ಕೆಲಸ ಮಾಡಲು ಹಿಂಜರಿಯದೇ
ಫಲವನ್ನು ಬಯಸದ ಶ್ರಮಜೀವಿಗಳು
ದುಡಿಮೆಯೇ ದೇವರೆಂದು ನಂಬಿ
ದಣಿಯಯತಾ ದುಡಿದು ದಣಿಗಳಾಗುವೆವು
ಕಾರ್ಮಿಕರ ಪ್ರಗತಿಯ ಮುನ್ನೆಡೆಸುವ ಚಾಲಕರು
ಅಲ್ಪತೃಪ್ತಿಗಳು ನಾವು


ಡಾ.ಮಮತ (ಕಾವ್ಯಬುದ್ಧ)

About The Author

1 thought on “”

Leave a Reply

You cannot copy content of this page

Scroll to Top