ಮೇ-ದಿನದ ವಿಶೇಷ
ಗುಣಾಜೆ ರಾಮಚಂದ್ರ ಭಟ್
ಕಾಯಕ ಯೋಗಿ
ಉರಿಯುವ ಬಿಸಿಲಲಿ ಸುರಿಯುವ ಮಳೆಯಲಿ /
ವರನಿವ ದುಡಿವ ಕಾರ್ಮಿಕನು ..
ಶ್ರಮಿಕನ ದಿನವಿದು ನಮಿಸುವೆ ಯೋಗಿಗೆ
ದಮನವ ನೀನು ತಡೆಯುತಿರು..
ಕಾಯಕದಿಂದಲೆ ಕಾಯದ ಪೋಷಣೆ
ಸಾಯುವ ತನಕ ದುಡಿಯುತಿಹೆ..
ಬೆವರನು ಹರಿಸುತ ಗೈವನು ಹಗಲಲಿ
ಕವನವ ಬರೆದು ಸಲಿಸುವೆನು..
ಕ್ರಾಂತಿಗೆ ಕಾರಣ ಶಾಂತಿಯ ದೂತನು
ಕಾಂತಿಯು ಮೊಗದಿ ಬೆಳಗುತಿದೆ..
ಕೃಷಿಯನು ಮಾಡುತ ಹಸಿವನು ತಣಿಸುತ
ಶಿಶಿರದ ತಂಪ ಕೊಡುತಿರುವೆ..
‘ಬೆವರಿಗು ಬೆಲೆಯಿದೆ’ ಭವದಲಿ ಮಾತಿಗೆ
ದಿವಸವು ನೀನು ಮಾದರಿಯು ..
ಶಿಶಿರ =ತಂಪಾದ ಕಿರಣಗಳುಳ್ಳ ಚಂದ್ರ, ಹಿಮ,ಆರು ಋತುಗಳಲ್ಲಿ ಒಂದು.
ಗುಣಾಜೆ ರಾಮಚಂದ್ರ ಭಟ್