ಮೇ-ದಿನದ ವಿಶೇಷ

ಅನ್ನಪೂರ್ಣ ಹಿರೇಮಠ

ಕಾಯಕ ಯೋಗಿ

ಕಾಯಕಯೋಗಿ ಈತ ಸತ್ಯ ಕರ್ಮವಾ
ನಿತ್ಯ ಬಿಡದಲೇ ಗೈಯ್ಯುವ ಕಾಯಕಯೋಗಿ ಈತ //

ಶ್ರಮದ ಕೈಲವಾ ಎರೆವರು ದೇಶಾಭಿವೃದ್ಧಿಗೆ
ಹೆಗಲ ಕೊಟ್ಟು ನಡೆವರು ಎಲ್ಲರ ಬಾಳಿಗೆ
ಕಷ್ಟವನೆ ಇಷ್ಟಪಟ್ಟು ತಲೆಬಾಗಿ ದುಡಿಮೆಗೆ
ದುಡಿವರಿವರು ಎಲ್ಲರ ಮೂಲ ಅವಶ್ಯಕತೆಗೆ//

ನಿಸ್ವಾರ್ಥತೆ ನಿಯಮ ನೀತಿಯ ಬಿಡರು
ತನಗೆ ಎಲ್ಲಾ ಬೇಕೆಂದು ಏನೂ ಬಚ್ಚಿಡರು
ಪರಿಶ್ರಮದ ತೈಲವ ಎರೆಯುತಲೆ ಇರುವರು
ಬಿಂಕ ಬಿನ್ನಾಣ ಅಹಂನೆಂದು ತೋರರು//

ದನಿಯದ ಹಣೆಯಲಿ ಬೆವರಿನ ಮುತ್ತು
ದುಡಿಮೆಯ ಫಲದಲ್ಲಿ ತೃಪ್ತಿಯ ತುತ್ತು
ನಡೆನುಡಿಯಲಿ ತೋರರು ಎಂದೂ ಗತ್ತು
ಸ್ವೀಕರಿಸುತ ಸಾಗುವರು ಕಷ್ಟ ಸಮಸ್ಯೆಗಳ ಕುತ್ತು//

ದುಡಿಮೆಯಾ ನಂಬಿ ಇವರ ಬಾಳು
ನಗುತಲೆ ದುಡಿವರು ಮರೆತೆಲ್ಲ ಗೋಳು
ಇವರಿಗಿಲ್ಲ ಆಲಸ್ಯ ಮೈಗಳ್ಳತನದಾ ಗೀಳು 
ವೇಳೆಯನೆಂದೂ ಮಾಡರು ವ್ಯಯ ಹಾಳು//

ಕಾಯಕವೇ ಕೈಲಾಸ ನುಡಿಯೇ 
ಇವರ ಮಂತ್ರ
ದೇಹವಿದು ಸತ್ಯ ಶುದ್ಧತೆಯ ದುಡಿವ ಯಂತ್ರ
ಯೋಗಿ ಇವರು ಅರಿಯರು ಯಾವ ಕುತಂತ್ರ
ಯಾರ ವಿರುದ್ಧ ಹೆಣೆಯರೆಂದಿಗೂ ತಂತ್ರ//

ನೆರಳು ನೀಡುವ ಹಸಿರು ಮರದಂತೆ
ಪ್ರತಿಫಲವ ಬಯಸದ ಭುವಿಯಂತೆ
ಹೊತ್ತು ಪೊರೆಯುವ ಹೆತ್ತ ತಾಯಿಯಂತೆ
ಜಗಕಿಯವರೆಂದಿಗೂ ಗಟ್ಟಿಯಾದ ಬೆನ್ನೆಲುಬಂತೆ//


ಅನ್ನಪೂರ್ಣ ಹಿರೇಮಠ

4 thoughts on “

  1. ಸಹೋದರಿ ಸೌ ಅನ್ನಪೂರ್ಣ ಅವರೆ, ನಮಸ್ಕಾರಗಳು.
    ಕವನ ಭಾಳ ಛಲೋ ಬರದೇರಿ.ಇಂದು
    ಮೇ 1 ಕಾರ್ಮಿಕ ದಿನಾಚರಣೆಗೆ ನಿಮ್ಮ ಕವನ ಒಂದು ಕಿರೀಟವೇ ಸರಿ.ಸದಾ ಬರೆಯುತ್ತಿರಿ.ದೇವರು ನಿಮಗೆ ಸದಾ ಒಳ್ಳೆಯದನ್ನೇ ಮಾಡಲಿ ಎಂದು ಹಾರೈಸುತ್ತೇನೆ.

  2. ಬಹಳ ಚೆನ್ನಾಗಿ ಕವನ ಮೂಡಿ ಬಂದಿದೆ ಅಭಿನಂದನಗಳು

Leave a Reply

Back To Top