ಮೇ-ದಿನದ ವಿಶೇಷ

ನಿಲೀಷಾ ಪ್ರೀಮಾ

ಕಾರ್ಮಿಕ ನೀನೇ ನಾಯಕ

ಕೆಲಸ ಯಾವುದಾದರೇನು
ಪ್ರಿಯ ನೀ ದೇವರಿಗೆ
ದುಡಿದು ತಿನ್ನು ಮನುಜ
ಜೀವನದ ಕೊನೆವರೆಗೆ

ಸಮಾಜಕ್ಕೆ ಕಾರ್ಮಿಕ ನೀನು
ಮನೆಯಲ್ಲಿ ಸಾಹುಕಾರ ನೀನು
ದುಡಿಯುವ ಕಾರ್ಯವು ಯಾವುದಾದರೇನಂತೆ
ಮನಕೆ ಸಂತೋಷ ಸಿಗುವಂತಿರಬೇಕು

ಇಡೀ ವರ್ಷ ಕಷ್ಟ ಪಡುವೆ
ಆಚರಿಸು ನಿನ್ನ ದಿನವ
ಮೇ ದಿನವು ನಿನಗಾಗಿ ಮುಡಿಪು
ಬೇಸರ ಪಡದಿರು ಕರೆವಾಗ ‘ಕಾರ್ಮಿಕ’


ನಿಲೀಷಾ ಪ್ರೀಮಾ

Leave a Reply

Back To Top