ಕಾವ್ಯ ಸಂಗಾತಿ
ನನ್ನವ್ವ
ನನ್ನವ್ವ ಬ್ರಹ್ಮಾಂಡವೆನೆಗೆ
ವಿಶ್ವ ಅವಳು
ನೋವು ನಲಿವು
ಸುಖ ದುಃಖ
ದುಃಖ ದುಮ್ಮಾನಗಳ
ತನ್ನಲುದುಗಿಸಿಕೊಂಡ
ಮುತ್ತಿನ ಚಿಪ್ಪು
ನನ್ನವ್ವ
ದೊಡ್ಡ ಮನಸ್ಸಿನ ಉದಾರ ಜೀವಿ
ಜೀವನ ಹಾದಿಯುದ್ದಕ್ಕೂ ನನ್ನ
ಕೈ ಹಿಡಿದು ನಡೆಸುತ್ತಿರುವ
ಪ್ರಬಲ ಜಗತ್ತಿನಲ್ಲಿ
ನಾನು ಸಬಲನಾಗಿರುವಂತೆ
ಸದಾ ಆಕಾಶ ಭೂಮಿಯಂತೆ
ಕಾಯುವಳು
ನನ್ನವ್ವನ
ತಾಳ್ಮೆ ಗಾಂಭೀರ್ಯ
ಉದಾರ ಮನಸ್ಸು
ಮೌನ ದಿಟ್ಟ ನುಡಿ
ಅವಳ ಹೋರಾಟ
ನನ್ನ ಜೀವನಕ್ಕೆ
ಸ್ಫೂರ್ತಿ
ನನ್ನ ಜೀವನ ತೆರೆಯ
ಭಾವಶಿಲ್ಪಿ
ನನಗೆ ಯಾವಾಗಲೂ
ಉತ್ಸಾಹಿಯಾಗಿರುವಂತೆ
ಹಿರಿಯರ ಪೂಜಿಸುವ
ಕಿರಿಯರ ಗೌರವಿಸುವ
ಸದಾ ಶಾಂತಿಯಿಂದ
ಇರುವಂತ ಗುಣಗಳನ್ನು ಕಡೆದ ಶಿಲ್ಪಿ ನನ್ನವ್ವ
ಹಾಲಿನಂತ ಮನಸು
ತ್ಯಾಗದ ಮನೋಭಾವ
ಜೀವನದ ಹಾದಿಲಿ ಎಷ್ಟೇ
ಕಷ್ಟ ನೋವು ನಲಿವು ಬಂದರೂ
ಸದಾ ತಾಳ್ಮೆಯಿಂದ ಎದುರಿಸುವ ಗುಣ ಹೊಂದಿರುವ
ಭವ್ಯ ಪ್ರಶಾಂತ
ಶಾಂತಿ ತುಂಬಿದ
ಮಹಾ ಸಾಗರ ನನ್ನವ್ವ
—————————
ಅಭಿಷೇಕ ಬಳೆ ಮಸರಕಲ್
ಅಭಿಷೇಕ್ ಬಳೆ ಮಸರಕಲ್ ಅವರ ನನ್ನವ್ವ ಕವಿತೆ ಅದ್ಭುತ…. ಅಭಿನಂದನೆಗಳು
Very nice
appi