ಕಾವ್ಯ ಸಂಗಾತಿ
ನರಸಿಂಗರಾವ ಹೇಮನೂರ
ಮನಕ್ ಮೆಚ್ಚಿ ಮತ ಹಾಕ್ರಿ

ಆ ಪಾರ್ಟಿ ಈ ಪಾರ್ಟಿ
ಯಾ ಪಾರ್ಟಿ ನಮಗೇನು?
ಯಾರ ಬಂದ್ರೂ ಆಗೂದರ ಏನು?
ಎಲ್ಲ ಇದ್ದಂಗ ಇರ್ತದ, ಆಗಂಗ ಆಗ್ತದ
ಅಂತ ಸುಮ್ನ ಕೂಡಬ್ಯಾಡ್ರಿ
ಖರೇ ಅಂದ್ರ ಹೀ೦ಗ ಅನಕೋತ
ಓಟ ಹಾಕದ ಮನ್ಯಾಗ ಕೂತು
ನಮ್ಮ ಹಕ್ಕ ಕಳ್ಕೊಂಡು
ಮುಂದಿನ ಐದು ವರ್ಷ ತನಕ
ಒದ್ದಾಡತೀವಿ
ನಮಗೆಂತ ಸರಕಾರ ಬೇಕು
ಎಂಥವರನ್ನು ಆರಸಬೇಕು
ಅನ್ನೋದನ್ನ ವಿಚಾರ ಮಾಡಲಾರದ
ಎಡವಟ್ಟು ಮಾಡ್ಕೊಂಡಿವಿ
ಇನ್ನಾದರೂ ಶಾನ್ಯಾರಾಗರಿ
ನಿಮ್ಮ ಹಕ್ಕು ಚಲಾಯಿಸ್ರಿ
ಮತದಾನ ಮಾಡ್ರಿ
ಯಾರೋ ಏನೋ ಕೊಡ್ತಾರಂತ
ಅವರ ಹಂಗಿನ್ಯಾಗ ಬೀಳಬ್ಯಾಡ್ರಿ
ಮನಕ ಮೆಚ್ಚಿ ಮತ ಹಾಕ್ರಿ
ಒಳ್ಳೆಯವರನ್ನು ಆರಿಸಿ ತರ್ರಿ
ಅಂದ್ರ ನಾವೂ ಉದ್ಧಾರ ಆಗ್ತಿವಿ
ನಾಡು ಉದ್ಧಾರ ಆಗ್ತದ.
ನರಸಿಂಗರಾವ ಹೇಮನೂರ
