ಗಾಯಿತ್ರಿ ಮೋ ಬಡಿಗೇರ-ಬಳಲುತ್ತಿದೆ ಭೂಮಿ

ಕಾವ್ಯ ಸಂಗಾತಿ

ಗಾಯಿತ್ರಿ ಮೋ ಬಡಿಗೇರ

ಬಳಲುತ್ತಿದೆ ಭೂಮಿ

ಇಂದಿನ ಶತಮಾನದಲ್ಲಿ
ಈಗಿನ ಪೀಳಿಗೆಯಲ್ಲಿ
ಹೊಂದಲಾಗದ ಮಣ್ಣಿನ ಗುಣಕೆ
ತ್ಯಾಜ್ಯ ವಸ್ತುಗಳ ಬಳಿಕೆ
ಅಳಿದು ಕರಗಿ ಹೋಗದೆ
ಭೂತಾಯಿ ಕುತ್ತಿಗೆಯಲ್ಲಿ ಬಿಗಿದು
ನರಳಿ ನರಳಿ ಬಳಲುತ್ತಿದೆ ಭೂಮಿ

ಕೊಳೆಯಾ ಕೊಚ್ಚುವ ನೀರಲ್ಲಿ
ಹರಿಯುವ ಗಂಗೆಯಲ್ಲಿ
ಕಾರ್ಖಾನೆ ತ್ಯಾಜ್ಯ ವಸ್ತುಗಳ ಗುಂಪು
ಮೈದೊಳೆಯುವ ವಿವಿಧ ಸೋಪು
ಭೂ ತಾಯಿ ಚೊಚ್ಚಲ ಮಗಳ
ಕಣ್ಣಿರಲ್ಲಿ ಕರಗಿ ಮರಳಾಗದೆ
ಬಳಲುತ್ತಿದೆ ಭೂಮಿ

ಕಾಲನಡಿಗೆ ದೂರಾಗಿ
ಎತ್ತಿನ ಚಕ್ಕಡಿ ಕಾಣಿಯಾಗಿ
ಕಣ್ಣಮುಸುಕುವ ದೂಳಾಗಿ
ವಾಹನ ಉಗುಳುವ ಹೊಗೆ
ಪ್ರಕೃತಿಯ ಸೌಂದರ್ಯ ಮರೆಯಾಗಿ
ತನ್ನ ಅಳನ್ನ ತೊಡದೆ
ಕೊರಗಿ ಕೊರಗಿ ಬಳಲುತ್ತಿದೆ ಭೂಮಿ

ಉಷ್ಣದ ತಾಪ ಹೆಚ್ಚಾಗಿದೆ ರಾಸಾಯನಿಕ ಬಳಿಕೆ ಮಿತಿಮೀರಿದೆ
ಪ್ರಕೃತಿಯ ವಿಕೋಪ ಮುಗಿಲೆಳುತ್ತಿದೆ
ಕಾಡು ಕಾದು ಬೆಂಕಿ ಉದ್ಭವಿಸುತ್ತಿದೆ
ಹಸಿರು ಉಟ್ಟ ಭೂತಾಯಿ
ಸುಟ್ಟು ಕರಕಲಾಗಿ ಬಳಲುತ್ತಿದೆ ಭೂಮಿ

ಹಲವು ಚಿಂತಕರ ಸಾಧನೆ ವಿಜ್ಞಾನಗಳ ತಂತ್ರಜ್ಞಾನ
ಭೂಮಿ ಸಾಲದೇ ಆಕಾಶದಲ್ಲಿ ಸಿಡಿದೆಳಿಸುವ ಸಿಡಿಮದ್ದಿನ
ರಾಕೇಟಗಳ ಉಡಾವಣೆ ಓಝೋನ್ ಪದರಿನ ಅಪಾಯದಲ್ಲಿ ಬಳಲುತ್ತಿದೆ ಭೂಮಿ

ಹಸಿರು ಇಲ್ಲದೆ ಭೂತಾಯಿ ಹಸಿರು ಸೆರಗಾಸಿದ ಮಹಾತಾಯಿ
ಉಸಿರು ನೀಡಿ ರಕ್ಷಿಸಿದ ಪುಣ್ಯ ತಾಯಿ
ಪಂಚ ಮಹಾ ಭೂತ ಶುದ್ಧಿಯಿಲ್ಲದೆ
ಬೆಂಕಿ ಗಾಳಿ ನೀರು ಆಕಾಶ ಕಲುಷಿತವಾಗಿ
ಭೂಮಿ ನರಳಿ ನರಳಿ ಬಳಲುತ್ತಿದೆ

—————-

One thought on “ಗಾಯಿತ್ರಿ ಮೋ ಬಡಿಗೇರ-ಬಳಲುತ್ತಿದೆ ಭೂಮಿ

Leave a Reply

Back To Top